ಮದುವೆಗೂ ಮುನ್ನ ಗಂಡ ಹೇಳಿದ ಈ ಒಂದು ಸುಳ್ಳು ನಂಬಿದ ಮಹಿಳೆಗೆ ಇದೀಗ ನಿತ್ಯವೂ ನರಕ ದರ್ಶನ! Husband  
ವಿದೇಶ

ಮದುವೆಗೂ ಮುನ್ನ ಗಂಡ ಹೇಳಿದ ಈ ಒಂದು ಸುಳ್ಳು ನಂಬಿದ ಮಹಿಳೆಗೆ ಇದೀಗ ನಿತ್ಯವೂ ನರಕ ದರ್ಶನ! Husband

ಪ್ರಮುಖ ಮುಖ್ಯಾಂಶಗಳು

  • ಮದ್ಯಪಾನ ಮಾಡುವುದಿಲ್ಲವೆಂದು ಸುಳ್ಳು ಹೇಳಿ ಮದುವೆಯಾದ ಪತಿಯಿಂದ ದಾಂಪತ್ಯದಲ್ಲಿ ಬಿರುಕು
  • ತಂದೆ ಮತ್ತು ಮೊದಲ ಪತಿಯ ಕುಡಿತದಿಂದ ನೊಂದಿದ್ದ ಮಹಿಳೆಗೆ ಮತ್ತೆ ಎದುರಾದ ವಂಚನೆ
  • ಮದುವೆಯಾದ ವಾರದಲ್ಲೇ ಪತಿಯ ವ್ಯಸನ ಬಯಲಾಗಿದ್ದು, ಪತ್ನಿಯ ನೆಮ್ಮದಿ ಭಂಗ
  • ಮದ್ಯಪಾನಕ್ಕಿಂತ ಹೆಚ್ಚಾಗಿ, ಪತಿ ನೀಡಿದ್ದ ಭರವಸೆ ಉಲ್ಲಂಘಿಸಿರುವುದು ದಂಪತಿಗಳ ನಡುವೆ ಗೋಡೆ ನಿರ್ಮಿಸಿದೆ.
Husband : ಸಂಬಂಧಗಳಲ್ಲಿ ಸುಳ್ಳುಗಳು ಸಾಮಾನ್ಯ ಎಂದು ಅನೇಕರು ಭಾವಿಸುತ್ತಾರೆ. ಸಂಗಾತಿಯ ಮುನಿಸು ತಪ್ಪಿಸಲು ಅಥವಾ ಕ್ಷಣಿಕ ಸಂತೋಷಕ್ಕಾಗಿ ಹೇಳುವ ಸಣ್ಣ ಸುಳ್ಳುಗಳು ಮುಂದೆಂದೂ ಸಮಸ್ಯೆಯಾಗದು ಎಂಬ ನಂಬಿಕೆ ಹೆಚ್ಚಿನವರದ್ದು. ಆದರೆ, ಇಲ್ಲೊಬ್ಬ ಮಹಿಳೆಯ ಜೀವನದಲ್ಲಿ ಪತಿ ಮದುವೆಗೂ ಮುನ್ನ ಹೇಳಿದ ಒಂದೇ ಒಂದು ಸುಳ್ಳು ಇಂದು ಇಡೀ ದಾಂಪತ್ಯವನ್ನೇ ಕಹಿಮಾಡಿದೆ.
ಪ್ರೀತಿ ಮತ್ತು ನಂಬಿಕೆಯ ಮೇಲೆ ಕಟ್ಟಿದ ಸಂಸಾರದಲ್ಲಿ, ಅಂದು ಪತಿ ಹೇಳಿದ ಆ "ಸಣ್ಣ" ಸುಳ್ಳು ಇಂದು ಬೆಟ್ಟದಷ್ಟು ಬೆಳೆದು ನಿಂತಿದೆ. ಆಕೆಯ ಪಾಲಿಗೆ ಮದುವೆ ಎಂಬುದು ಇಂದು ಪವಿತ್ರ ಬಂಧವಾಗಿ ಉಳಿಯದೆ, ಕೇವಲ 'ಅತೃಪ್ತಿ ಮತ್ತು ಮರುಕದ' ಗೂಡಾಗಿದೆ. ಇಷ್ಟಕ್ಕೂ ಆತ ಹೇಳಿದ ಆ ಸುಳ್ಳಾದ್ರೂ ಏನು? ಆ ಒಂದು ಸತ್ಯ ಹೊರಬಂದಾಗ ಸುಂದರವಾಗಿದ್ದ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದ್ದೇಕೆ? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
30 ವರ್ಷದ ಮಹಿಳೆಯೊಬ್ಬರು ತನ್ನ 32 ವರ್ಷದ ಪತಿಯೊಂದಿಗಿನ ಸಂಬಂಧದ ಬಗ್ಗೆ ರೆಡ್ಡಿಟ್‌ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ತಂದೆಯ ಮದ್ಯಪಾನದ ವ್ಯಸನದಿಂದಾಗಿ ನಾನು ಕೂಡ ಹದಿಹರೆಯದಲ್ಲಿ ಮದ್ಯವ್ಯಸನಿಯಾಗಿದ್ದೆ. ಆದರೆ, ಐದು ವರ್ಷಗಳಿಂದ ಸಂಪೂರ್ಣವಾಗಿ ಮದ್ಯಪಾನದಿಂದ ದೂರವಿದ್ದೇನೆ. ಅಲ್ಲದೆ, ಡೇಟಿಂಗ್‌ನಲ್ಲಿದ್ದಾಗಲೇ ಮದ್ಯಪಾನ ಮಾಡುವ ವ್ಯಕ್ತಿಯನ್ನು ಮದುವೆಯಾಗುವುದಿಲ್ಲ ಎಂಬ ಸ್ಪಷ್ಟ ನಿಯಮವನ್ನು ಹಾಕಿಕೊಂಡಿದ್ದೆ. ಕಳೆದ ಎರಡು ವರ್ಷಗಳಿಂದ ವಿವಾಹ ಜೀವನ ನಡೆಸುತ್ತಿದ್ದು, ಇದೀಗ ಗಂಡನ ಸುಳ್ಳು ಬಯಲಾಗಿದೆ ಎಂದು ಮಹಿಳೆ ಹೇಳಿದ್ದಾಳೆ.
ಅಂದಹಾಗೆ, ಮಹಿಳೆಗೆ ಇದು ಎರಡನೇ ಮದುವೆ. ಮಾಜಿ ಪತಿಯ ಕುಡಿತದ ಚಟ ಮತ್ತು ದೌರ್ಜನ್ಯದಿಂದ ಬೇಸತ್ತಿದ್ದ ಆಕೆಗೆ ಮದ್ಯಪಾನವೆಂದರೆ ಅಸಹ್ಯ ಹುಟ್ಟಿತ್ತು. ಆ ಕಹಿ ನೆನಪುಗಳಿಂದ ದೂರವಿರಲು ನಿರ್ಧರಿಸಿದ್ದ ಆಕೆ, ತನ್ನ ಈಗಿನ ಪತಿ 'ತಾನು ಅಪರೂಪಕ್ಕೊಮ್ಮೆ ಮಾತ್ರ ಮದ್ಯ ಸೇವಿಸುತ್ತೇನೆ' ಎಂದು ನೀಡಿದ್ದ ಭರವಸೆಯನ್ನು ನಂಬಿ ದೊಡ್ಡ ತಪ್ಪು ಮಾಡಿದೆ ಎಂದು ಈಗ ಪಶ್ಚಾತ್ತಾಪ ಪಡುತ್ತಿದ್ದಾಳೆ. ಮದ್ಯಪಾನ ತನ್ನ ಹವ್ಯಾಸವೇ ಅಲ್ಲ ಎಂದು ಆತ ಹೇಳಿದ್ದ ಮಾತನ್ನು ನಿಜವೆಂದು ನಂಬಿದ್ದೇ ತನ್ನ ಪಾಲಿನ ದೊಡ್ಡ ತಪ್ಪಾಯಿತೆಂದು ಆಕೆ ಮನನೊಂದಿದ್ದಾಳೆ.
ಮದುವೆಗೆ ಮೊದಲು ತನ್ನ ಪತಿ ಮದ್ಯಪಾನದಿಂದ ದೂರವಿದ್ದಾನೆ ಮತ್ತು ಆಧ್ಯಾತ್ಮಿಕವಾಗಿ ತನಗೆ ಸರಿಸಾಟಿಯಾಗಿದ್ದಾನೆ ಎಂದು ಆ ಮಹಿಳೆ ನಂಬಿದ್ದರು. ಆದರೆ ವಿವಾಹವಾದ ಕೇವಲ ಒಂದು ವಾರದಲ್ಲೇ ಪತಿಯ ಕುಡಿತದ ಅಭ್ಯಾಸ ಬಯಲಿಗೆ ಬಂದಿದ್ದು, ವರ್ಷದ ಒಳಗಾಗಿ ಆತ ಮದ್ಯಕ್ಕೆ ದಾಸನಾದನು. ಆತ ಅತಿಯಾಗಿ ಕುಡಿದು ಅಸಭ್ಯವಾಗಿ ವರ್ತಿಸದಿದ್ದರೂ, ಪ್ರತಿ ಊಟ ಅಥವಾ ಸಮಾರಂಭಗಳಲ್ಲಿ ಮದ್ಯವಿರಲೇಬೇಕು ಎಂಬ ಹಠಕ್ಕೆ ಬಿದ್ದಿರುವುದು ಆಕೆಗೆ ತೀವ್ರ ಬೇಸರ ತರಿಸಿದೆ. ಪತಿ ತನ್ನನ್ನು ನಂಬಿಸಿ ವಂಚಿಸಿದ ಭಾವನೆ ಆಕೆಯನ್ನು ಕಾಡುತ್ತಿದೆ.
ಸಂಗಾತಿಯ ನಡುವಿನ ಭರವಸೆ ಮತ್ತು ಸಂವಹನದ ಕೊರತೆಯು ಈ ಸಮಸ್ಯೆಯ ಮೂಲವಾಗಿ ಕಾಣುತ್ತಿದೆ. ಇಲ್ಲಿ ಮುಖ್ಯವಾಗಿರುವುದು ಮದ್ಯಪಾನಕ್ಕಿಂತ ಹೆಚ್ಚಾಗಿ, ಮದ್ಯಪಾನದ ಬಗ್ಗೆ ಮಾಡಿಕೊಂಡ ಒಪ್ಪಂದದ ಉಲ್ಲಂಘನೆ. ಒಬ್ಬ ವ್ಯಕ್ತಿ ತನ್ನ ಸಂಗಾತಿಗೆ ನೀಡಿದ ಮಾತನ್ನು ಮೀರಿ, ವಿಷಯಗಳನ್ನು ಮರೆಮಾಚುವುದು ಅಥವಾ ಗುಟ್ಟಾಗಿ ಮದ್ಯಪಾನ ಮಾಡುವುದು ಸಂಬಂಧದ ಅಡಿಪಾಯವಾದ 'ನಂಬಿಕೆ'ಯನ್ನು ಕುಸಿಯುವಂತೆ ಮಾಡುತ್ತದೆ. ಮದ್ಯಪಾನವು ಕೇವಲ ವೈಯಕ್ತಿಕ ಆಯ್ಕೆಯಾಗಿ ಉಳಿಯದೆ, ಅದು ಸುಳ್ಳು ಹೇಳುವ ಹಂತಕ್ಕೆ ತಲುಪಿದಾಗ ದಂಪತಿಗಳ ನಡುವೆ ಭಾವನಾತ್ಮಕ ಅಂತರ ಹೆಚ್ಚಾಗುವುದು ಸಹಜ.
ಮತ್ತೊಂದೆಡೆ, ಸಂಬಂಧದ ಆರಂಭದಲ್ಲೇ ಈ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿದ್ದರೂ, ಅದನ್ನು ಗೌರವಿಸದಿರುವುದು ಇಲ್ಲಿನ ನೋವಿಗೆ ಕಾರಣವಾಗಿದೆ. ಪ್ರತಿಯೊಂದು ಸಾಮಾಜಿಕ ಕಾರ್ಯಕ್ರಮದಲ್ಲೂ ಮದ್ಯದ ಅಗತ್ಯವಿದೆ ಎಂಬ ಹಠ ಅಥವಾ ಅನಿವಾರ್ಯತೆಯು ವ್ಯಸನದ ಲಕ್ಷಣವಾಗಿರಬಹುದು ಅಥವಾ ಸಂಗಾತಿಯ ಭಾವನೆಗಳಿಗೆ ಬೆಲೆ ನೀಡದ ಮನೋಭಾವವಾಗಿರಬಹುದು. ಇಂತಹ ಸಂದರ್ಭದಲ್ಲಿ, ಕೇವಲ ವಾದ ಮಾಡುವುದಕ್ಕಿಂತ ಹೆಚ್ಚಾಗಿ, ವೃತ್ತಿಪರ ಕೌನ್ಸೆಲಿಂಗ್ ಪಡೆಯುವುದು ಅಥವಾ ಈ ನಡವಳಿಕೆಯು ಸಂಬಂಧದ ಭವಿಷ್ಯದ ಮೇಲೆ ಬೀರುತ್ತಿರುವ ಗಂಭೀರ ಪರಿಣಾಮದ ಬಗ್ಗೆ ಗಂಭೀರವಾಗಿ ಚರ್ಚಿಸುವುದು ಅನಿವಾರ್ಯವಾಗಿದೆ.
ನೀವು ಒಬ್ಬರೇ ಜೀವನಪರ್ಯಂತ ಈ ನೋವನ್ನು ಸಹಿಸಿಕೊಳ್ಳುವುದು ಅನಿವಾರ್ಯವಲ್ಲ. ದಾಂಪತ್ಯವೆಂಬುದು ಇಬ್ಬರ ನಡುವಿನ ಗೌರವ ಮತ್ತು ಸಮನ್ವಯದ ಮೇಲೆ ನಿಂತಿರುತ್ತದೆ. ಕೇವಲ 'ಮದುವೆಯಾಗಿದ್ದೇವೆ' ಎಂಬ ಕಾರಣಕ್ಕೆ ನಿಮ್ಮ ಸುಖ-ಶಾಂತಿಯನ್ನು ಬಲಿಕೊಟ್ಟು ಜೀವನಪರ್ಯಂತ ದುಃಖದಲ್ಲಿರುವುದು ಸರಿಯಲ್ಲ. ಮೊದಲು ದಾಂಪತ್ಯ ಸಲಹೆಗಾರರ ಸಹಾಯ ಪಡೆಯಲು ಪ್ರಯತ್ನಿಸಿ, ಅದೂ ಫಲ ನೀಡದಿದ್ದಲ್ಲಿ, ನಿಮ್ಮ ಸ್ವಂತ ನೆಮ್ಮದಿ ಮತ್ತು ಉಜ್ವಲ ಭವಿಷ್ಯಕ್ಕಾಗಿ ಧೈರ್ಯದಿಂದ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಬಹುದು. ನಿಮ್ಮ ನೆಮ್ಮದಿಯೇ ಎಲ್ಲಕ್ಕಿಂತ ಮುಖ್ಯ ಎಂದು ರೆಡ್ಡಿಟ್​ ಬಳಕೆದಾರರು ಮಹಿಳೆಗೆ ಸಲಹೆ ನೀಡಿದ್ದಾರೆ, (ಏಜೆನ್ಸೀಸ್​).