ಅಮೆರಿಕದ ಅಹಂಕಾರಕ್ಕೆ ಇರಾನ್ ಮರ್ಮಾಘಾತ!ಬಾಂಬ್ ಇಲ್ಲದೆ ಮಹಾಶಕ್ತಿಯನ್ನು ಮಣಿಸಿದ್ದೇಗೆ.
ಟೆಹ್ರಾನ್: ವಿಶ್ವದ ಅತ್ಯಂತ ಶಕ್ತಿಶಾಲಿ ಸೇನೆ, ಎಫ್-35 ಫೈಟರ್ ಜೆಟ್‌ಗಳು, ಅಣುಶಕ್ತಿ ಚಾಲಿತ ಸಬ್‌ಮರೀನ್‌ಗಳು, ಇವೆಲ್ಲವೂ ಅಮೆರಿಕದ(Ghost War) ಹೆಮ್ಮೆಯಾಗಿದೆ. ಆದರೆ, ಕಳೆದ 15 ವರ್ಷಗಳಿಂದ ಅಮೆರಿಕ ಒಂದು ವಿಚಿತ್ರ ಮತ್ತು ಭೀಕರ ಯುದ್ಧವನ್ನು ಎದುರಿಸುತ್ತಿದೆ. ಈ ಯುದ್ಧದಲ್ಲಿ ಯಾವುದೇ ಬಾಂಬ್ ಸ್ಫೋಟಗೊಳ್ಳುವುದಿಲ್ಲ, ಯಾವುದೇ ಕ್ಷಿಪಣಿ ಹಾರುವುದಿಲ್ಲ. ಆದರೂ ಅಮೆರಿಕದ ಹೆಮ್ಮೆಯ ಕೋಟೆಗಳು ಒಂದೊಂದಾಗಿ ಕುಸಿಯುತ್ತಿವೆ. ಇದನ್ನು ಇರಾನ್‌ನ ಸೈಬರ್ ಅಟ್ಯಾಕ್ ಅಥವಾ 'ಘೋಸ್ಟ್ ವಾರ್' (Ghost War) ಎಂದು ಕರೆಯಲಾಗುತ್ತಿದೆ.
ಕಂಪ್ಯೂಟರ್ ಸ್ಕ್ರೀನ್ ಹಿಂದಿನ ಮಹಾಯುದ್ಧ
ಅಮೆರಿಕವು ಬಿಲಿಯನ್ ಡಾಲರ್ ವೆಚ್ಚದ ಶಸ್ತ್ರಾಸ್ತ್ರಗಳನ್ನು ಹೊಂದಿರಬಹುದು, ಆದರೆ ಶತ್ರು ಕಣ್ಣಿಗೆ ಕಾಣಿಸದಿದ್ದಾಗ ಆ ಶಸ್ತ್ರಾಸ್ತ್ರಗಳು ವ್ಯರ್ಥವಾಗುತ್ತವೆ. ಇರಾನ್ ಕಳೆದ ಒಂದೂವರೆ ದಶಕದಿಂದ ಅಮೆರಿಕದ ವಿರುದ್ಧ ಡಿಜಿಟಲ್ ಲೋಕದಲ್ಲಿ ಸಮರ ಸಾರಿದೆ. ಸಿಐಎ (CIA) ಮಾಜಿ ಮುಖ್ಯಸ್ಥ ಜಾನ್ ಬ್ರೆನ್ನನ್ ಅವರೇ ಒಪ್ಪಿಕೊಂಡಂತೆ, ಇರಾನ್‌ನ ಸೈಬರ್ ಸಾಮರ್ಥ್ಯವು ಅತ್ಯಂತ ಮುಂದುವರಿದಿದ್ದು, ಅದು ಅಮೆರಿಕದ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಶಕ್ತಿ ಹೊಂದಿದೆ ಎಂದು ಹೇಳಿದ್ದಾರೆ.
ಆಪರೇಷನ್ ಅಬಾಬಿಲ್: ಬ್ಯಾಂಕಿಂಗ್ ವ್ಯವಸ್ಥೆಗೆ ಪಾರ್ಶ್ವವಾಯು
2011 ರಿಂದ 2013ರ ಅವಧಿಯಲ್ಲಿ ಇರಾನ್ ತನ್ನ ಶಕ್ತಿಯನ್ನು ಮೊದಲ ಬಾರಿಗೆ ಜಗತ್ತಿಗೆ ತೋರಿಸಿತು. ಆಪರೇಷನ್ ಅಬಾಬಿಲ್ ಮೂಲಕ ಅಮೆರಿಕದ ದೊಡ್ಡ ಬ್ಯಾಂಕುಗಳಾದ ಜೆಪಿ ಮೋರ್ಗನ್ ಚೇಸ್ ಮತ್ತು ಬ್ಯಾಂಕ್ ಆಫ್ ಅಮೆರಿಕದ ಮೇಲೆ ಡಿಡಾಸ್ ದಾಳಿ ನಡೆಸಲಾಯಿತು.
ಏನಿದು ದಾಳಿ: ಇದು ಒಂದು ಬ್ಯಾಂಕಿನ ಬಾಗಿಲಿಗೆ ಸಾವಿರಾರು ನಕಲಿ ಗ್ರಾಹಕರನ್ನು ನಿಲ್ಲಿಸಿ ಅಸಲಿ ಗ್ರಾಹಕರು ಒಳಗೆ ಹೋಗದಂತೆ ತಡೆಯುವ ತಂತ್ರವಾಗಿದೆ. ಇದರಿಂದ ಅಮೆರಿಕದ ಹಣಕಾಸು ವ್ಯವಸ್ಥೆ ದಿಕ್ಕೆಟ್ಟು ಹೋಯಿತು.
2013ರ ಡ್ಯಾಮ್ ಹ್ಯಾಕಿಂಗ್: ಬೆಡ್‌ರೂಮ್‌ಗೆ ನುಗ್ಗಿದ ಶತ್ರು!
ಇರಾನ್ ಕೇವಲ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಿಲ್ಲ. 2013ರಲ್ಲಿ ನ್ಯೂಯಾರ್ಕ್‌ನ ಬೋಮನ್ ಅವೆನ್ಯೂ ಡ್ಯಾಮ್‌ನ ನಿಯಂತ್ರಣ ವ್ಯವಸ್ಥೆಯನ್ನು ಹ್ಯಾಕ್ ಮಾಡುವ ಮೂಲಕ ಅಮೆರಿಕದ ಬೆನ್ನಿಗೆ ಚೂರಿ ಹಾಕಿತು. ಒಂದು ವೇಳೆ ಹ್ಯಾಕರ್ಸ್‌ಗಳು ಅಣೆಕಟ್ಟಿನ ಗೇಟ್ ತೆರೆದಿದ್ದರೆ ಅಥವಾ ವಿದ್ಯುತ್ ಗ್ರಿಡ್‌ಗಳನ್ನು ಆಫ್ ಮಾಡಿದ್ದರೆ ಅಮೆರಿಕದ ನಗರಗಳೇ ಕತ್ತಲೆಯಲ್ಲಿ ಮುಳುಗುತ್ತಿದ್ದವು. ಶತ್ರು ತನ್ನ ಮನೆಯ ಬೆಡ್‌ರೂಮ್‌ವರೆಗೆ ಬಂದಿದ್ದಾನೆ ಎಂಬ ಅರಿವು ಅಮೆರಿಕಕ್ಕೆ ಆಗಿದ್ದೇ ಆಗ.
ಆಪರೇಷನ್ ಕ್ಲೀವರ್: ರಹಸ್ಯ ಬೇಹುಗಾರಿಕೆ
2012-2014ರ ಅವಧಿಯಲ್ಲಿ ಇರಾನ್ ತನ್ನ ತಂತ್ರ ಬದಲಿಸಿತು. ಅಮೆರಿಕದ ವಿಮಾನ ನಿಲ್ದಾಣಗಳು, ಇಂಧನ ಕಂಪನಿಗಳು ಮತ್ತು ಸಾರಿಗೆ ವ್ಯವಸ್ಥೆಗಳ ಒಳಗೆ ಹ್ಯಾಕರ್ಸ್‌ಗಳು ರಹಸ್ಯವಾಗಿ ನುಗ್ಗಿದರು. ಇದು ಕೇವಲ ದಾಳಿಯಲ್ಲ, ಬದಲಾಗಿ ಅಮೆರಿಕದ ಪ್ರಮುಖ ವ್ಯವಸ್ಥೆಗಳ ಪಾಸ್‌ವರ್ಡ್ ಮತ್ತು ಸೇಫ್ ಲಾಕರ್ಗಳ ಮಾಹಿತಿ ಕದಿಯುವ ಸಿದ್ಧತೆಯಾಗಿತ್ತು.
ಸೊಲೈಮಾನಿ ಹತ್ಯೆ ಮತ್ತು ಡಿಜಿಟಲ್ ಪ್ರತೀಕಾರ
2020ರಲ್ಲಿ ಅಮೆರಿಕವು ಇರಾನ್ ಕಮಾಂಡರ್ ಖಾಸಿಂ ಸೊಲೈಮಾನಿಯನ್ನು ಹತ್ಯೆ ಮಾಡಿದಾಗ, ಇರಾನ್ ಕ್ಷಿಪಣಿಗಳ ಜೊತೆಗೆ ಸೈಬರ್ ದಾಳಿಯನ್ನೂ ತೀವ್ರಗೊಳಿಸಿತು. ಅಮೆರಿಕದ ಸರ್ಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಎಚ್ಚರಿಕೆಯ ಸಂದೇಶಗಳನ್ನು ಹಾಕುವ ಮೂಲಕ ಅಮೆರಿಕಕ್ಕೆ ಮಾನಸಿಕ ಪೆಟ್ಟು ನೀಡಿತು.
ಅಮೆರಿಕ ಏಕೆ ಸೋಲುತ್ತಿದೆ..?
ಅಮೆರಿಕವು ಒಂದು ಸರ್ವರ್ ರೂಮ್ ಮೇಲೆ ಅಣುಬಾಂಬ್ ಹಾಕಲು ಸಾಧ್ಯವಿಲ್ಲ. ಆದರೆ ಆ ಸರ್ವರ್ ರೂಮ್‌ನಲ್ಲಿ ಕುಳಿತಿರುವ ಒಬ್ಬ ಹ್ಯಾಕರ್ ಅಮೆರಿಕದ ಇಡೀ ನಗರದ ಲೈಟ್ ಆಫ್ ಮಾಡಬಲ್ಲ. ಇದನ್ನೇ ಅಸಮಪಾರ್ಶ್ವದ ಯುದ್ಧ ಎನ್ನುತ್ತಾರೆ. ಇರಾನ್ ತನ್ನ ಬಳಿ ಚೀನಾ ಅಥವಾ ರಷ್ಯಾದಷ್ಟು ದೊಡ್ಡ ಸೈಬರ್ ಆರ್ಮಿ ಇಲ್ಲದಿದ್ದರೂ, ಇರುವ ಅಲ್ಪ ಸಾಮರ್ಥ್ಯವನ್ನೇ ಅತ್ಯಂತ ಅಪಾಯಕಾರಿ ಉದ್ದೇಶಗಳಿಗಾಗಿ ಬಳಸುತ್ತಿದೆ,(ಏಜೆನ್ಸೀಸ್).
ಕಳೆದ 15 ವರ್ಷಗಳ ಮೌನ ಸಿದ್ಧತೆ ಇಂದು ಅಮೆರಿಕದಂತಹ ಮಹಾಶಕ್ತಿಯನ್ನು ಅಸಹಾಯಕವನ್ನಾಗಿ ಮಾಡಿದೆ. ಡಿಜಿಟಲ್ ಕುರುಕ್ಷೇತ್ರದಲ್ಲಿ ಇರಾನ್‌ನ ಒಂದು 'ಎಂಟರ್' ಬಟನ್ ಅಮೆರಿಕದ ಬಿಲಿಯನ್ ಡಾಲರ್ ಶಸ್ತ್ರಾಸ್ತ್ರಗಳಿಗಿಂತ ಶಕ್ತಿಯುತವಾಗಿ ಪರಿಣಮಿಸಿದೆ,(ಏಜೆನ್ಸೀಸ್).