ಮೊಜ್ತಬಾ ಖಮೇನಿ 
ವಿದೇಶ

ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಶೀಘ್ರದಲ್ಲೇ ಜನರ ಮುಂದೆ ಪ್ರತ್ಯಕ್ಷ ಸಾಧ್ಯತೆ | Mojtaba Khamenei

ಟೆಹ್ರಾನ್: ಇರಾನ್ ಸುಪ್ರೀಂ ಲೀಡರ್ ಆದ ಬಳಿಕ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿರುವ ಮೊಜ್ತಬಾ ಖಮೇನಿ(Mojtaba Khamenei) ಶೀಘ್ರದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ಭಾನುವಾರ(ಜು. 12) ವರದಿಯಾಗಿದೆ.
ಜುಲೈ 23ರಂದು ಟೆಹ್ರಾನ್‌ನಲ್ಲಿ ಮಾಜಿ ಇರಾನಿನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸ್ಮರಣಾರ್ಥ ಸಮಾರಂಭವನ್ನು ಮೊಜ್ತಬಾ ನಡೆಸಲಿದ್ದಾರೆ. ಸಂಜೆ 5 ರಿಂದ 7ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಸುಪ್ರೀಂ ಲೀಡರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇಲ್ಲಿಯವರೆಗೂ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ತಮ್ಮ ತಂದೆಯ ಅಂತ್ಯಕ್ರಿಯೆಯಿಂದಲೂ ಭದ್ರತಾ ಕಾರಣಗಳಿಗಾಗಿ ದೂರ ಉಳಿದಿದ್ದರು. ಎರಡು ವಾರಗಳ ಹಿಂದೆ ಮೊಜ್ತಬಾ ಅವರ ಪತ್ನಿಯ ಅಂತ್ಯಕ್ರಿಯೆಗೂ ಗೈರುಹಾಜರಾಗಿದ್ದರು.
ಫೆ. 28ರಂದು ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಲಿ ಖಮೇನಿ ಸೇರಿ ಮೊಜ್ತಬಾ ಪತ್ನಿ ಮತ್ತು ಒರ್ವ ಮಗಳು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೊಜ್ತಬಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಾ ಪತ್ರಿಕಾ ಹೇಳಿಕೆಗಳನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ. ಮತ್ತು ಇತ್ತೀಚೆಗೆ ತಮ್ಮ ತಂದೆಯ ಸಾವಿನ ಸೇಡನ್ನು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದರು (ಏಜೆನ್ಸೀಸ್).