- ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ!
- ಯಾರೀ ದೀಪಕ್ ಪೆರ್ವಾನಿ?
- ಇವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತೇ?
Deepak Perwani: ನಮ್ಮ ವೈರಿ ರಾಷ್ಟ್ರ ಬಹಳ ಚಿಕ್ಕ ದೇಶ. ಭಾರತಕ್ಕೆ ಹೋಲಿಸಿದ್ರೆ ಅದರ ಆರ್ಥಿಕತೆ ಇನ್ನೂ ಸಣ್ಣದೇ. ಮುಖೇಶ್ ಅಂಬಾನಿ, ಗೌತಮ್ ಅದಾನಿ, ಶಿವ ನಾದರ್, ಅಜೀಂ ಪ್ರೇಮ್‌ಜಿ, ನಾರಾಯಣ ಮೂರ್ತಿ ಸೇರಿ ಇತರ ಅತ್ಯಂತ ಶ್ರೀಮಂತ ವ್ಯಕ್ತಿಗಳಂತಹ ಬಿಲಿಯನೇರ್ ಉದ್ಯಮಿಗಳು ಈ ದೇಶದಲ್ಲಿಲ್ಲ.
ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ!
ಪಾಕ್ ಜನಸಂಖ್ಯೆಯ ಕೆಲವೇ ಜನರು ಮಾತ್ರ ಸಿರಿವಂತರು. ಅವರಲ್ಲಿ ಕೆಲವರು ಹಿಂದೂ ಅಲ್ಪಸಂಖ್ಯಾತರು. ಪಾಕಿಸ್ತಾನದಲ್ಲಿ ಶ್ರೀಮಂತ ಜನರಿದ್ದರೂ, ಅವರಲ್ಲಿ ಕೆಲವರು ಮಾತ್ರ ಹಿಂದೂ ಸಮುದಾಯದಿಂದ ಬಂದವರು. ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ ಎಂದು ಗುರುತಿಸಿಕೊಂಡವರಲ್ಲಿ ಜನಪ್ರಿಯ ಫ್ಯಾಷನ್ ಡಿಸೈನರ್ ಮತ್ತು ನಟ ದೀಪಕ್ ಪೆರ್ವಾನಿ.
ಯಾರೀ ದೀಪಕ್ ಪೆರ್ವಾನಿ?
1974ರಲ್ಲಿ ಮಿರ್ಪುರ್ ಖಾಸ್ ನಗರದ ಸಿಂಧಿ ಹಿಂದೂ ಕುಟುಂಬದಲ್ಲಿ ಜನಿಸಿದ ದೀಪಕ್ ಪೆರ್ವಾನಿ ಓರ್ವ ಪಾಕಿಸ್ತಾನಿ ನಟ. ಪ್ರಸಿದ್ಧ ಫ್ಯಾಷನ್ ಡಿಸೈನರ್ ಆಗಿರುವ ಇವರು, ಫ್ಯಾಷನ್ ಜಗತ್ತಿನಲ್ಲಿ ಅನೇಕ ಪ್ರಶಂಸೆಗಳಿಗೆ ಪಾತ್ರರಾಗಿದ್ದಾರೆ.
2014ರ ಬಲ್ಗೇರಿಯನ್ ಫ್ಯಾಷನ್ ಪ್ರಶಸ್ತಿಗಳಲ್ಲಿ ಅವರು ಅತ್ಯುತ್ತಮ ಫ್ಯಾಷನ್ ಡಿಸೈನರ್ (6ನೇ ಸ್ಥಾನ) ಆಗಿ ಆಯ್ಕೆಯಾದರು. ಅವರು ಏಳು ಲಕ್ಸ್ ಸ್ಟೈಲ್ ಪ್ರಶಸ್ತಿ, ಐದು ಬಿಎಫ್ಎ ಪ್ರಶಸ್ತಿಗಳು ಮತ್ತು ಇಂಡಸ್ ಸ್ಟೈಲ್ ಗುರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ದೀಪಕ್ ಪೆರ್ವಾನಿ ವಿಶ್ವದ ಅತಿದೊಡ್ಡ ಕುರ್ತಾವನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸಹ ಹೊಂದಿದ್ದಾರೆ.
ಪಾಕಿಸ್ತಾನಿ ವಿನ್ಯಾಸಕರಾದ ಈ ಡಿಸೈನರ್ ಭಾರತೀಯ ಗೀತರಚನೆಕಾರ ಜಾವೇದ್ ಅಖ್ತರ್ ಮತ್ತು ಅವರ ಪತ್ನಿ ನಟಿ ಶಬಾನಾ ಅಜ್ಮಿ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳಿಗೆ ಉಡುಗೆಗಳನ್ನು ವಿನ್ಯಾಸಗೊಳಿಸಿದ್ದಾರೆ. ಅವರು ಚೀನಾ ಮತ್ತು ಮಲೇಷ್ಯಾಕ್ಕೆ ಪಾಕಿಸ್ತಾನದ ಸಾಂಸ್ಕೃತಿಕ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪೆರ್ವಾನಿ ಹೆಸರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆ
ಫ್ಯಾಷನ್ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ದೀಪಕ್ ಪೆರ್ವಾನಿ ಅವರ ಹೆಸರಿಗೆ ಗಿನ್ನೆಸ್ ವಿಶ್ವ ದಾಖಲೆಯಿದೆ. ವಿಶ್ವದ ಅತಿದೊಡ್ಡ ಕುರ್ತಾವನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ದೀಪಕ್ ಗಿನ್ನೆಸ್ ವರ್ಲ್ಡ್ ದಾಖಲೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅವರು ವಿಶ್ವಪ್ರಸಿದ್ಧ ಫ್ಯಾಷನ್ ಡಿಸೈನರ್ ಮಾತ್ರವಲ್ಲ, ದೀಪಕ್ ನಟನೆಯಲ್ಲೂ ಉತ್ತಮ ಸಾಧನೆಗೈದಿದ್ದಾರೆ. ಅವರು ಅನೇಕ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತಮ್ಮ ಹೆಸರಿನಲ್ಲಿ ಅನೇಕ ಟಿವಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ದೀಪಕ್ ಪೆರ್ವಾನಿ ಒಟ್ಟು ಆಸ್ತಿ
ದೀಪಕ್ ಪೆರ್ವಾನಿ ಅವರ ಸಂಪತ್ತಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, 2022ರ ಮಾಧ್ಯಮ ವರದಿಯ ಪ್ರಕಾರ, ಅವರ ನಿವ್ವಳ ಮೌಲ್ಯ ಸುಮಾರು 71 ಕೋಟಿ ರೂ. ಎನ್ನಲಾಗಿದೆ. ಇದು ದೀಪಕ್ ಪೆರ್ವಾನಿ ಅವರನ್ನು ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂಗಳಲ್ಲಿ ಒಬ್ಬರು ಎನ್ನುವಂತೆ ಮಾಡಿದೆ,(ಏಜೆನ್ಸೀಸ್).