ಇಟಲಿಯ ಮೆಲೋನಿಗೆ ಮೆಲೋಡಿ ನೀಡಿದ ಮೋದಿ 
ವಿದೇಶ

ಮೋದಿ-ಮೆಲೋನಿ ಮೋಡಿ: ಬ್ಲಿಂಕಿಟ್‌ನಲ್ಲಿ ಔಟ್ ಆಫ್ ಸ್ಟಾಕ್ ಆದ ಮೆಲೋಡಿ; ಇದು ಪ್ರಧಾನಿಯ ಗ್ಲೋಬಲ್ ಮಾರ್ಕೆಟಿಂಗ್​ ಎಂದ ಪಾರ್ಲೆ! Melody Out Of Stock

ಪ್ರಮುಖ ಮುಖ್ಯಾಂಶಗಳು

  • ಇಟಲಿಯ ಮೆಲೋನಿಗೆ ಮೆಲೋಡಿ ನೀಡಿದ ಮೋದಿ
  • ಬ್ಲಿಂಕಿಟ್​ನಲ್ಲಿ ಔಟ್​ ಆಫ್​ ಸ್ಟಾಕ್​ ಆದ ಮೆಲೋಡಿ ಚಾಕಲೇಟ್​
  • ಇದು ಪ್ರಧಾನಿಗಳ ಗ್ಲೋಬಲ್​ ಮಾರ್ಕೆಟಿಂಗ್​ ಟೆಕ್​ನಿಕ್​ ಎಂದ ಪಾರ್ಲೆ
  • ಸೋಷಿಯಲ್​ ಮೀಡಿಯಾನಲ್ಲಿ ಮೆಲೋಡಿ ಚಾಕಲೇಟಿನದ್ದೇ ಹವಾ!
ನವದೆಹಲಿ: ಇಟಲಿ ದೇಶದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ (ಇಟಲಿ) ಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಕಂಪನಿಯ ಮೆಲೋಡಿ ಚಾಕಲೇಟ್​ ನೀಡಿದ ಕ್ಷಣದಿಂದ ಪ್ರಪಂಚದಾದ್ಯಂತ ಈ ಚಾಕಲೇಟ್​ನದ್ದೇ ಸುದ್ದಿಯಾಗಿದೆ.

ಬ್ಲಿಂಕಿಟ್​ನಲ್ಲಿ ಔಟ್​ ಆಫ್​ ಸ್ಟಾಕಾದ 'ಮೆಲೋಡಿ'

ದೂರದ ಇಟಲಿಯಲ್ಲಿ ನಮ್ಮ ದೇಶದ ಪ್ರಧಾನಿ, ಆ ದೇಶದ ಪ್ರಧಾನಿಗೆ ಮೆಲೋಡಿ ಚಾಕಲೇಟ್​ನ್ನು ಉಡುಗೊರೆಯಾಗಿ ನೀಡುತ್ತಿದ್ದಂತೆ, ಭಾರತದ ಇ-ವ್ಯಾಪಾರಿ ವೇದಿಕೆಯಾದ ಬ್ಲಿಂಕಿಟ್​ನಲ್ಲಿ ಪಾರ್ಲೆ ಮೆಲೋಡಿ ಚಾಕಲೇಟ್​ ಔಟ್​ ಆಫ್​ ಸ್ಟಾಕ್​ (Melody Out Of Stock) ಎಂದು ತೋರಿಸುತ್ತಿದ್ದು, ಭಾರತದಲ್ಲಿ ಈ ಚಾಕಲೇಟ್​ನ್ನು ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ ಎಂಬುದನ್ನು ಇದು ಸಾಬೀತು ಪಡಿಸುತ್ತಿದೆ.
ಇದು ಹೊಸ ಮಾದರಿಯ ಮಾರ್ಕೆಟಿಂಗ್​!
ಪ್ರಧಾನಿ ನರೇಂದ್ರ ಮೋದಿ, ಇಟಲಿಯ ಮೆಲೋನಿ ಅವರಿಗೆ ಮೆಲೋಡಿ ಚಾಕಲೇಟ್​ನ್ನು ನೀಡಿದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಾರ್ಲೆ ಕಂಪನಿಯ ಉಪಾಧ್ಯಕ್ಷ ಮಯಾಂಕ್​ ಶಾ, ಇದು ಭಾರತದ ಉತ್ಪನ್ನಗಳನ್ನು ಜಾಗತಿಕ ಮಾರಿಕಟ್ಟೆಗೆ ಪರಿಚಯಿಸಿರುವ ಹೊಸ ಟೆಕ್​ನಿಕ್ ಎಂದು ಹೇಳಿದ್ದಾರೆ.
ನಮ್ಮ ಕಂಪನಿಯ ಉತ್ಪನ್ನಗಳು ವಿಶ್ವದ ಸುಮಾರು 100 ದೇಶಗಳಿಗೆ ರಫ್ತಾಗುತ್ತಿವೆ. ಈಗ ಪ್ರಧಾನಿ ಮೋದಿ ಅವರು ನೀಡಿರುವ ಈ ಉಡುಗೊರೆ ವಿಡಿಯೋ ಪ್ರಪಂಚದಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದು, ನಮ್ಮ ಪ್ರಾಡಕ್ಟ್​ಗಳು ಇನ್ನೂ ಹೆಚ್ಚಿನ ದೇಶಗಳ ಮಾರುಕಟ್ಟೆಯನ್ನು ಪ್ರವೇಶಲಿವೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿಗಳು ಇಟಲಿಯ ಪ್ರಧಾನಿಗಳಿಗೆ ಉಡುಗೊರೆಯಾಗಿ ನೀಡಲು ನಮ್ಮ ಕಂಪನಿಯ ಮೆಲೋಡಿ ಚಾಕಲೇಟ್​ನ್ನು ಆಯ್ದುಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಮಯಾಂಕ್​ ಶಾ ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ.

ಯಡವಟ್ಟು ಮಾಡಿಕೊಂಡ ಜನ!

ಒಂದು ಕಡೆ ಮೋದಿ, ಇಟಲಿಯ ಮೆಲೋನಿಗೆ ಮೆಲೋಡಿ ಚಾಕಲೇಟ್​ ನೀಡುತ್ತಿದ್ದಂತೆ ಇತ್ತ ಭಾರತದಕ್ಕು ಸ್ಟಾಕ್​ ಮಾರ್ಕೆಟ್​ ಪಂಟರ್​ಗಳು ಪಾರ್ಲೆ ಚಾಕಲೇಟ್​ನ್ನು ಪಾರ್ಲೆ ಇಂಡಸ್ಟ್ರೀಸ್​ ಎಂಬ ಕಂಪನಿ ತಯಾರಿಸುತ್ತದೆ ಎಂದು ತಪ್ಪು ತಿಳಿದು ಅಲ್ಲಿ ಹೂಡಿಕೆ ಮಾಡಿದ ಪರಿಣಾಮ, ಈ ಚಾಕಲೇಟ್​ ತಯಾರಿಕೆಯೊಂದಿಗೆ ಯಾವುದೇ ಸಂಬಂಧ ಹೊಂದಿರದ ಪಾರ್ಲೆ ಇಂಡಸ್ಟ್ರಿಸ್​ ಕಂಪನಿಯ ಶೇರ್​ ಮೌಲ್ಯದಲ್ಲಿ ಶೇ.5 ರಷ್ಟು ಏರಿಕೆ ಕಂಡಿದ್ದು, ಇವತ್ತಿನ ಅಪ್ಪರ್​ ಲಿಮಿಟ್​ನ್ನು ಇದು ದಾಖಲಿಸಿದೆ.
ಪ್ರಧಾನಿ ಚಾಕಲೇಟ್​ ನೀಡಿದ ಕೂಡಿಲೇ ಕಂಪನಿಯ ಹೆಸರನ್ನು ಅರೆ-ಬರೆ ನೋಡಿದ ಜನ ತಪ್ಪಾದ ಕಂಪನಿಯಲ್ಲಿ ಹೂಡಿದೆ ಮಾಡಿದ್ದಾರೆ. ಆದರೆ ಈ ಮೆಲೋಡಿ ಚಾಕಲೇಟ್​ನ್ನು ತಯಾರಿಸುವ ಪಾರ್ಲೆ ಪ್ರಾಡಕ್ಟ್​ ಎಂಬ ಕಂಪನಿ ಶೇರ್​ ಮಾರುಕಟ್ಟೆಯಲ್ಲಿ ಇಲ್ಲವೇ ಇಲ್ಲ, ಎಂಬ ಸಂಗತಿ ತಡವಾಗಿ ಅರಿವಿಗೆ ಬಂದಿದೆ.

ಏನಿದು Melodi ಟ್ರೆಂಡ್​​?

2023 ರಲ್ಲಿ ದುಬೈನಲ್ಲಿ ನಡೆದಿದ್ದ COP28 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಒಂದು ಸೆಲ್ಫಿ ಕ್ಲಿಕ್​ಕಿಸಿಕೊಂಡು “Good friends at COP28 #Melodi” ಎಂದು ಬರೆದುಕೊಂಡಿದ್ದರು. ಅಂದಿನಿಂದ ಈ Melodi ಎನ್ನುವ ಟ್ರಂಡ್​ ಸೋಷಿಯಲ್​ ಮೀಡಿಯಾನಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ.
ಯಾವುದೇ ಜಾಗತಿಕ ವೇದಿಕೆಗಳಲ್ಲಿ ಮೋದಿ ಹಾಗೂ ಮೆಲೋನಿ ಭೇಟಿಯಾದರೆ ಆ ಫೋಟೊಗಳ ಕಮೆಂಟ್​ ಸೆಕ್ಷನ್​ನಲ್ಲಿ ಪೂರ್ತಿ ಈ Melodi ಎನ್ನುವ ಕಮೆಂಟ್​ ತುಂಬಿರುತ್ತದೆ. ಆದ್ದರಿಂದಲೇ ಮೋದಿ ಅವರು ಮೆಲೋನಿ ಅವರಿಗೆ ಮೆಲೋಡಿ ಚಾಕಲೇಟ್​ನ್ನು ನೀಡಿದ್ದಾರೆ ಎನ್ನುವ ವಾದವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ, (ಏಜನ್ಸೀಸ್​).