ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್
ಇಸ್ಲಾಮಾಬಾದ್: ಶಾಂತಿ ಮಾತುಕತೆಗಾಗಿ ಪಾಕಿಸ್ತಾನದ ಇಸ್ಲಾಮಾಬಾದ್ಗೆ ಆಗಮಿಸಿದ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ನೇತೃತ್ವದ ಇರಾನ್ ನಿಯೋಗ, ಯುಸ್-ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ 168 ಮಿನಾಬ್ ಶಾಲೆಯ ಬಾಲಕಿಯರನ್ನು ಸ್ಮರಿಸಿ, ವಿಮಾನದಲ್ಲಿ ಅವರ ಫೋಟೋ ಮತ್ತು ರಕ್ತಸಿಕ್ತ ಬ್ಯಾಗ್ಗಳನ್ನಿರಿಸಿಕೊಂಡು ಬಂದಿದೆ.
ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರ ಎಕ್ಸ್ ಖಾತೆಯಲ್ಲಿ ಪೋಟೋವೊಂದನ್ನು ಶೇರ್ ಮಾಡಿಕೊಂಡಿದ್ದ, ಅದು ಅಕ್ಷರಶಃ ಎಲ್ಲರ ಗಮನ ಸೆಳೆದಿದ್ದು, ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಅದಕ್ಕೆ ಇವರು ನಮ್ಮೊಂದಿಗಿನ ಸಹ ಪ್ರಯಾಣಿಕರು ಎಂದು ಕ್ಯಾಪ್ಷನ್ ಕೊಟ್ಟು, ಮಿನಾಬ್ 168 ಎಂದು ಟ್ಯಾಗ್ಲೈನ್ ಕೊಟ್ಟಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮದ ಬಳಿಕ ಇಂದು(ಏ. 11) ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಶಾಂತಿ ಒಪ್ಪಂದ ಮಾತುಕತೆ ನಡೆಯಲಿದ್ದು, ಎರಡು ದೇಶಗಳ ನಿಯೋಗಗಳು ಆಗಮಿಸಿವೆ. ಆದರೆ ಇರಾನ್ ನಿಯೋಗ ಫೆ. 28ರಂದು ಯುಎಸ್-ಇಸ್ರೇಲಿ ಪಡೆಗಳು ಇರಾನ್ ಮೇಲೆ ದಾಳಿಯಲ್ಲಿ ಮೃತಪಟ್ಟ 168 ಮಿನಾಬ್ ಶಾಲೆಯ ಬಾಲಕಿಯರ ಪೋಟೋ ಮತ್ತು ಅವರ ರಕ್ತಸಿಕ್ತ ಬ್ಯಾಗ್ಗಳನ್ನು ಶಾಂತಿಮಾತುಕತೆಯ ಭಾಗವಾಗಿ ತಂದಿದೆ (ಏಜೆನ್ಸೀಸ್).