ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ
Colombia: ವೆನಿಜುವೆಲಾ ಮೇಲೆ ದಾಳಿ ಅಲ್ಲಿನ ಅಧ್ಯಕ್ಷ ಮಡುರೋನನ್ನು ಅಮೆರಿಕಾ ಸೇನೆ ಒತ್ತೊಯ್ದ ಬಳಿಕ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರು, ಬಂದು ನನ್ನನ್ನು ಹಿಡಿಕೊಂಡು ಹೋಗು ನೋಡೋಣ, ನಿನಗಾಗಿ ಕಾಯುತ್ತಿದ್ದೇನೆ ಎಂದು ಭಾನುವಾರ(ಜ. 05) ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಸವಾಲು ಹಾಕಿದ್ದಾರೆ.
ವೆನಿಜುವೆಲಾದ ಮೇಲೆ ಕಾರ್ಯಾಚರಣೆ ಬಳಿಕ ಕೊಲಂಬಿಯಾವನ್ನು ಅಮೆರಿಕಕ್ಕೆ ಮಾದಕವಸ್ತು ಮಾರಾಟ ಮಾಡುವ ವ್ಯಕ್ತಿ ನಡೆಸುತ್ತಿದ್ದಾನೆ. ಆ ದೇಶಕ್ಕೂ ಇದೇ ಕಾರ್ಯಾಚರಣೆಯ ಎಚ್ಚರಿಕೆ ನೀಡುತ್ತೇನೆ ಎಂಬ ಟ್ರಂಪ್ ಹೇಳಿಕೆಗೆ ಈ ರೀತಿಯಾಗಿ ಪೆಟ್ರೋ ಸವಾಲು ಹಾಕಿದ್ದಾರೆ.
ಅಮೆರಿಕಾ ಕೊಲಂಬಿಯಾ ಮೇಲೆ ದಾಳಿ ಮಾಡಿದ್ರೆ, ಮಕ್ಕಳು ಸಾಯಬಹುದು ಆದ್ರೆ, ರೈತರು ಪರ್ವತಗಳಲ್ಲಿ ಸಾವಿರಾರರು ಗೆರಿಲ್ಲಾಗಳಾಗುತ್ತಾರೆ. ದೇಶದ ಬಹುಪಾಲು ಜನ ಪ್ರೀತಿಸುವ ಮತ್ತು ಗೌರವಿಸುವ ಅಧ್ಯಕ್ಷನನ್ನು ಬಂಧಿಸಿದ್ರೆ, ಜನರ ಕ್ರಾಂತಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾನು ಮತ್ತೆ ಆಯುಧವನ್ನು ಮುಟ್ಟುವುದಿಲ್ಲ ಎಂದು ಪ್ರಮಾಣ ಮಾಡಿದ್ದೇನೆ. ಆದರೆ ತಾಯ್ನಾಡಿಗಾಗಿ ನಾನು ಮತ್ತೆ ಆಯುಧಗಳನ್ನು ಹಿಡಿಯುತ್ತೇನೆ ಎಂದು ಪೆಟ್ರೋ ಹೇಳಿದ್ದಾರೆ. 1990ಕ್ಕಿ ಮುಂಚೆ ಪೆಟ್ರೋ ಅವರು ಎಡಪಂಥೀಯ ಗೆರಿಲ್ಲಾ ಯೋಧನಾಗಿದ್ದರು. 1990ರಲ್ಲಿ ನಡೆದ ಶಾಂತಿ ಒಪ್ಪಂದದ ಬಳಿಕ ಶಸ್ತ್ರಾಸ್ತ್ರ ತ್ಯಜಿಸಿ ರಾಜಕೀಯಕ್ಕೆ ಆಗಮಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ವೆನಿಜುವೆಲಾದ ಮೇಲಿನ ದಾಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್, ಕೊಲಂಬಿಯಾ ಕೂಡ ವೆನಿಜುವೆಲಾದಂತೆ ರೋಗಗ್ರಸ್ಥ ರಾಷ್ಟ್ರವಾಗಿದೆ. ಕೊಕೇನ್ ತಯಾರಿಸಿ ಅದನ್ನು ಅಮೆರಿಕಕ್ಕೆ ಮಾರಾಟ ಮಾಡಲು ಇಷ್ಟಪಡುವ ರೋಗಿಯೊಬ್ಬರು ಅದನ್ನು ಮುನ್ನಡೆಸುತ್ತಿದ್ದಾರೆ. ಅವರು ಅದನ್ನು ಬಹಳ ದಿನ ಮಾಡಲ್ಲ ಎಂದು ಹೇಳಿದ್ದರು (ಏಜೆನ್ಸೀಸ್).