ಬರೋಬ್ಬರಿ 473 ಕೋಟಿ ರೂ. ಬೆಲೆಯ ಒಳಉಡುಪು ಧರಿಸಿ ಅಚ್ಚರಿ ಮೂಡಿಸಿದ ಕೈಲಿ ಜೆನ್ನರ್ 
ವಿದೇಶ

ಬರೋಬ್ಬರಿ 473 ಕೋಟಿ ರೂ. ಬೆಲೆಯ ಒಳಉಡುಪು ಧರಿಸಿ ಅಚ್ಚರಿ ಮೂಡಿಸಿದ ಕೈಲಿ ಜೆನ್ನರ್: ಏಕಿಷ್ಟು ದುಬಾರಿ? ಏನಿದರ ವಿಶೇಷತೆ? Kylie Jenner

ಭಾನುವಾರ ನಡೆದ ಈ ಬೃಹತ್ ಫ್ಯಾಷನ್ ಶೋನಲ್ಲಿ ಕೈಲಿ ಜೆನ್ನರ್ ಪ್ರದರ್ಶಿಸಿದ ಈ ವಿಶೇಷ ಬ್ರಾ 18 ಕ್ಯಾರೆಟ್ ಶುದ್ಧ ಚಿನ್ನ ಮತ್ತು ಬರೋಬ್ಬರಿ 4,410 ವಜ್ರಗಳಿಂದ ನಿರ್ಮಿಸಲ್ಪಟ್ಟಿದೆ. ಪ್ರಸಿದ್ಧ 'ವಿಕ್ಟೋರಿಯಾಸ್ ಸೀಕ್ರೆಟ್' ಸಂಸ್ಥೆಯು ಪ್ರಸಿದ್ಧ ಆಭರಣ ಬ್ರ್ಯಾಂಡ್ 'ಜಾಕೋಬ್ ಅಂಡ್ ಕೋ' (Jacob & Co) ಜೊತೆ ಕೈಜೋಡಿಸಿ ಈ ಹೊಸ ವಿನ್ಯಾಸದ ಬ್ರಾ ಅನ್ನು ಸಿದ್ಧಪಡಿಸಿದೆ.

ನವದೆಹಲಿ: ಇಂಟರ್ನೆಟ್‌ನಲ್ಲಿ ಈಗ ಎಲ್ಲೆಡೆ ಸದ್ದು ಮಾಡುತ್ತಿರುವ ಅತ್ಯಂತ ದುಬಾರಿ ಹಾಗೂ ಐಷರಾಮಿ ಬ್ರಾ ಒಂದರ ಬೆಲೆ ಕೇಳಿದರೆ ನಿಜಕ್ಕೂ ಬೆರಗಾಗುತ್ತೀರಿ. ರಿಯಾಲಿಟಿ ಶೋ ಸ್ಟಾರ್ ಹಾಗೂ ಉದ್ಯಮಿ ಕೈಲಿ ಜೆನ್ನರ್ ( Kylie Jenner ) ಅವರು ಇತ್ತೀಚೆಗೆ ನಡೆದ ಪ್ರತಿಷ್ಠಿತ 'ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಷನ್ ಶೋ'ನಲ್ಲಿ ಬರೋಬ್ಬರಿ 473 ಕೋಟಿ ರೂಪಾಯಿ ಮೌಲ್ಯದ ಬ್ರಾ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಫ್ಯಾಷನ್ ಪ್ರಿಯರನ್ನು ದಂಗುಬಡಿಸಿರುವ ಈ ಐಷರಾಮಿ ವಸ್ತುವಿನ ಹಿಂದಿನ ಅಚ್ಚರಿಯ ಕಥೆ ಇಲ್ಲಿದೆ.

ಭಾನುವಾರ ನಡೆದ ಈ ಬೃಹತ್ ಫ್ಯಾಷನ್ ಶೋನಲ್ಲಿ ಕೈಲಿ ಜೆನ್ನರ್ ಪ್ರದರ್ಶಿಸಿದ ಈ ವಿಶೇಷ ಬ್ರಾ 18 ಕ್ಯಾರೆಟ್ ಶುದ್ಧ ಚಿನ್ನ ಮತ್ತು ಬರೋಬ್ಬರಿ 4,410 ವಜ್ರಗಳಿಂದ ನಿರ್ಮಿಸಲ್ಪಟ್ಟಿದೆ. ಪ್ರಸಿದ್ಧ 'ವಿಕ್ಟೋರಿಯಾಸ್ ಸೀಕ್ರೆಟ್' ಸಂಸ್ಥೆಯು ಪ್ರಸಿದ್ಧ ಆಭರಣ ಬ್ರ್ಯಾಂಡ್ 'ಜಾಕೋಬ್ ಅಂಡ್ ಕೋ' (Jacob & Co) ಜೊತೆ ಕೈಜೋಡಿಸಿ ಈ ಹೊಸ ವಿನ್ಯಾಸದ ಬ್ರಾ ಅನ್ನು ಸಿದ್ಧಪಡಿಸಿದೆ.

ಇದು ಇದುವರೆಗೆ ಜಗತ್ತಿನಲ್ಲಿಯೇ ತಯಾರಾದ ಅತ್ಯಂತ ದುಬಾರಿ ಮತ್ತು ಬೆಲೆಬಳಕೆಯ ಬ್ರಾ ಎಂದು ಜಾಕೋಬ್ ಅಂಡ್ ಕೋ ಸಂಸ್ಥೆ ಅಧಿಕೃತವಾಗಿ ಹೇಳಿಕೊಂಡಿದೆ. ಕೇವಲ ಈ ಒಂದೇ ಒಂದು ಸುಂದರ ಕಲಾಕೃತಿಯನ್ನು ಪೂರ್ಣಗೊಳಿಸಲು ಬಸು 15 ಜನ ನುರಿತ ಕಲಾವಿದರು ಒಟ್ಟಾಗಿ ಬರೋಬ್ಬರಿ 1,000 ಗಂಟೆಗಳ ಕಾಲ ಶ್ರಮ ವಹಿಸಿದ್ದಾರೆ.

ಮತ್ತೊಂದೆಡೆ, ಕೈಲಿ ಜೆನ್ನರ್ ಅವರ ಈ ವಿಶೇಷ ಲುಕ್ ವಿಕ್ಟೋರಿಯಾಸ್ ಸೀಕ್ರೆಟ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕ ನೆಟ್ಟಿಗರು ಮತ್ತು ಫ್ಯಾಷನ್ ಪ್ರಿಯರು ಈ ಅತ್ಯುನ್ನತ ಫ್ಯಾಷನ್ ಪ್ರದರ್ಶನಕ್ಕೆ ಕೈಲಿ ಜೆನ್ನರ್ ಅವರನ್ನು ಆಯ್ಕೆ ಮಾಡಿಕೊಂಡಿರುವುದನ್ನು ತೀವ್ರವಾಗಿ ಟೀಕಿಸಿದ್ದಾರೆ. ಇದು ವೃತ್ತಿಪರ ಮತ್ತು ಅಪ್ಪಟ ಮಾಡೆಲ್‌ಗಳಿಗೆ ಮಾಡಿರುವ ದೊಡ್ಡ ಅಗೌರವ ಎಂದು ವಾದಿಸುತ್ತಿರುವ ನೆಟ್ಟಿಗರು, ಮಾಡೆಲಿಂಗ್ ಲೋಕದ ಹೊರಗಿನವರನ್ನು ಈ ಪ್ರಮುಖ ವೇದಿಕೆಗೆ ಆಹ್ವಾನಿಸಿದ್ದು ಯಾಕೆ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ.

ಈ ಸಾರ್ವಜನಿಕ ಟೀಕೆಗಳಿಗೆ ವಿಕ್ಟೋರಿಯಾಸ್ ಸೀಕ್ರೆಟ್‌ನ ಸಿಸಿಒ ಆಡಮ್ ಸೆಲ್ಮನ್ ಉತ್ತರಿಸಿದ್ದು, ಕೈಲಿ ಜೆನ್ನರ್ ಕೇವಲ ಒಂದು ಕ್ಷೇತ್ರಕ್ಕೆ ಅಥವಾ ಫ್ಯಾಷನ್‌ಗೆ ಮಾತ್ರ ಸೀಮಿತವಾದವರಲ್ಲ, ಅವರು ದೂರದೃಷ್ಟಿ ಹೊಂದಿರುವ ವ್ಯಕ್ತಿ. ಫ್ಯಾಷನ್, ದೂರದರ್ಶನ ಅಥವಾ ಸಂಸ್ಕೃತಿ ಹೀಗೆ ಎಲ್ಲ ರಂಗಗಳಲ್ಲೂ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ ಮತ್ತು ಸಮಾಜದ ಒಳ್ಳೆಯ ಜನರಿಂದಲೂ ಒಪ್ಪಿಕೊಳ್ಳಲ್ಪಟ್ಟಿದ್ದಾರೆ. ಹಾಗಾಗಿಯೇ ಅವರನ್ನು ಈ ಮಹತ್ವದ ಪ್ರದರ್ಶನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಷನ್ ಶೋ ಇತಿಹಾಸವನ್ನು ಗಮನಿಸಿದರೆ, ಲಿಂಗ ಪಕ್ಷಪಾತ ಮತ್ತು ವೈವಿಧ್ಯತೆಯ ಕೊರತೆಯ ಟೀಕೆಗಳಿಂದಾಗಿ 2018ರಲ್ಲಿ ಈ ಕಾರ್ಯಕ್ರಮದ ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿತ್ತು. ಹಳೆಯ ಕಾಲದ ಧೋರಣೆಯನ್ನು ಹೊಂದಿದೆಯೆಂಬ ಕಾರಣಕ್ಕೆ ಶೋ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲೂ ಆಗಿತ್ತು. ಆದರೆ, 2024ರಲ್ಲಿ ಹೊಸ ರೂಪದೊಂದಿಗೆ ಪುನರಾರಂಭಗೊಂಡ ಈ ಕಾರ್ಯಕ್ರಮವು ಪ್ಲಸ್-ಸೈಜ್ ಮಾಡೆಲ್‌ಗಳಿಗೂ ಅವಕಾಶ ನೀಡುವ ಮೂಲಕ ಮತ್ತೆ ಹಿಂದಿನ ಜನಪ್ರಿಯತೆ ಮತ್ತು ವೀಕ್ಷಕರನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಈ ಕೋಟ್ಯಂತರ ರೂ. ಬೆಲೆಯ ವಜ್ರದ ಬ್ರಾ ವಿಚಾರವು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್​).