ಇರಾಕ್ ಮೇಲೆ ಇರಾನ್ ಡ್ರೋನ್ ದಾಳಿ 
ವಿದೇಶ

ಮೂರನೇ ಮಹಾಯುದ್ಧಕ್ಕೆ ಆಹ್ವಾನ? ಇರಾಕ್​ ಮೇಲೆ ಡ್ರೋನ್​ ದಾಳಿ ನಡೆಸಿದ ಇರಾನ್​; ಮಾತುಕತೆ ಮುರಿದು ಬಿದ್ದರೆ ಯುದ್ಧದಿಂದಲೇ ಪರಿಹಾರ: ಟ್ರಂಪ್​ ಘೋಷಣೆ! Iran Attack Iraq

ಪ್ರಮುಖ ಮುಖ್ಯಾಂಶಗಳು

  • ಇರಾಕ್ ಮೇಲೆ ಇರಾನ್ ಡ್ರೋನ್ ದಾಳಿ
  • ಮೂರನೇ ಮಹಾಯುದ್ಧಕ್ಕೆ ಆಹ್ವಾನ?
  • ಮಾತುಕತೆ ಮುರಿದು ಬಿದ್ದರೆ ಯುದ್ಧವೇ ಅಂತಿಮ ಪರಿಹಾರ ಎಂದು ಡೊನಾಲ್ಡ್ ಟ್ರಂಪ್
ಬಾಗ್ದಾದ್: ಕಳೆದ ಕೆಲ ತಿಂಗಳಿನಿಂದ ಶಾಂತವಾಗಿದ್ದ ಮಧ್ಯಪ್ರಾಚ್ಯದಲ್ಲಿ ಈಗ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಇಷ್ಟು ದಿನ ಅಮೆರಿಕ ಮೇಲೆ ಕಿಡಿ ಕಾರುತ್ತಿದ್ದ ಇರಾನ್​ ಈಗ ತಮ್ಮ ಸಾಂಪ್ರದಾಯಿಕ ವೈರಿ ಇರಾಕ್ (Iran Attack Iraq)​ ಮೇಲೆ ದಾಳಿ ಮಾಡಿರುವುದು ಮೂರನೇ ಮಹಾಯುದ್ಧಕ್ಕೆ ನೀಡಿದ ಆಹ್ವಾನವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಬಣ್ಣಿಸುತ್ತಿದ್ದಾರೆ.
ಇಂದು (ಮಂಗಳವಾರ, ಜು.28) ಮುಂಜಾನೆ ಇರಾಕ್​ನ ಅತ್ಯಂತ ದೊಡ್ಡದ ಅನಿಲ (ಗ್ಯಾಸ್​) ಸಂರಕ್ಷಣಾ ಘಟಕದ ಮೇಲೆ ಇರಾನ್​ ಡ್ರೋನ್​ ದಾಳಿ ನಡೆಸಿದೆ ಎಂದು ಇರಾಕ್​ನ ಮಾಧ್ಯಮಗಳು ವರದಿ ಮಾಡಿವೆ.

ಇರಾಕ್​ ಮೇಲೆ ಹಾರಿದ ಇರಾನ್​ ಡ್ರೋನ್​ಗಳು!

ಎರ್ಬಿಲ್‌ ಪ್ರದೇಶದಲ್ಲಿ ತಡ ರಾತ್ರಿಯಿಂದ ಡ್ರೋನ್​ ದಾಳಿ ಮುಂದುವರಿದಿದ್ದು, ದೇಶದಲಿದ್ದ ವಿದ್ಯುತ್​ ಸ್ಥಾವರಗಳಿಗೆ ಅನಿಲವನ್ನು ಪೂರೈಕೆ ಮಾಡುತ್ತಿದ್ದ ಪ್ರದೇಶದ ಮೇಲೆ ನಡೆದಿರುವ ದಾಳಿಯನ್ನು ಇರಾಕ್​ ಖಂಡಿಸಿದೆ.
ಇರಾನ್​ ಜೊತೆ ರಾಜತಾಂತ್ರಿಕ ಮಾತುಕತೆ ವಿಫಲವಾದರೆ, ಮಿಲಿಟರಿ ಮಾರ್ಗದ ಮೂಲಕ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆ ಬೆನ್ನಲ್ಲೆ ಇರಾನ್​, ಇರಾಕ್​ ಮೇಲೆ ದಾಳಿ ನಡೆಸಿದೆ.

ಹೊರ್ಮುಜ್​ ವಿವಾದವೇ ಇದಕ್ಕೆಲ್ಲಾ ಕಾರಣ!

ಅಮೆರಿಕ ಮತ್ತು ಇರಾನ್​ ನಡುವೆ ಈ ಸಂಘರ್ಷ ಮತ್ತೆ ಆರಂಭವಾಗಲು ಹೊರ್ಮುಜ್​ ಜಲಸಂಧಿ ವಿವಾದವೇ ಕಾರಣ ಎಂದು ಹೇಳಲಾಗುತ್ತಿದೆ. ಇರಾನ್​ ಹೊರ್ಮುಜ್​ನಲ್ಲಿ ಚಲಿಸುವ ಪ್ರತಿ ಹಡಗುಗಳ ಮೇಲೆ ತೆರಿಗೆ ವಿಧಿಸಲು ಮುಂದಾಗಿದ್ದರೆ, ಅಮೆರಿಕ ಇದಕ್ಕೆ ಒಪ್ಪಿಗೆ ಸುಚಿಸುತ್ತಿಲ್ಲ.
ಅಮೆರಿಕ ಹೊರ್ಮುಜ್​ ಕುರಿತು ಒಪ್ಪಂದ ಮಾಡಿಕೊಳ್ಳದ ಹಿನ್ನಲೆ ಇರಾನ್​ ಕೂಡ ಪರಮಾಣು ಅಸ್ತ್ರಹೊಂದುವುದಿಲ್ಲ ಎಂದು ಸಹಿ ಹಾಕಲು ಹಿಂದೇಟು ಹಾಕುತ್ತಿದೆ. ಈ ಹಿನ್ನಲೆಯಲ್ಲಿ ಅಮೆರಿಕ ಇರಾನ್​ ಮೇಲೆ ದಾಳಿ ನಡೆಸಿದರೆ, ಇರಾನ್​ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಸೈನ್ಯದ ನೆಲೆಗಳನ್ನು ಗುರಿಮಾಡಿ ಪ್ರತಿದಾಳಿ ನಡೆಸುತ್ತಿದೆ.
ಆದರೆ ಇಷ್ಟು ದಿನ, ದುಬೈ, ಒಮನ್​, ಕತಾರ್​ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸುತ್ತಿದ್ದ ಇರಾನ್​ ಇಂದು ಇರಾಕ್​ ಮೇಲೆ ದಾಳಿ ನಡೆಸಿರುವುದು ಒಂದು ಕೆಟ್ಟ ರಾಜತಾಂತ್ರಿಕ ನಿರ್ಧಾರವಾಗಿದೆ ಎನ್ನುವುದು ಜಾಗತಿಕ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ, (ಏಜನ್ಸೀಸ್​).