2027ರಲ್ಲಿ ಚಿನ್ನದ ಬೆಲೆ... ಬಾಬಾ ವಂಗಾ ನುಡಿದ ಮತ್ತೊಂದು ಸ್ಪೋಟಕ ಭವಿಷ್ಯವಾಣಿ ಮೇಲೆ ಎಲ್ಲರ ಕಣ್ಣು​  Baba Vanga
ವಿದೇಶ

2027ರಲ್ಲಿ ಚಿನ್ನದ ಬೆಲೆ... ಬಾಬಾ ವಂಗಾ ನುಡಿದ ಮತ್ತೊಂದು ಸ್ಪೋಟಕ ಭವಿಷ್ಯವಾಣಿ ಮೇಲೆ ಎಲ್ಲರ ಕಣ್ಣು​ | Baba Vanga

ಪ್ರಮುಖ ಜಾಗತಿಕ ಹಣಕಾಸು ಸಂಸ್ಥೆಯಾದ ಜೆಪಿ ಮೋರ್ಗಾನ್ ಕೂಡ ಚಿನ್ನದ ಬೆಲೆ ಏರಿಕೆಯಾಗಲಿದೆ ಎಂದು ಅಂದಾಜಿಸಿದೆ. 2026ರ ಅಂತ್ಯಕ್ಕೆ 10 ಗ್ರಾಂ ಚಿನ್ನದ ಬೆಲೆ ಸುಮಾರು 1,48,883 ಲಕ್ಷ ಅಥವಾ ಪ್ರತಿ ಔನ್ಸ್‌ಗೆ 6,000 ಡಾಲರ್​ ತಲುಪಬಹುದು ಎಂದು ಉಲ್ಲೇಖಿಸಿದೆ

Baba Vanga Predictions: ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ವಿಶ್ವ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಪ್ರತಿ ವರ್ಷವೂ ಸಾಕಷ್ಟು ಸದ್ದು ಮಾಡುತ್ತಿರುತ್ತವೆ. 2026ನೇ ಇಸವಿಯನ್ನು ಆಧಾರವಾಗಿಟ್ಟುಕೊಂಡು ಬಾಬಾ ವಂಗಾ ನುಡಿದಿರುವ ಭವಿಷ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಈಗಾಗಲೇ ಅವರ ಭವಿಷ್ಯವಾಣಿಗಳು ನಿಜವಾಗಿವೆ ಎಂದು ಅವರ ಅನುಯಾಯಿಗಳು ವಾದಿಸುತ್ತಿರುವ ಬೆನ್ನಲ್ಲೇ, ಚಿನ್ನದ ದರಗಳ ಬಗ್ಗೆ ವಂಗಾ ಹೇಳಿರುವ ಸ್ಫೋಟಕ ಸಂಗತಿ ಮುನ್ನೆಲೆಗೆ ಬಂದಿದೆ.

ಮುಂದಿನ ವರ್ಷ ಚಿನ್ನದ ಬಗ್ಗೆ ಬಾಬಾ ವಂಗಾ ಭವಿಷ್ಯ

ಚಿನ್ನದ ಬೆಲೆ ಶೇ.25ರಿಂದ 40ರಷ್ಟು ಏರಿಕೆಯಾಗಬಹುದು. 2027ರಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 2.1 ಲಕ್ಷದಿಂದ 2.89 ಲಕ್ಷ ರೂ.ವರೆಗೆ ತಲುಪಬಹುದು ಎಂದು ಹೇಳಿರುವುದಾಗಿ ಒಂದಷ್ಟು ವರದಿಗಳು ತಿಳಿಸಿವೆ. ಅಸಲಿಗೆ, ಇದಕ್ಕೆ ಸಂಬಂಧಿಸಿದಂತೆ ಬಾಬಾ ವಂಗಾ ಯಾವುದೇ ಲಿಖಿತ ದಾಖಲೆಗಳನ್ನು ಬಿಟ್ಟು ಹೋಗಿಲ್ಲ. ಬದಲಿಗೆ, ಅವರ ಅನುಯಾಯಿಗಳು ಮತ್ತು ಒಂದಷ್ಟು ಆನ್​ಲೈನ್ ವರದಿಗಳು ಹೀಗೆ ಹಂಚಿಕೊಂಡಿರವುದು ಗಮನಾರ್ಹ. ಆದರೆ, ಒಂದಂತು ನಿಜ! ಈ ಬೆಲೆ ಏರಿಕೆಯು ಮುಂದಿನ ವರ್ಷ ಹೋಲಿಕೆ ಆದರೆ, ಸತ್ಯಕ್ಕೆ ಹತ್ತಿರ ಅಥವಾ ಸತ್ಯವಾಯಿತು ಎಂಬ ವರದಿಗಳು ಹರಿದಾಡಲಿವೆ.

ಜೆಪಿ ಮೋರ್ಗಾನ್ ಸಂಸ್ಥೆಯ ಅಂದಾಜು

ಪ್ರಮುಖ ಜಾಗತಿಕ ಹಣಕಾಸು ಸಂಸ್ಥೆಯಾದ ಜೆಪಿ ಮೋರ್ಗಾನ್ ಕೂಡ ಚಿನ್ನದ ಬೆಲೆ ಏರಿಕೆಯಾಗಲಿದೆ ಎಂದು ಅಂದಾಜಿಸಿದೆ. 2026ರ ಅಂತ್ಯಕ್ಕೆ 10 ಗ್ರಾಂ ಚಿನ್ನದ ಬೆಲೆ ಸುಮಾರು 1,48,883 ಲಕ್ಷ ಅಥವಾ ಪ್ರತಿ ಔನ್ಸ್‌ಗೆ 6,000 ಡಾಲರ್​ ತಲುಪಬಹುದು ಎಂದು ಉಲ್ಲೇಖಿಸಿದೆ. ಇನ್ನು, 2027ರಲ್ಲಿ 10 ಗ್ರಾಂ 2,222 ಡಾಲರ್​ (ಅಥವಾ ಪ್ರತಿ ಔನ್ಸ್‌ಗೆ 6300 ಡಾಲರ್​) ವರೆಗೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಜಾಗತಿಕ ರಾಜಕೀಯ ಅಸ್ಥಿರತೆ, ಹಣದುಬ್ಬರದ ಭೀತಿ ಹಾಗೂ ರಿಸರ್ವ್ ಬ್ಯಾಂಕ್‌ಗಳ ಹೆಚ್ಚಿನ ಬೇಡಿಕೆಗಳು ಈ ಬೆಲೆ ಏರಿಕೆಗೆ ಮುಖ್ಯ ಕಾರಣಗಳಾಗಿವೆ. ಆದಾಗ್ಯೂ, ಅಮೆರಿಕದ ಫೆಡರಲ್ ರಿಸರ್ವ್ ನೀತಿಗಳು ಮತ್ತು ಜಾಗತಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ಅಂದಾಜು ಬದಲಾಗಬಹುದು ಎಂದು ಜೆಪಿ ಮೋರ್ಗಾನ್ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಯಾರೀ ಬಾಬಾ ವಂಗಾ?

ವರದಿಗಳ ಪ್ರಕಾರ, ಬಾಬಾ ವಂಗಾ ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಸತ್ಯವಾಗಿವೆ ಅನೇಕ ಭವಿಷ್ಯಗಳು

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ,(ಏಜೆನ್ಸೀಸ್).