ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ
- ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ!
- ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ
- ಯುಎಸ್ ಡ್ರೋನ್ ಹೊಡೆದುರುಳಿಸಿದ ಇರಾನ್ ಐಆರ್‌ಜಿಸಿ ಪಡೆ
ತೆಹ್ರಾನ್: ಸತತ ನಾಲ್ಕು ತಿಂಗಳುಗಳ ನಂತರ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಿದೆ ಎಂದು ನಿಟ್ಟುನಿರು ಬೀಡುವ ಮುನ್ನವೇ ಮತ್ತೆ ಮಿಸೈಲ್ ದಾಳಿಗಳು ಪ್ರಾರಂಭವಾಗಿದೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ಬುಧವಾರ (ಜು.8) ಕುವೈತ್ ಮತ್ತು ಬಹ್ರೆನ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ (Iran Attack on US Military Base) ಮೇಲೆ ಇರಾನ್ನ ಮಿಲಿಟರಿ ಪಡೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮಿಸೈಲ್ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಐಜಿಆರ್ಸಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಬಹ್ರೇನ್‌ನ ಐದನೇ ನೌಕಾ ಜಿಲ್ಲೆಗೆ ನೆಲೆಯಾಗಿರುವ ಬಂದರ್ ಸಲ್ಮಾನ್ ಮತ್ತು ಕುವೈತ್‌ನಲ್ಲಿರುವ ಅಲಿ ಅಲ್ ಸೇಲಂ ವಾಯುನೆಲೆ ಮೇಲೆ ದಾಳಿ ನಡೆಸಲಾಗಿದ್ದು, ಇದನ್ನು ತಡೆಯಲು ಬಂದ ಅಮೆರಿಕದ ಎಮ್.ಕ್ಯೂ 9 ಎಂಬ ಡ್ರೋನ್ನನ್ನು ಹೊಡೆದುರಳಿಸಿರುವುದಾಗಿ ಹೇಳಿಕೊಂಡಿದೆ.
ಅಮೆರಿಕದ ದಾಳಿಗೆ ನಾವು ಹೆದರಲ್ಲ!
ಕುವೈತ್ ಹಾಗೂ ಬಹ್ರೆನ್ ಮೇಲೆ ಇರಾನ್ ದಾಳಿ ನಡೆಸುವ ಹಿಂದಿನ ದಿನ ಅಮೆರಿಕ ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಮೂರು ವಾಣಿಜ್ಯ ಹಡುಗಗಳ ಮೇಲೆ ದಾಳಿ ನಡೆಸಿತ್ತು ಎನ್ನುವುದು ಇರಾನ್ ಮಾಡಿದ ಆರೋಪವಾಗಿದೆ.
ಅಮೆರಿಕದ ಜೊತೆ ನಡೆದಿರುವ ಮಾತುಕತೆಯಲ್ಲಿ ಹೊರ್ಮುಜ್ ಜಲಸಂಧಿಯಲ್ಲಿ ವಿದೇಶಿ ಪಡೆಗಳು ದಾಳಿ ನಡೆಸುವಂತಿಲ್ಲ ಎಂದು ಹೇಳಲಾಗಿದೆ. ಆದರೆ ಅಮೆರಿಕ ಇದನ್ನು ಮುರಿದಿದೆ, ಹೀಗಾಗಿ ನಾವು ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದೆವೆಂದು ಇರಾನ್ ಹೇಳಿದೆ.
ಇರಾನ್ ಮೇಲೆ ಅಮೆರಿಕ ದಾಳಿ ನಿಲ್ಲಿಸುತ್ತಿಲ್ಲ!
ಅಮೆರಿಕ ಒಂದು ಕಡೆ ಇರಾನ್ ಜೊತೆ ಮಾತುಕತೆ ನಡೆಸುತ್ತಿದ್ದರೆ, ಇನ್ನೊಂದು ಕಡೆಯಿಂದ ದಾಳಿಯನ್ನು ಮುಂದುವರಿಸಿದೆ. ಮೊನ್ನೆ ಇರಾನ್ ಪಡೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ ಮಾಡಿದೆ ಎಂದು ಅಲ್ಲಿಯ ಮಾಧ್ಯಮಗಳು ವರದಿ ಮಾಡಿದ್ದವು.
ಹಾಗೆಯೇ ಇರಾನ್ನ ದಕ್ಷಿಣ ಪ್ರಾಂತ್ಯಗಳಲ್ಲಿ ಸರಣಿ ಆರು ಸ್ಪೋಟ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಶ್ಮ್ ದ್ವೀಪ, ಸಿರಿಕ್ ಹಾಗೂ ಹೊರ್ಮುಗೆ ಹತ್ತಿರದಲ್ಲಿರುವ ಬಂದರ್ ಅಬ್ಬಾಸ್‌ನಲ್ಲಿ ಈ ಸ್ಪೋಟ ನಡೆದಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಇರಾನ್ನ ತೈಲ ಸಂಸ್ಕರಣಾ ಹಾಗೂ ಸರಬರಾಜು ಘಟಕಗಳಿದ್ದು, ಇದನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ದಾಳಿಗೆ ಪ್ರತೀಕಾರವೆಂಬಂತೆ ಇರಾನ್, ಕುವೈತ್ ಹಾಗೂ ಬಹ್ರೆನ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಜಾಗತಿಕ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ. ಕೆಲ ದಿನಗಳಿಂದ ಇರಾನ್ನ ಮಾಜಿ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ನಡೆಯುತ್ತಿತ್ತು. ಈಗ ಇದು ಮುಗಿದ ನಂತರ ಮತ್ತೆ ಯುದ್ಧದ ಕಾರ್ಮೋಡ ಕವಿದಂತಾಗಿದೆ, (ಏಜನ್ಸೀಸ್).