Donald Trump ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ರಷ್ಯಾ-ಯುಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯುಕ್ರೇನ್‌ಗೆ ತಕ್ಷಣದ ನಿರ್ಧಾರ ತೆಗೆದುಕೊಳ್ಳುವಂತೆ ಟ್ರಂಪ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಶುಕ್ರವಾರ ಓವಲ್ ಕಚೇರಿಯಲ್ಲಿ ನಡೆದ ಸಂಭಾಷಣೆಯ ಸಂದರ್ಭದಲ್ಲಿ ಮಾತನಾಡಿದ ಟ್ರಂಪ್, ಯುದ್ದದ ಸಮಯ ಮೀರುತ್ತಿರುವುದರಿಂದ ಯುಕ್ರೇನ್ ಈ ಪ್ರಸ್ತಾಪವನ್ನು ಒಪ್ಪಿಕೊಳ್ಳಬೇಕು. ಯುಕ್ರೇನ್ ಈ ಯೋಜನೆಯನ್ನು ಇಷ್ಟಪಡದಿದ್ದರೆ, ಯುದ್ದವನ್ನು ಮುಂದುವರಿಸಬಹುದು ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಯೋಜನೆಯ ಬಗ್ಗೆ ವಿಶೇಷವಾಗಿ ಉತ್ಸಾಹ ತೋರುತ್ತಿಲ್ಲ ಎಂದು ಪ್ರಶ್ನೆ ಮಾಡಿದಾಗ ಪ್ರತಿಕ್ರಿಯಿಸಿದ ಟ್ರಂಪ್, ಯುದ್ಧವನ್ನು ಕೊನೆಗೊಳಿಸಲು ಕೆಲವು ಒಪ್ಪಂದಗಳನ್ನು ತಲುಪಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಝೆಲೆನ್ಸ್ಕಿ, ತಮ್ಮ ದೇಶಕ್ಕೆ ದ್ರೋಹ ಬಗೆದ ಭಾವನೆ ಮೂಡಿಸುವ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಅಲ್ಲದೆ, 28 ಅಂಶಗಳ ದಾಖಲೆಯು ರಷ್ಯಾದ ಪರವಾಗಿ ಹೆಚ್ಚು ಪಕ್ಷಪಾತ ಹೊಂದಿದೆ ಮತ್ತು ಯುಕ್ರೇನ್‌ಗೆ ಗಮನಾರ್ಹ ಹಾನಿಯನ್ನು ಉಂಟುಮಾಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಯುಕ್ರೇನ್‌ಗೆ ಹೆಚ್ಚು ಸಮಯವಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರೇಡಿಯೋ ಸಂದರ್ಶನವೊಂದರಲ್ಲಿ, ನವೆಂಬರ್ 27 ರಂದು ಥ್ಯಾಂಕ್ಸ್ಗಿವಿಂಗ್ ದಿನವನ್ನು ಯುದ್ಧ ಯೋಜನೆಗೆ ಯುಕ್ರೇನ್‌ನ ಪ್ರತಿಕ್ರಿಯೆಗೆ ಸಮಂಜಸವಾದ ಗಡುವು ಎಂದು ಅಮೆರಿಕ ಅಧ್ಯಕ್ಷ ತಿಳಿಸಿದ್ದರು.
ಟ್ರಂಪ್ ಶಾಂತಿ ಪ್ರಸ್ತಾಪಕ್ಕೆ ಪುಟಿನ್ ಸಮ್ಮತಿ
ಈ ಬಗ್ಗೆ ಮಾಸ್ಕೋದಲ್ಲಿ ತಮ್ಮ ಭದ್ರತಾ ಮಂಡಳಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ವ್ಲಾಡಿಮಿರ್ ಪುಟಿನ್, 28 ಅಂಶಗಳ ಯೋಜನೆಯನ್ನು ಅನುಮೋದಿಸಿದರು. ಇದು ಅಂತಿಮ ಶಾಂತಿ ಒಪ್ಪಂದಕ್ಕೆ ಆಧಾರವಾಗಬಹುದು ಎಂದಿದ್ದಾರೆ.
ಅಲ್ಲದೆ, ಅಮೆರಿಕ ಕರಡಿನ ಪ್ರಕಾರ, ಯುಕ್ರೇನ್ ತನ್ನ ಪೂರ್ವ ಭಾಗದ ದೊಡ್ಡ ಪ್ರದೇಶವನ್ನು ರಷ್ಯಾಕ್ಕೆ ಬಿಟ್ಟುಕೊಡಬೇಕಾಗುತ್ತದೆ. ಯುಕ್ರೇನ್ ಸೈನ್ಯದ ಗಾತ್ರವೂ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಭವಿಷ್ಯದಲ್ಲಿ ಯುಕ್ರೇನ್ NATO ಗೆ ಸೇರುವುದಿಲ್ಲ ಎಂದು ಭರವಸೆ ನೀಡಬೇಕಾಗುತ್ತದೆ. ಪೋಲೆಂಡ್‌ಗೆ ಯುರೋಪಿಯನ್ ಫೈಟರ್ ಜೆಟ್‌ಗಳನ್ನು ನಿಯೋಜಿಸುವ ಆಯ್ಕೆಯನ್ನು ಇರಿಸಲಾಗಿದ್ದರೂ, ಯುಕ್ರೇನ್ ನಿರಂತರವಾಗಿ ಬೇಡಿಕೆಯಿಟ್ಟಿರುವ ಪಾಶ್ಚಿಮಾತ್ಯ ಶಾಂತಿಪಾಲನಾ ಪಡೆವನ್ನು ಸ್ವೀಕರಿಸುವುದಿಲ್ಲ,(ಏಜೆನ್ಸೀಸ್).