ಇಟಲಿ ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕಲೇಟ್ ಕೊಟ್ಟ ನರೇಂದ್ರ ಮೋದಿ
- ಇಟಲಿ ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕಲೇಟ್ ಕೊಟ್ಟ ನರೇಂದ್ರ ಮೋದಿ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
- ಪಾರ್ಲೆ ಕಂಪನಿಯು ಶೇರ್ ಮೌಲ್ಯ ಶೇ.5 ರಷ್ಟು ಏರಿಕೆ
ವೈರಲ್: ಸದ್ಯ ವಿದೇಶ ಪ್ರವಾಸದಲ್ಲಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರಿಗೆ ಪಾರ್ಲೆ ಕಂಪನಿಯ 'ಮೆಲೋಡಿ' ಚಾಕಲೇಟ್ (Melody Chocolates) ಪ್ಯಾಕೆಟ್ನ್ನು ಉಡುಗೊರೆಯಾಗಿ ನೀಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ಗಟ್ಟಲೇ ವೀಕ್ಷಣೆಯನ್ನು ಕಾಣುತ್ತಿದ್ದರೆ, ಇತ್ತ ಪಾರ್ಲೆ ಕಂಪನಿಗ ಶೇರ್ ಮೌಲ್ಯ ಸಹ ಏರಿಕೆ (Melody Chocolates Share Hike) ಯನ್ನು ಕಂಡಿದೆ.
ಯಡವಟ್ಟು ಮಾಡಿಕೊಂಡ ಜನ!
ಒಂದು ಕಡೆ ಮೋದಿ, ಇಟಲಿಯ ಮೆಲೋನಿಗೆ ಮೆಲೋಡಿ ಚಾಕಲೇಟ್ ನೀಡುತ್ತಿದ್ದಂತೆ ಇತ್ತ ಭಾರತದ ಸ್ಟಾಕ್ ಮಾರ್ಕೆಟ್ ಪಂಟರ್ಗಳು ಪಾರ್ಲೆ ಚಾಕಲೇಟ್ನ್ನು ಪಾರ್ಲೆ ಇಂಡಸ್ಟ್ರೀಸ್ ಎಂಬ ಕಂಪನಿ ತಯಾರಿಸುತ್ತದೆ ಎಂದು ತಪ್ಪು ತಿಳಿದು, ತಪ್ಪು ಕಂಪನಿಯಲ್ಲಿ ಹೂಡಿಕೆ ಮಾಡಿದ ಪರಿಣಾಮ, ಚಾಕಲೇಟ್ ತಯಾರಿಕೆಯೊಂದಿಗೆ ಯಾವುದೇ ಸಂಬಂಧ ಹೊಂದಿರದ ಪಾರ್ಲೆ ಇಂಡಸ್ಟ್ರಿಸ್ ಕಂಪನಿಯ ಶೇರ್ ಮೌಲ್ಯದಲ್ಲಿ ಶೇ.5 ರಷ್ಟು ಏರಿಕೆ ಕಂಡಿದ್ದು, ಇವತ್ತಿನ ಅಪ್ಪರ್ ಸರ್ಕ್ಯೂಟ್ನ್ನು ಇದು ದಾಖಲಿಸಿದೆ. ಈ ಪಾರ್ಲೆ ಇಂಡಸ್ಟ್ರಿಸ್ ಕಂಪನಿ ತನ್ನ ರಿಯಲ್ ಎಸ್ಟೇಟ್, ಮೂಲ ಸೌಕರ್ಯ ನಿರ್ಮಾಣ ಹಾಗೂ ಮರುಬಳಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಕಂಪನಿಯಾಗಿದ್ದು, ಇದಕ್ಕೆ ಮತ್ತು ಪಾರ್ಲೆ ಮೆಲೋಡಿ ಚಾಕಲೇಟ್ಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.
ಪ್ರಧಾನಿ ಚಾಕಲೇಟ್ ನೀಡಿದ ಕೂಡಿಲೇ ಕಂಪನಿಯ ಹೆಸರನ್ನು ಅರೆ-ಬರೆ ನೋಡಿದ ಜನ ತಪ್ಪಾದ ಕಂಪನಿಯಲ್ಲಿ ಹೂಡಿದೆ ಮಾಡಿದ್ದಾರೆ. ಆದರೆ ಈ ಮೆಲೋಡಿ ಚಾಕಲೇಟ್ನ್ನು ತಯಾರಿಸುವ ಪಾರ್ಲೆ ಪ್ರಾಡಕ್ಟ್ ಎಂಬ ಕಂಪನಿ ಶೇರ್ ಮಾರುಕಟ್ಟೆಯಲ್ಲಿ ಇಲ್ಲವೇ ಇಲ್ಲ, ಎಂಬ ಸಂಗತಿ ತಡವಾಗಿ ಅರಿವಿಗೆ ಬಂದಿದೆ.
97 ವರ್ಷಗಳ ಇತಿಹಾಸ ಹೊಂದಿರುವ ಕಂಪನಿ
ಈ ಪಾರ್ಲೆ ಕಂಪನಿ ನೆನ್ನೆ, ಮೊನ್ನೆ ಹುಟ್ಟಿಕೊಂಡ ಸಂಸ್ಥೆಯಲ್ಲ. ಇದನ್ನು ಮೋಹಲ್ಲಾಲ್ ದಯಾಲ್ ಅವರು ಹೌಸ್ ಆಫ್ ಪಾರ್ಲೆ ಎಂದು 1929 ರಲ್ಲಿ ಆರಂಭಿಸಿದರು. ಈ ಕಂಪನಿ ಸ್ಥಾಪನೆಗೊಂಡು ಸುಮಾರು 97 ವರ್ಷ ಕಳೆದಿದ್ದು, ಈ ಕಂಪನಿಯ ಹ್ಯಾಪಿ ಹ್ಯಾಪಿ, 20-20, ಮೆಲೋಡಿ, ಹೈಡ್&ಸಿಕ್ ಮತ್ತು ಪಾರ್ಲೆಜಿ ಇವರ ಅತೀ ಹೆಚ್ಚು ಮಾರಾಟವಾಗುವ ಖಾದ್ಯ ಪದಾರ್ಥಗಳಾಗಿವೆ. ಭಾರತದಾದ್ಯಂತ ಈ ಪಾರ್ಲೆ ಕಂಪನಿಯ ಸುಮಾರು 125 ಫ್ಯಾಕ್ಟರಿಗಳಿದ್ದು, ಇವರು ಕೇಕ್, ಬಿಸ್ಕಿಟ್, ಚಾಕಲೇಟ್, ರಸ್ಕ್ ಮೊದಲಾದವುಗಳನ್ನು ತಯಾರಿಸುವ ಪಾರ್ಲೆ ಪ್ರಾಡಕ್ಟ್ ಇದು ಭಾರತದ ಪ್ರತಿಷ್ಟಿತ ಬ್ರ್ಯಾಂಡ್ ಎಂದರೆ ತಪ್ಪಾಗದು.
ಮೆಲೋನಿಗೆ 'ಮೆಲೋಡಿ' ಕೊಟ್ವ ಮೋದಿ!
ನರೇಂದ್ರ ಮೋದಿ ಅವರ ಇಟಲಿ ಪ್ರವಾಸದಲ್ಲಿ ಮತ್ತೊಮ್ಮೆ ‘Melodi’ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪ್ರಧಾನಿ ಮೋದಿ ‘Melody’ ಚಾಕೊಲೇಟ್ ಪ್ಯಾಕೆಟ್ ಉಡುಗೊರೆಯಾಗಿ ನೀಡಿದ ಕ್ಷಣ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಮೋದಿ ಮತ್ತು ಮೆಲೋನಿ ಹೆಸರನ್ನು ಸೇರಿಸಿ ಸಾಮಾಜಿಕ ಜಾಲತಾಣ ಬಳಕೆದಾರರು ‘Melodi’ ಎಂಬ ಹೆಸರು ನೀಡಿದ್ದರು. ಈಗ ಅದೇ ಹೆಸರನ್ನು ಬಳಸಿಕೊಂಡ ಪ್ರಧಾನಿ ಮೋದಿ ನೀಡಿರುವ ಗಿಫ್ಟ್ ಈಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಜಾರ್ಜಿಯಾ ಮೆಲೋನಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಭಾರತದಿಂದ ನನಗೆ ತುಂಬಾ ವಿಶೇಷ ಉಡುಗೊರೆ ಬಂದಿದೆ ಎಂದು ಮೆಲೋನಿ ಹೇಳಿದ್ದಾರೆ. ಬಳಿಕ ಪ್ರಧಾನಿ ಮೋದಿ ಕೈಯಲ್ಲಿ ‘Melody’ ಚಾಕೊಲೇಟ್ ಪ್ಯಾಕೆಟ್ ಹಿಡಿದು Melodi ಎಂದು ನಗುತ್ತಾ ಹೇಳುವುದನ್ನು ನೋಡಬಹುದಾಗಿದೆ, (ಏಜನ್ಸೀಸ್).