ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಧ್ಯಂತರ ಚುನಾವಣೆ ಫಲಿತಾಂಶ 
ವಿದೇಶ

ಚುನಾವಣೆಯಲ್ಲಿ ಸೋತು ಸುಣ್ಣಾದ ರಿಪಬ್ಲಿಕನ್ಸ್​​​​: ‘ಬ್ಯಾಲೆಟ್‌ನಲ್ಲಿ ನನ್ನ ಹೆಸರಿದ್ದರೆ ಗೆಲುವು ನಮ್ಮದಾಗಿತ್ತು’; ಟ್ರಂಪ್​ ವಿಚಿತ್ರ ಸಮರ್ಥನೆ! Donald Trump

ವಾಷಿಂಗ್ಟನ್​: ಸದ್ಯ ಅಮೆರಿಕದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನೇತೃತ್ವದ ರಿಪಬ್ಲಿಕ್​ ಪಕ್ಷ ಸೋಲನ್ನು ಕಂಡಿದ್ದು, ಡೆಮೊಕ್ರಾಟಿಕ್​ ಪಕ್ಷ ಮುಂದಿನ ಅಧ್ಯಕ್ಷ ಚುನಾವಣೆಗೆ ತಾವು ಸಜ್ಜಾಗಿದ್ದೇವೆಂದು ಸ್ಪಷ್ಟ ಸಂದೇಶ ರವಾನಿಸಿದೆ.

ಮಧ್ಯಂತರ ಚುನಾವಣೆಯಲ್ಲಿ ಸೋಲನ್ನು ಕಂಡ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಟ್ರಂಪ್​, ಬ್ಯಾಲೆಟ್​ ಪೇಪರ್​ನಲ್ಲಿ ನನ್ನ ಹೆಸರಿದ್ದರೆ, ನಮ್ಮ ಪಕ್ಷ ಖಂಡಿತವಾಗಿ ಭಾರೀ ಬಹುಮತದಿಂದ ಗೆಲ್ಲುತ್ತಿದ್ದೆವು. ಈ ವಿಷಯದ ಕಡೆ ಗಮನ ಹರಿಸಿದ್ದಕ್ಕಾಗಿ ಧನ್ಯವಾದ ಎಂದು ಟ್ರಂಪ್​ ತಮ್ಮ ಟ್ರೂತ್ ಸೋಷಿಯಲ್​, ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಅಧ್ಯಕ್ಷೀಯ ಚುನಾವಣೆ ನಡೆದ ಸರಿಯಾದ ಎರಡು ವರ್ಷಕ್ಕೆ ನಡೆಯುವ ಮಧ್ಯಂತರ ಚುನಾವಣೆಯಲ್ಲಿ, ಅಧ್ಯಕ್ಷರ ಪಕ್ಷ ಸೋಲನ್ನು ಕಂಡಿರುವ ಹಿನ್ನಲೆ, ಜನರಲ್ಲಿ ರಿಪಬ್ಲಿಕ್​ ಪಕ್ಷದಲ್ಲಿ ನಂಬಿಕೆ ಇಲ್ಲವೆಂದು ಡೆಮೊಕ್ರಾಟಿಕ್​ ಪಕ್ಷ ಸಮರ್ಥಿಸಿಕೊಂಡಿದೆ.

ಸೆನೆಟ್​, ಹೌಸ್​ನಲ್ಲಿ ಡೆಮೊಕ್ರಾಟಿಕ್​ ಜಯಭೇರಿ!

ಇನ್ನು ಈ ಮಧ್ಯಂತರ ಚುನಾವಣೆಯಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​​ನ 435, ಸೆನೆಟ್​ನ 35 ರಷ್ಟು ( ಸೆನೆಟ್​ ಸದಸ್ಯರ ಸಂಖ್ಯೆ 100) ಹಾಗೂ 36 ಗವರ್ನರ್​ ಸ್ಥಾನಗಳಿಗೆ ಮತದಾನ ನಡೆದಿದೆ. ಇದರಲ್ಲಿ, ಹೌಸ್​ ಆಫ್​ ರೆಪ್ರೆಸೆಂಟೇಟಿವ್ಸ್​ನಲ್ಲಿ 220 ಸ್ಥಾನಗಳಲ್ಲಿ ಡೆಮೊಕ್ರಾಟಿಕ್​ ಪಕ್ಷ ಗೆಲುವನ್ನು ಸಾಧಿಸಿದರೆ, ಸೆನೆಟ್​ನ ಬಹುಮತಕ್ಕೆ 50 ಸ್ಥಾನಗಳ ಅಗತ್ಯವಿದ್ದು, ಇದರಲ್ಲಿ 53 ಸ್ಥಾನಗಳಲ್ಲಿ ಡೆಮೊಕ್ರಾಟಿಕ್​ ವಿಜಯ ಪತಾಕೆ ಹಾರಿಸಿದೆ. ಇನ್ನು ಗವರ್ನರ್​ ಚುನಾವಣೆಯಲ್ಲಿ ಕೂಡ 25 ಸ್ಥಾನಗಳಲ್ಲಿ ಗೆಲುವನ್ನು ದಾಖಲಿಸಿ ಬಹುಮತದತ್ತ ಹೆಚ್ಚೆಯಿಡುತ್ತಿದೆ.

ಗವರ್ನರ್​ ಸ್ಥಾನ ಸೋತ ರಾಮಸ್ವಾಮಿ!

ಇನ್ನೂ ಈ ಮಧ್ಯಂತರ ಚುನಾವಣೆಯಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದ ಭಾರತೀಯ ಮೂಲದ, ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆಪ್ತ ವಿವೇಕ್​ ರಾಮಸ್ವಾಮಿ ಓಹಿಯೋ ಗವರ್ನರ್​​ ಸ್ಥಾನಕ್ಕೆ ಸ್ಪರ್ಧಿಸಿ, ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಇವರು ಈ ಚುನಾವಣೆ ಸಲುವಾಗಿ ಸುಮಾರು 300 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದ್ದರು.

Republicans ಆದರೆ, ಎಷ್ಟೇ ಹಣವನ್ನು ಖರ್ಚು ಮಾಡಿದರೂ, ಡೆಮಾಕ್ರಟಿಕ್ ಪಕ್ಷದ ಸ್ಪರ್ಧಿ ವೈದ್ಯೆ ಡಾ. ಆಮಿ ಆಕ್ಟನ್ ವಿರುದ್ಧ ಸೋಲನ್ನು ಕಾಣಬೇಕಾಗಿದೆ. ಈ ಓಹಿಯೋ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್​ ಅವರ ತವರು ರಾಜ್ಯವಾಗಿದ್ದು, ಇದು ಸಾಂಪ್ರದಾಯಿಕವಾಗಿ ರಿಪಬ್ಲಿಕನ್ನರ ಭದ್ರಕೋಟೆಯಾಗಿತ್ತು. ಆದರೆ ಕೋವಿಡ್​ ಸಂದರ್ಭದಲ್ಲಿ ಡಾ. ಆಮಿ ಆಕ್ಟನ್ ಮಾಡಿದ್ದ ಸೇವೆಯನ್ನು ಮರೆಯದ ಮತದಾರ ಆಕ್ಟನ್ ಅವರನ್ನು ಗೆಲ್ಲಿಸುವ ಮೂಲಕ ಓಹಿಯೋ ರಾಜ್ಯದ ಗವರ್ನರ್ ಪಟ್ಟಕ್ಕೇರಿದ ಮೊದಲ ಮಹಿಳೆ ಎಂಬ ಐತಿಹಾಸಿಕ ದಾಖಲೆಗೆ ಕಾರಣಿಭೂತರಾಗಿದ್ದಾರೆ, (ಏಜೆನ್ಸೀಸ್​).