ನೆತನ್ಯಾಹು ನಾಪತ್ತೆ ರಹಸ್ಯ! ಬದುಕಿದ್ದಾರಾ ಇಸ್ರೇಲ್ ಪ್ರಧಾನಿ; ಆ 6 ಬೆರಳುಗಳ ವಿಡಿಯೋ ಹಿಂದೆ ಅಡಗಿದೆಯೇ ಭಯಾನಕ ಸತ್ಯ..?
ಜೆರುಸಲೇಂ: ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಯುದ್ಧವು 15ನೇ ದಿನಕ್ಕೆ ಕಾಲಿಟ್ಟಿರುವಂತೆಯೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಅವರ ನಾಪತ್ತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಶುಕ್ರವಾರ ನೆತನ್ಯಾಹು ಹಂಚಿಕೊಂಡ ವಿಡಿಯೋವೊಂದರಲ್ಲಿ ಅವರ ಕೈಯಲ್ಲಿ ಆರು ಬೆರಳುಗಳು ಕಾಣಿಸಿಕೊಂಡಿರುವುದು ಈ ಅನುಮಾನಕ್ಕೆ ತುಪ್ಪ ಸುರಿದಿದೆ. ಇದು AI ಬಳಸಿ ಸೃಷ್ಟಿಸಿದ ನಕಲಿ ವಿಡಿಯೋ ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ನೆತನ್ಯಾಹು ಬದುಕಿದ್ದಾರೆಯೇ ಎಂಬ ಪ್ರಶ್ನೆ ಕಾಡತೊಡಗಿದೆ.
'ಆರು ಬೆರಳುಗಳ' ವಿಡಿಯೋ ವಿವಾದವೇನು?
ಶುಕ್ರವಾರ ನೆತನ್ಯಾಹು ಅವರ ಅಧಿಕೃತ X ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿತ್ತು. ಇದರಲ್ಲಿ ಅವರು ಇರಾನ್ ವಿರುದ್ಧದ ಯುದ್ಧದ ಬಗ್ಗೆ ಮಾತನಾಡುತ್ತಿದ್ದರು. ಆದರೆ, ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು ನೆತನ್ಯಾಹು ಅವರ ಬಲಗೈನಲ್ಲಿ ಆರು ಬೆರಳುಗಳಿರುವುದನ್ನು ಪತ್ತೆಹಚ್ಚಿದ್ದಾರೆ. ಸಾಮಾನ್ಯವಾಗಿ AI ಮೂಲಕ ವಿಡಿಯೋ ಅಥವಾ ಫೋಟೋಗಳನ್ನು ಸೃಷ್ಟಿಸುವಾಗ ಕೈಬೆರಳುಗಳ ವಿನ್ಯಾಸದಲ್ಲಿ ಇಂತಹ ತಾಂತ್ರಿಕ ದೋಷಗಳು ಸಂಭವಿಸುತ್ತವೆ. ಇದನ್ನೇ ಆಧಾರವಾಗಿಟ್ಟುಕೊಂಡು ನೆತನ್ಯಾಹು ಈಗ ನಮ್ಮೊಂದಿಗಿಲ್ಲ, ಅವರ ಕಚೇರಿಯು AI ವಿಡಿಯೋಗಳನ್ನು ಬಿಡುಗಡೆ ಮಾಡಿ ಜಗತ್ತನ್ನು ನಂಬಿಸಲು ಪ್ರಯತ್ನಿಸುತ್ತಿದೆ ಎಂಬ ವದಂತಿಗಳು ಹರಡಿವೆ.
ಅಮೆರಿಕದ ರಾಜಕೀಯ ವಿಶ್ಲೇಷಕಿ ಕ್ಯಾಂಡೇಸ್ ಓವೆನ್ಸ್ ಕೂಡ ಬಿ ಎಲ್ಲಿದ್ದಾರೆ ಅವರ ಕಚೇರಿ ಏಕೆ ನಕಲಿ AI ವಿಡಿಯೋಗಳನ್ನು ಬಿಡುಗಡೆ ಮಾಡಿ ಡಿಲೀಟ್ ಮಾಡುತ್ತಿದೆ ಎಂದು ಪ್ರಶ್ನಿಸಿರುವುದು ಸಂಚಲನ ಮೂಡಿಸಿದೆ.
ಫ್ಯಾಕ್ಟ್ ಚೆಕ್: ಸತ್ಯವೇನು..?
ಈ ವದಂತಿಗಳ ಬಗ್ಗೆ ಎಕ್ಸ್‌ನ AI ಚಾಟ್‌ಬಾಟ್ Grok ಸ್ಪಷ್ಟನೆ ನೀಡಿದೆ. ನೆತನ್ಯಾಹು ಅವರಿಗೆ ಎಲ್ಲರಂತೆ ಪ್ರತಿ ಕೈಯಲ್ಲಿ ಐದು ಬೆರಳುಗಳೇ ಇವೆ. ವಿಡಿಯೋದಲ್ಲಿ ಅವರು ಪೋಡಿಯಂ ಬಳಿ ಕೈ ಸನ್ನೆಯ ಮೂಲಕ ಮಾತನಾಡುತ್ತಿರುವಾಗ ಕ್ಯಾಮರಾ ಆಂಗಲ್ ಮತ್ತು ಕೆಂಪು ವೃತ್ತದ ಎಫೆಕ್ಟ್‌ನಿಂದಾಗಿ ಅದು ಆರು ಬೆರಳುಗಳಂತೆ ಕಾಣುವ ಆಪ್ಟಿಕಲ್ ಇಲ್ಯೂಷನ್ ಸೃಷ್ಟಿಸಿದೆ ಎಂದು ಅದು ಹೇಳಿದೆ. ಅಷ್ಟೇ ಅಲ್ಲದೆ, ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂಬ ಇರಾನ್ ಮಾಧ್ಯಮಗಳ ವರದಿಯನ್ನು ಕೂಡ ಗ್ರೋಕ್ ತಳ್ಳಿಹಾಕಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.
ಅನುಮಾನಕ್ಕೆ ಕಾರಣವಾದ ಇತರೆ ಅಂಶಗಳು
ಗ್ರೋಕ್ ಸ್ಪಷ್ಟನೆ ನೀಡಿದ್ದರೂ ಜನರ ಅನುಮಾನ ಪೂರ್ತಿ ದೂರವಾಗಿಲ್ಲ. ಇದಕ್ಕೆ ಕಾರಣಗಳೂ ಇವೆ.
ಯಾಯಿರ್ ನೆತನ್ಯಾಹು ಮೌನ: ನೆತನ್ಯಾಹು ಅವರ ಪುತ್ರ ಯಾಯಿರ್ ನೆತನ್ಯಾಹು ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಿದ್ದರು. ಆದರೆ ಮಾರ್ಚ್ 9ರ ನಂತರ ಅವರು ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ.
ಸಚಿವ ಸ್ಕಾಟ್ ಬೆಸೆಂಟ್ ನಡೆ: ಇಸ್ರೇಲ್‌ನ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಪತ್ರಿಕಾಗೋಷ್ಠಿಯ ಮಧ್ಯದಲ್ಲೇ ಹಠಾತ್ತನೆ ಎದ್ದು ಹೋಗಿ ಸ್ವಲ್ಪ ಸಮಯದ ನಂತರ ವಾಪಸ್ ಬಂದಿರುವುದು ಯಾವುದೋ ತುರ್ತು ಪರಿಸ್ಥಿತಿಯ ಮುನ್ಸೂಚನೆಯೇ ಎಂಬ ಚರ್ಚೆ ನಡೆಯುತ್ತಿದೆ.
ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ: ಬೀಟ್ ಶೆಮೆಶ್‌ನಲ್ಲಿ ದಾಳಿಯಿಂದ ಧ್ವಂಸಗೊಂಡ ಕಟ್ಟಡಗಳ ನಡುವೆ ನೆತನ್ಯಾಹು ಅವರು ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅದಾದ ನಂತರ ಅವರ ಯಾವುದೇ ನೇರ ದೃಶ್ಯಗಳು ಲಭ್ಯವಿಲ್ಲ.
ಯುದ್ಧದ ತೀವ್ರತೆ ಮತ್ತು ಜಾಗತಿಕ ಸಂಕಷ್ಟ
ಫೆಬ್ರವರಿ 28ರಂದು ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಮಧ್ಯಪ್ರಾಚ್ಯದಲ್ಲಿ ಬೆಂಕಿ ಹತ್ತಿಕೊಂಡಿದೆ. ಅಮೆರಿಕ ಕೂಡ ಇಸ್ರೇಲ್ ಪರವಾಗಿ ಯುದ್ಧಕ್ಕೆ ಧುಮುಕಿದ್ದು, ಇರಾನ್‌ನ ತೈಲ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇರಾನ್ ಪ್ರತಿಯಾಗಿ ಅಮೆರಿಕದ ವಿಮಾನಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ. ಈ ಗೊಂದಲದ ನಡುವೆ ನೆತನ್ಯಾಹು ಅವರ ನಾಪತ್ತೆ ಸುದ್ದಿ ಇಸ್ರೇಲ್ ಪಾಳಯದಲ್ಲಿ ಭೀತಿ ಸೃಷ್ಟಿಸಿದೆ.
ಸದ್ಯಕ್ಕೆ ಅಧಿಕೃತ ಮೂಲಗಳ ಪ್ರಕಾರ ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎನ್ನಲಾಗಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಈ ಡಿಜಿಟಲ್ ವಾರ್ ಮತ್ತು AI ವಿಡಿಯೋ ವಿವಾದವು ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ,(ಏಜೆನ್ಸೀಸ್).