ಇರಾನ್​ ಧ್ವಜ ಹಿಡಿದಿದ್ದ ವ್ಯಕ್ತಿಯಿಂದ ಟೆಕ್ಸಾಸ್​ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ದುರ್ಮರಣ! Indian origin student  
ವಿದೇಶ

ಇರಾನ್​ ಧ್ವಜ ಹಿಡಿದಿದ್ದ ವ್ಯಕ್ತಿಯಿಂದ ಟೆಕ್ಸಾಸ್​ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ದುರ್ಮರಣ! Indian origin student

ಪ್ರಮುಖ ಮುಖ್ಯಾಂಶಗಳು

  • ಟೆಕ್ಸಾಸ್​ನ ಆಸ್ಟಿನ್​ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವು
  • ದಾಳಿಕೋರನನ್ನು ಎನ್‌ಡಿಯಾಗಾ ಡಯಾಗ್ನೆ ಎಂದು ಗುರುತಿಸಲಾಗಿದೆ
  • ಮೃತಪಟ್ಟವರಲ್ಲಿ 21 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿ ಸವಿತಾ ಶಾನ್ ಕೂಡ ಒಬ್ಬರು
Indian Origin Student : ಟೆಕ್ಸಾಸ್​ನ ಆಸ್ಟಿನ್​ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವಿಗೀಡಾಗಿದ್ದು, ಒಂದು ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಾಳಿಕೋರನನ್ನು ಎನ್‌ಡಿಯಾಗಾ ಡಯಾಗ್ನೆ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ 21 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿ ಸವಿತಾ ಶಾನ್ ಕೂಡ ಒಬ್ಬರು. ಸವಿತಾ ಅವರು ಟೆಕ್ಸಾಸ್​ ವಿಶ್ವವಿದ್ಯಾಲಯದಲ್ಲಿ ಹಾನರ್ಸ್ ಪದವಿ ಪಡೆಯುತ್ತಿದ್ದರು. ಬುಫೋರ್ಡ್‌ನ ಬ್ಯಾಕ್‌ಯಾರ್ಡ್ ಬಿಯರ್ ಗಾರ್ಡನ್‌ನಲ್ಲಿ ಈ ದಾಳಿ ನಡೆದಿದೆ. ಇದು ವಿದ್ಯಾರ್ಥಿಗಳ ನೆಚ್ಚಿನ ಹೋಟೆಲ್​ ಆಗಿದ್ದು, ವಿದ್ಯಾರ್ಥಿಗಳೆಲ್ಲರು ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಿದ್ದರು.
ಇನ್ನು ಈ ಘಟನೆಯ ಬಗ್ಗೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಮತ್ತು ಅಧಿಕಾರಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಸವಿತಾ ಅವರು ಈ ಜಗತ್ತಿನಲ್ಲಿ ಬದಲಾವಣೆ ತರಲು ಬಯಸಿದ್ದ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಈ ಘಟನೆ ಸಂಪೂರ್ಣ ಮನನೋಯಿಸುವಂಥದ್ದು ಎಂದಿದ್ದಾರೆ. ಸವಿತಾ ಅವರು ವಿಶ್ವವಿದ್ಯಾನಿಲಯದ ಸೂಪರ್‌ಸ್ಟಾರ್ ಆಗಿದ್ದರು ಮತ್ತು ಆಕೆಗೆ ಉಜ್ವಲ ಭವಿಷ್ಯ ಇತ್ತು ಎಂದು ಪ್ರಾಧ್ಯಾಪಕರು ಹೇಳಿದ್ದಾರೆ.
ಅಂದಹಾಗೆ, ಈ ದಾಳಿಯಲ್ಲಿ 19 ವರ್ಷದ ರೈಡರ್ ಹ್ಯಾರಿಂಗ್ಟನ್ ಮತ್ತು 30 ವರ್ಷದ ಜಾರ್ಜ್ ಪೆಡರ್ಸನ್ ಎಂಬುವರು ಸಹ ಮೃತಪಟ್ಟಿದ್ದಾರೆ. ಬಿಬಿಸಿ ಪ್ರಕಾರ, ಬಂದೂಕುಧಾರಿ "ಅಲ್ಲಾಹನ ಆಸ್ತಿ" ಎಂದು ಬರೆದಿರುವ ಸ್ವೆಟ್‌ಶರ್ಟ್ ಧರಿಸಿದ್ದ. ಅವನು ಇರಾನಿನ ಧ್ವಜ ಮತ್ತು ಇಸ್ಲಾಮಿಕ್ ಗಣರಾಜ್ಯದ ನಾಯಕರ ಚಿತ್ರಗಳನ್ನು ತನ್ನೊಂದಿಗೆ ಕೊಂಡೊಯ್ದಿದ್ದ ಎಂದು ಹೇಳಲಾಗಿದೆ.
ಈ ದಾಳಿಯು ಇರಾನ್​​ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ಹತಾಶೆಯಲ್ಲಿ ನಡೆಸಲಾದ ಸೇಡಿನ ದಾಳಿ ಎಂದು ಹೇಳಲಾಗಿದೆ, (ಏಜೆನ್ಸೀಸ್​).