ಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 
ವಿದೇಶ

ಪುಟಿನ್-ನೆತನ್ಯಾಹು ಮಾತುಕತೆ; ಗಾಜಾದಲ್ಲಿನ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಿದ ಉಭಯ ನಾಯಕರು| Gaza

ಟೆಲ್​ ಅವಿವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಅಲ್ಲದೆ, ಈ ಸಮಯದಲ್ಲಿ ಇಬ್ಬರೂ ನಾಯಕರು ಗಾಜಾದಲ್ಲಿನ (Gaza)ಪರಿಸ್ಥಿತಿಯ ಕುರಿತು ಚರ್ಚಿಸಿದರು ಎಂದು ಉಭಯ ದೇಶಗಳ ಹೇಳಿಕೆಗಳು ತಿಳಿಸಿವೆ.
ಈ ಬಗ್ಗೆ ಎಕ್ಸ್​ ಪೋಸ್ಟ್ ಮಾಡಿರುವ ನೆತನ್ಯಾಹು ಕಚೇರಿಯು,​ ಪ್ರಾದೇಶಿಕ ವಿಷಯಗಳ ಕುರಿತು ಹಿಂದಿನ ಸರಣಿ ಮಾತುಕತೆಗಳ ನಂತರ ಶನಿವಾರ ಸಂಜೆ ಪುಟಿನ್ ಜತೆ ಮಾತನಾಡಿದ್ದಾರೆ ಎಂದು ಕಚೇರಿ ಹೇಳಿದೆ. ಅಲ್ಲದೆ, ಈ ಮಾತುಕತೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಅದು ನೀಡಿಲ್ಲ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ರಷ್ಯಾದ ಅಧ್ಯಕ್ಷತೆಯ ಪ್ರಕಾರ, ಉಭಯ ನಾಯಕರು ಕದನ ವಿರಾಮದ ಹಿನ್ನೆಲೆಯಲ್ಲಿ ಗಾಜಾದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಸಿರಿಯಾ ವಿಷಯ ಸೇರಿದಂತೆ ಇತರ ವಿಷಯಗಳ ಬಗ್ಗೆ ವಿವರವಾಗಿ ವಿನಿಮಯ ಮಾಡಿಕೊಂಡಿದ್ದಾರೆ.
ರಷ್ಯಾ ಗಾಜಾ ಕುರಿತು ತನ್ನದೇ ಆದ ಕರಡು ವಿಶ್ವಸಂಸ್ಥೆ ನಿರ್ಣಯವನ್ನು ಮಂಡಿಸಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಗಾಜಾ ಶಾಂತಿ ಯೋಜನೆಯನ್ನು ಬೆಂಬಲಿಸುವ ಪ್ರತ್ಯೇಕ ಪ್ರಸ್ತಾವನೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಅನುಮೋದಿಸಬೇಕೆಂಬ ಅಮೆರಿಕದ ಒತ್ತಾಯವನ್ನು ಪ್ರಶ್ನಿಸಿತು. ಅಲ್ಲದೆ, ಅಮೆರಿಕದ ಪ್ರಸ್ತಾವನೆಯು ಗಾಜಾದಲ್ಲಿ ವಿಶ್ವಸಂಸ್ಥೆಯಿಂದ ವ್ಯಾಪಕ ಸ್ವಾತಂತ್ರ್ಯದೊಂದಿಗೆ ಅಂತರರಾಷ್ಟ್ರೀಯ ಪಡೆಯನ್ನು ಬಯಸುತ್ತದೆ. ಇಸ್ರೇಲ್‌ಗೆ ಗಾಜಾ ಸುತ್ತಮುತ್ತಲಿನ ಭದ್ರತಾ ಮೇಲೆ ಅನಿರ್ದಿಷ್ಟ ಅವಧಿಗೆ ನಿಯಂತ್ರಣವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದು ರಷ್ಯಾ ಹೇಳಿದೆ.
ಈ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಈ ನಿರ್ಣಯವನ್ನು ಅಂಗೀಕರಿಸಲಾಗುವುದು ಎಂಬ ಆಶಾವಾದವನ್ನು ಹೊಂದಿರುವುದಾಗಿ ಹೇಳಿದರು. ಇದರ ಭಾಷೆಯ ಕುರಿತು ಮಾತುಕತೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಲಾಗುತ್ತಿದೆ ಎಂದಿದ್ದಾರೆ.
ಅದರೆ, ರಷ್ಯಾದ ಪ್ರಸ್ತಾವನೆಯು ನೇರ ವಿಶ್ವಸಂಸ್ಥೆಯ ಅಧಿಕಾರದ ಅಡಿಯಲ್ಲಿ ಅಂತರರಾಷ್ಟ್ರೀಯ ಪಡೆಯನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಗಾಜಾದಲ್ಲಿ ಯಾವುದೇ ಜನಸಂಖ್ಯಾ ಅಥವಾ ಪ್ರಾದೇಶಿಕ ಬದಲಾವಣೆಗಳನ್ನು ವಿರೋಧಿಸುತ್ತದೆ ಮತ್ತು ಎರಡು ದೇಶಗಳ ಪರಿಹಾರವನ್ನು ಜಾರಿಗೆ ತರಲು ಒತ್ತಾಯಿಸುತ್ತದೆ,(ಏಜೆನ್ಸೀಸ್).