ಅಡಿಯಾಲಾ ಜೈಲಿನಲ್ಲಿ ಇಮ್ರಾನ್ ಖಾನ್ ನಿಧನ?
- ಅಡಿಯಾಲಾ ಜೈಲಿನಲ್ಲಿ ಇಮ್ರಾನ್ ಖಾನ್ ನಿಧನ?
- ಪಾಕಿಸ್ತಾನಿ ಪತ್ರಕರ್ತನ ಸ್ಫೋಟಕ ಹೇಳಿಕೆ ಮತ್ತು ವೈರಲ್
- ಸುಪ್ರೀಂ ಕೋರ್ಟ್ ಎದುರಿಗೆ ಇಮ್ರಾನ್ ಬೆಂಬಲಿಗರ ಪ್ರತಿಭಟನೆ
ಇಸ್ಲಾಮಾಬಾದ್: ಪಾಕಿಸ್ತಾನ್ ಕ್ರಿಕೆಟ್ ತಂಡದ ಮಾಜಿ ನಾಯಕ, ದೇಶದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Imran Khan Died) ಅಡಿಯಾಲಾ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ ಎಂಬ ಶಾಕಿಂಗ್ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.
ಪಾಕಿಸ್ತಾನ ಸರ್ಕಾರ ಹಾಗೂ ಪಾಕ್ ಮಿಲಿಟರಿಯ ಕ್ರೌರ್ಯಕ್ಕೆ ಇಮ್ರಾನ್ ಖಾನ್ ಬಲಿಯಾಗಿದ್ದಾರೆಂದು ಪಾಕಿಸ್ತಾನದ ಖ್ಯಾತ ಪತ್ರಕರ್ತ ವಜಾಹತ್ ಎಸ್ ಖಾನ್ ತಿಳಿಸಿದ್ದಾರೆ.
ಆದರೆ, ಈ ಬಗ್ಗೆ ಪಾಕಿಸ್ತಾನ ಸರ್ಕಾರವಾಗಲೀ, ಇಮ್ರಾನ್ ಖಾನ್ ಮನೆಯವರಾಗಲೀ ಇದುವರೆಗೆ ನಿಖರ ಹೇಳಿಕೆ ನೀಡದ ಕಾರಣ ಇದನ್ನು ಅಧಿಕೃತ ಮಾಹಿತಿ ಎಂದು ಹೇಳಲು ಸಾಧ್ಯವಿಲ್ಲ.
ಅವರು ಜೈಲಿನಲ್ಲಿಯೇ ಸತ್ತು ಹೋಗಿದ್ದಾರೆ!
ಆಗಸ್ಟ್ 10 ರಂದು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದ ಹಿರಿಯ ಪತ್ರಕರ್ತ ವಜಾಹತ್ ಖಾನ್, ಕಳೆದ ಮೂರು ವರ್ಷಗಳಿಂದ ಇಮ್ರಾನ್ ಖಾನ್ ಅವರನ್ನು ಯಾರೂ ಬೇಟಿ ಮಾಡಿಲ್ಲ, ಅವರ ಯಾವುದೇ ಹೇಳಿಕೆ ಇಲ್ಲಿವರೆಗೆ ಹೊರಬಂದಿಲ್ಲ. ಯಾವಾಗ ಕೇಳಿದರೂ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದೆ ಎಂದು ಹೇಳುತ್ತಾರೆ.
ಆದರೆ, ನನಗೆ ಪಾಕ್ ಸೇನೆ ಮೂಲಕ ದೊರೆತ ಮಾಹಿತಿ ಪ್ರಕಾರ, ಇಮ್ರಾನ್ ಖಾನ್ ಅಡಿಯಾಲಾ ಜೈಲಿನಲ್ಲಿಯೇ ಸತ್ತುಹೋಗಿದ್ದಾರೆ. ಈ ವಿಷಯ ಈಗಲೇ ದೇಶದ ಜನರಿಗೆ ಗೊತ್ತಾದರೆ, ದಂಗೆಯಾಗುವ ಸಂಭವಿರವ ಕಾರಣ ಈ ಸಂಗತಿಯನ್ನು ಮುಚ್ಚಿಡಲಾಗಿದೆ ಎಂದು ಖಾನ್ ವಿಡಿಯೋನಲ್ಲಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಎದುರಿಗೆ ಪಿಟಿಐ ಪ್ರತಿಭಟನೆ!
ಇನ್ನೊಂದೆಡೆ ಇಮ್ರಾನ್ ಖಾನ್ ಅವರ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಪಕ್ಷದ ಕಾರ್ಯಕರ್ತರು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಎದುರಿಗೆ ಹೋರಾಟ ನಡೆಸುತ್ತಿದ್ದು. ಕಳೆದ ಮೂರು ವರ್ಷಗಳಿಂದ ನಮ್ಮ ನಾಯಕನನ್ನು ನಾವು ನೋಡಿಲ್ಲ. ಅವರನ್ನು ನೋಡಲು ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ. ದಯಮಾಡಿ ನ್ಯಾಯಾಲಯ ಇಮ್ರಾನ್ ಖಾನ್ ಅವರಿಗೆ ಜಾಮೀನನ್ನು ನೀಡಿಬೇಕೆಂದು ಆಗ್ರಹಿಸಿದ್ದಾರೆ.
ಅಡಿಯಾಲಾ ಜೈಲಿನಲ್ಲಿ ಇಮ್ರಾನ್ ಖಾನ್ಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ರಾಜಕೀಯ ದ್ವೇಷದಿಂದ ಅವರನ್ನು ಬಂಧಿಸಿ, ಕಿರುಕುಳ ನೀಡಲಾಗುತ್ತಿದೆ. ಇದು ಕಾನೂನಿನ ಪ್ರಕಾರ ಅಕ್ರಮವಾಗಿದ್ದು, ನ್ಯಾಯಾಲಯ ಮದ್ಯ ಪ್ರವೇಶಿಸಿ ನ್ಯಾಯ ನೀಡಬೇಕೆನ್ನುವುದು ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತರ ಆಗ್ರಹವಾಗಿದೆ, (ಏಜನ್ಸೀಸ್).