ಸಾಂದರ್ಭಿಕ ಚಿತ್ರ 
ವಿದೇಶ

ಭೀಕರ ಪ್ರವಾಹ ಮಾಸುವ ಮುನ್ನವೇ ಟಿಬೆಟ್​ನಲ್ಲಿ ಭಾರಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆ ದಾಖಲು | Earthquake

ನೇಪಾಳ ಮತ್ತು ಚೀನಾ ಗಡಿಯಲ್ಲಿ ಭೀಕರ ಪ್ರವಾಹ ಬಂದು ದುರಂತ ಸಂಭವಿಸಿ ಮಾಸುವ ಮುನ್ನವೇ ಇಂದು(ಅ. 22) ಟಿಬೆಟ್​ನಲ್ಲಿ ಭಾರೀ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ.

ಲಾಸಾ: ನೇಪಾಳ ಮತ್ತು ಚೀನಾ ಗಡಿಯಲ್ಲಿ ಭೀಕರ ಪ್ರವಾಹ ಬಂದು ದುರಂತ ಸಂಭವಿಸಿ ಮಾಸುವ ಮುನ್ನವೇ ಇಂದು(ಅ. 22) ಟಿಬೆಟ್​ನಲ್ಲಿ ಭಾರೀ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಗುರುವಾರ ರಾತ್ರಿ ಭಾರತೀಯ ಕಾಲಮಾನ ಸುಮಾರು 8:03 ರ ಸುಮಾರಿಗೆ ಟಿಬೆಟ್‌ನಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.

ಚೀನಾ ಅರ್ಥ್‌ಕ್ವೇಕ್ ನೆಟ್‌ವರ್ಕ್ಸ್ ಸೆಂಟರ್ ನೀಡಿರುವ ಮಾಹಿತಿಯ ಪ್ರಕಾರ, ಉತ್ತರ ಟಿಬೆಟ್‌ನ ನಾಗ್ಕು ಪ್ರದೇಶದಲ್ಲಿ ಸ್ಥಳೀಯ ಕಾಲಮಾನ ರಾತ್ರಿ 10.33ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು 10 ಕಿ.ಮೀ ಆಳದಲ್ಲಿತ್ತು ಎಂದು ತಿಳಿಸಿದೆ.

ಭೂಕಂಪದ ಕೇಂದ್ರಬಿಂದು ಟಿಬೆಟಿಯನ್ ರಾಜಧಾನಿ ಲಾಸಾದಿಂದ ಸುಮಾರು 400 ಕಿ.ಮೀ ದೂರದಲ್ಲಿತ್ತು. ಭೂಕಂಪದಿಂದ ಉಂಟಾದ ಸಾವುನೋವುಗಳು ಅಥವಾ ಹಾನಿಯ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಿಲ್ಲ. ನೇಪಾಳ-ಚೀನಾ ಪರ್ವತಮಯ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತಗಳಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಸಾವಿರಾರು ಜನರು ಕಾಣೆಯಾದ ಕೆಲವು ವಾರಗಳ ಈ ಭೂಕಂಪ ಸಂಭವಿಸಿದೆ (ಏಜೆನ್ಸೀಸ್).