ತರುಣ್ ಶರ್ಮಾ ಮತ್ತು ಅವರ ಪತ್ನಿ ಕೋಶಾ ಶರ್ಮಾ
ವಾಷಿಂಗ್ಟನ್: ಅಮೆರಿಕಾದ ಉತ್ತರ ವರ್ಜಿನಿಯಾದಲ್ಲಿ ಮಾದಕವಸ್ತು ಮಾರಾಟ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಮೇಲೆ ಭಾರತೀಯ ಮೂಲದ ಅಮೆರಿಕನ್ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ(Arrested) ಎಂದು ಸೋಮವಾರ(ಜ. 19) ವರದಿಯಾಗಿದೆ.
ಕೋಶಾ ಶರ್ಮಾ ಮತ್ತು ಅವರ ಪತಿ ತರುಣ್ ಶರ್ಮಾ ಬಂಧಿತರಾದ ದಂಪತಿ. ಡಮ್‌ಫ್ರೈಸ್‌ನಲ್ಲಿರುವ ರೆಡ್ ಕಾರ್ಪೆಟ್ ಇನ್ ಎಂಬ ತಮ್ಮದೇ ಆದ ಹೋಟೆಲ್‌ನಲ್ಲಿ ಡ್ರಗ್ಸ್ ಮಾರಾಟ, ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಕೋಶಾ ಶರ್ಮಾ ಅವರು ಎಲ್‌ಎಲ್‌ಸಿ ಮೂಲಕ ವಸತಿ ಸೌಲಭ್ಯವನ್ನು ಒದಗಿಸುವ ಹೋಟೆಲ್ ಅನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಅದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಮತ್ತು ಅದರಿಂದ ಆರ್ಥಿಕವಾಗಿ ಲಾಭ ಪಡೆದಿದ್ದಾರೆ. ಹಾಗೆಯೇ ಫೆಂಟನಿಲ್ ನಂತಹ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಪ್ರಿನ್ಸ್ ವಿಲಿಯಂ ಕೌಂಟಿ ಪೊಲೀಸರು ಆರೋಪಿಸಿದ್ದಾರೆ.
ಈ ಪ್ರಕರಣವನ್ನು ಎಫ್‌ಬಿಐ, ಪ್ರಿನ್ಸ್ ವಿಲಿಯಂ ಕೌಂಟಿ ಪೊಲೀಸ್ ಇಲಾಖೆ ಹಾಗೂ ವರ್ಜೀನಿಯಾ ನ್ಯಾಯ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿವೆ (ಏಜೆನ್ಸೀಸ್).