ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಅಮೆರಿಕಾ ಸೇನಾ ನೆಲೆ ಮೇಲೆ ದಾಳಿ ಮಾಡಿದ್ರೆ, ಹಿಂದೆಂದೂ ನೋಡಿರದ ರೀತಿಯಲ್ಲಿ ಪ್ರತಿದಾಳಿ: ಇರಾನ್​ಗೆ ಟ್ರಂಪ್ ಎಚ್ಚರಿಕೆ | Donald Trump

ವಾಷಿಂಗ್ಟನ್​: ಇರಾನ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಅದನ್ನು ಹತ್ತಿಕ್ಕಲು ನೋಡುತ್ತಿರುವ ಇರಾನ್ ಆಡಳಿತದ ಕ್ರಮವನ್ನು ಅಮೆರಿಕಾ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಂಭಾವ್ಯ ಮಿಲಿಟರಿ ದಾಳಿ ಬಗ್ಗೆ ಬಲವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಭಾನುವಾ(ಜ. 11) ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 
ಇರಾನ್​ನಲ್ಲಿನ ಆರ್ಥಿಕ ಪರಿಸ್ಥಿತಿ, ಸಾಂಸ್ಕೃತಿಕ ಬದಲಾವಣೆ ಅಲ್ಲಿನ ಖಮೇನಿಯ ದೇವಪ್ರಭುತ್ವದ ಆಡಳಿತ ವಿರುದ್ಧ ಜನಸಾಮಾನ್ಯರ ಪ್ರತಿಭಟನೆ ತೀವ್ರಗೊಂಡಿದ್ದು, ಸರ್ಕಾರ ಮತ್ತು ಜನರ ನಡುವಿನ ಸಂಘರ್ಷದಲ್ಲಿ ಇಲ್ಲಿಯವರೆಗೆ ಸುಮಾರು 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಟ್ರಂಪ್, ಇರಾನ್​ಪ್ರತಿಭಟನಾಕಾರರ ವಿರುದ್ಧ ಹಿಂಸಾಚಾರ ನಡೆಸುವುದು ಮುಂದುವರಿಸಿದ್ರೆ ತೀವ್ರತರವಾದ ಕ್ರಮ. ಇರಾನ್ ತನ್ನ ರೆಡ್ ಲೈನ್ ಮೀರಲು ಆರಂಭಿಸಿದೆ. ಮಿಲಿಟರಿ ಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅದ್ಯಾಗೂ ಇರಾನ್​ನಲ್ಲಿ ಆಂತರಿಕ ದಂಗೆಯ ಹಿಂದೆ ಅಮೆರಿಕಾದ ಕೈವಾಡವಿದೆ ಎಂದು ಆರೋಪಿರುವ ಇರಾನ್, ಅಮೆರಿಕಾದ ಸೇನಾ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಇರಾನ್ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದರೆ ನಾವು ಹಿಂದೆಂದೂ ಇಲ್ಲದ ಮಟ್ಟದಲ್ಲಿ ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಇರಾನ್ ನಾಯಕರು ನಮ್ಮ ಜೊತೆ ಮಾತನಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ಇರಾನ್​ನಲ್ಲಿನ ಆಂತರಿಕ ದಂಗೆಯ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಕೈವಾಡವಿದೆ. ದೇಶದಲ್ಲಿ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿವೆ. ಸರ್ಕಾರ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುತ್ತದೆ. ಗಲಭೆಕೋರರು,ಮ ಉಗ್ರರಿಂದ ದೂರವಿರುವಂತೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಈ ಹಿಂದೆ ಒತ್ತಾಯಿಸಿದ್ದರು (ಏಜೆನ್ಸೀಸ್).