ನಾವು ಸರ್ಕಾರವನ್ನು ಬೆಂಬಲಿಸಬೇಕು: ಶಾಹಿದ್ ಅಫ್ರಿದಿ
- ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧ
- ಪಾಕಿಸ್ತಾನದಲ್ಲಿ ಪೆಟ್ರೋಲ್ ಲೀ.458 ಡೀಸೆಲ್ ಲೀ. 520 ರೂಪಾಯಿ
- ನಾವು ಸರ್ಕಾರವನ್ನು ಬೆಂಬಲಿಸಬೇಕು: ಶಾಹಿದ್ ಅಫ್ರಿದಿ
ಪಾಕಿಸ್ತಾನ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಅಲ್ಲಿಯ ಪ್ರದೇಶಕಷ್ಟೇ ಅಪಾಯವನ್ನು ಉಂಟುಮಾಡದೇ ಈಡೀ ಪ್ರಪಂಚವನ್ನು ಆಪತ್ತಿಗೆ ನೂಕುತ್ತಿದೆ.
ಹೋರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿರುವ ಕಾರಣ ಜಾಗತಿಕ ತೈಲ ಹಾಗೂ ಇಂಧನ ಮಾರುಕಟ್ಟೆಯಲ್ಲಿ ಭಾರಿ ಏರುಪೇರು ಉಂಟಾಗುತ್ತಿದ್ದು, ಇದರಿಂದ ಪೆಟ್ರೋಲ್,ಡೀಸೆಲ್ ಬೆಲೆಗಳು ಮುಗಿಲು ಮುಟ್ಟುತ್ತಿವೆ. ಪಶ್ಚಿಮ ಏಷ್ಯಾದ ಯುದ್ಧದ ಕಾರಣ ಆರ್ಥಿಕ ದಿವಾಳಿತನದತ್ತ ಪಾಕಿಸ್ತಾನ ಹೆಜ್ಜೆ ಹಾಕುತ್ತಿದ್ದು, ಈ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ (Shahid Afridi) ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಪೆಟ್ರೋಲ್ 458 ಆಗಿದೆ; ನಾನು ಸರ್ಕಾರವನ್ನು ಬೆಂಬಲಿಸಬೇಕು
ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾಗುತ್ತಿರುವ ಕುರಿತು ಮಾತನಾಡಿರುವ ಅಫ್ರಿದಿ, ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಪ್ರಪಂಚದ ತೈಲ ಮಾರುಕಟ್ಟೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದು ಕೇವಲ ಪಾಕಿಸ್ತಾನಕ್ಕೆ ಮಾತ್ರವಲ್ಲ, ಈಡೀ ಪ್ರಪಂಚವನ್ನೇ ಆವರಿಸಿದೆ. ಇಂದು ಪಾಕಿಸ್ತಾನದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 137 ರೂಪಾಯಿ ಹೆಚ್ಚಳವಾಗುವ ಮೂಲಕ 458 ರೂಪಾಯಿಯಾಗಿದೆ.
ಹಾಗೆಯೇ ಡೀಸೆಲ್ ಬೆಲೆಯಲ್ಲಿ 184 ರೂಪಾಯಿ ಏರಿಕೆಯಾದ ಪರಿಣಾಮ ಲೀಟರ್ ಡೀಸೆಲ್ ಬೆಲೆ 520 ರೂಪಾಯಿಯಾಗಿದೆ. ಆದರೆ ಈ ಕಷ್ಟದ ಸಂದರ್ಭದಲ್ಲಿ ನಾವು ಸರ್ಕಾರವನ್ನು ಬಯ್ಯುವಬದಲು, ರಾಷ್ಟ್ರ ರಕ್ಷಣೆಗಾಗಿ ದುಡಿಯುತ್ತಿರುವ ಸರ್ಕಾರಕ್ಕೆ ಬೆಂಬಲ ಸೂಚಿಸಬೇಕೆಂದು ಹೇಳಿದ್ದಾರೆ.
ಇದು ನಮಗೆ ಸಂಕಷ್ಟದ ಸಮಯ
ಪ್ರಸ್ತುತ ಜಾಗತಿಕ ರಾಜಕಾರಣದಲ್ಲಿ ಭಾರಿ ಬದಲಾವಣೆ ನಡೆಯುತ್ತಿದ್ದು, ನಮಗೆ ಇದು ಸಂಕಷ್ಟದ ಸಮಯವಾಗಿದೆ. ಈ ಸಂದರ್ಭದಲ್ಲಿ ನಾವು ತಾಳ್ಮೆ ವಹಿಸಿದರೇ ಖಂಡಿತವಾಗಿ ನಾವು ಸುಖಕರ ಜೀವನ ನಡೆಸಲು ಸಾಧ್ಯವಿದೆ ಎಂದು ಅಫ್ರಿದಿ ಹೇಳಿದ್ದಾರೆ, (ಏಜನ್ಸೀಸ್).