ಶಿಕ್ಷೆಗೆ ಒಳಗಾದ ಅಜಯ್ ಶಿಂಜಿನ್  
ವಿದೇಶ

ಚಿನ್ನದ ಹಲ್ಲು, ದುಬೈನಲ್ಲಿ ಲಕ್ಷುರಿ ಲೈಫು: ಸಿಮ್​​ ಸ್ವಾಪಿಂಗ್ ಮೂಲಕ ಕೋಟಿಗಟ್ಟಲೆ ಕೊಳ್ಳೆ ಹೊಡೆದ ಯುವಕನಿಗೆ ಬಿಗ್​ ಶಾಕ್​! Gold Teeth

ಯುಕೆಯಲ್ಲಿ (UK) ನಾಲ್ವರು ವ್ಯಕ್ತಿಗಳಿಂದ ಸಿಮ್ ಸ್ವಾಪಿಂಗ್ ಹಗರಣದ ಮೂಲಕ ಸುಮಾರು 2.56 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ವಂಚಿಸಿದ 25 ವರ್ಷದ ಅಜಯ್ ಶಿಂಜಿನ್ ಎಂಬ ಯುವಕನಿಗೆ ಲಂಡನ್ ಕ್ರೌನ್ ಕೋರ್ಟ್ ಎರಡೂವರೆ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

Gold Teeth ​: ಕ್ರಿಪ್ಟೋಕರೆನ್ಸಿ ಹೆಸರಿನಲ್ಲಿ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಖತರ್ನಾಕ್​ ಯುವಕನಿಗೆ ಲಂಡನ್ ಕೋರ್ಟ್ ಎರಡೂವರೆ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಸಿಮ್​ ಸ್ವಾಪಿಂಗ್ (SIM swapping) ಎಂಬ ತಂತ್ರಜ್ಞಾನ ಬಳಸಿ ಜನರ ಖಾತೆಗೆ ಕನ್ನ ಹಾಕಿದ್ದ ಈ ಆರೋಪಿ, ದೋಚಿದ ಹಣದಿಂದ ದುಬಾರಿ ದುನಿಯಾದಲ್ಲಿ ನಡೆಸುತ್ತಿದ್ದುದು ತನಿಖೆಯಿಂದ ಬಯಲಾಗಿದೆ.

ಯುಕೆಯಲ್ಲಿ (UK) ನಾಲ್ವರು ವ್ಯಕ್ತಿಗಳಿಂದ ಸಿಮ್ ಸ್ವಾಪಿಂಗ್ ಹಗರಣದ ಮೂಲಕ ಸುಮಾರು 2.56 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ವಂಚಿಸಿದ 25 ವರ್ಷದ ಅಜಯ್ ಶಿಂಜಿನ್ ಎಂಬ ಯುವಕನಿಗೆ ಲಂಡನ್ ಕ್ರೌನ್ ಕೋರ್ಟ್ ಎರಡೂವರೆ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣದ ತನಿಖೆ ನಡೆಸಿದ ಲಂಡನ್ ಸಿಟಿ ಪೊಲೀಸರು, ಆರೋಪಿಯು ಈ ಕೃತ್ಯದ ಮೂಲಕ £44,000 ಗೂ ಅಧಿಕ ಹಣವನ್ನು ಅಕ್ರಮವಾಗಿ ಗಳಿಸಿರುವುದನ್ನು ಪತ್ತೆ ಹಚ್ಚಿದ್ದಾರೆ.

ಗೋಲ್ಡ್ ಟೀತ್ ಹುಚ್ಚಾಟ

ಜನರ ಕಷ್ಟದ ದುಡ್ಡನ್ನು ಕೊಳ್ಳೆ ಹೊಡೆದ ಅಜಯ್ ಶಿಂಜಿನ್, ಆ ಹಣದಿಂದ ದುಬೈನಲ್ಲಿ ಅತ್ಯಂತ ಐಷರಾಮಿ ಜೀವನವನ್ನು ನಡೆಸುತ್ತಿದ್ದನು. ಅಷ್ಟೇ ಅಲ್ಲದೆ, ಬಂಗಾರದ ಹಲ್ಲುಗಳು ಸೇರಿದಂತೆ ಹಲವಾರು ದುಬಾರಿ ಅಲಂಕಾರಿಕ ವಸ್ತುಗಳನ್ನು ಖರೀದಿಸಿ ಮೆರೆದಾಡಿದ್ದನು. ಸದ್ಯ ಪೊಲೀಸರು ಈ ಎಲ್ಲಾ ಐಷರಾಮಿ ವಸ್ತುಗಳನ್ನು ಮತ್ತು ಚಿನ್ನದ ಹಲ್ಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಗರಣದ ಕರಾಳ ಅಧ್ಯಾಯವು 2021ರ ನವೆಂಬರ್ ಮೊದಲ ವಾರದಲ್ಲಿ ಆರಂಭವಾಯಿತು. ಟೆಲಿಕಾಂ ಕಂಪನಿ ಬಿಟಿ (BT) ವ್ಯವಸ್ಥೆಗಳಲ್ಲಿ ಸೈಬರ್ ವಂಚನೆ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ ಬಳಿಕ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು. ಗ್ರಾಹಕರ ಮೊಬೈಲ್ ನಂಬರ್‌ಗಳನ್ನು ಕಿರಾತಕರು ತಮ್ಮ ನಿಯಂತ್ರಣದಲ್ಲಿರುವ ಬೇರೆ ಸಿಮ್ ಕಾರ್ಡ್‌ಗಳಿಗೆ ಅಕ್ರಮವಾಗಿ ವರ್ಗಾಯಿಸುತ್ತಿರುವುದು ತನಿಖೆಯ ವೇಳೆ ದೃಢಪಟ್ಟಿದೆ.

ಸಿಮ್ ಸ್ವಾಪಿಂಗ್ ಎಂದರೆ ಬೇರೆಯವರ ಫೋನ್ ನಂಬರ್ ಅನ್ನು ಕಳ್ಳರ ತಮ್ಮದೇ ಕಾರ್ಡ್‌ಗೆ ವರ್ಗಾಯಿಸಿಕೊಂಡು, ಆ ಮೂಲಕ ನಂಬರ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಹಾಗೂ ಡಿಜಿಟಲ್ ಖಾತೆಗಳ ನಿಯಂತ್ರಣವನ್ನು ಪಡೆದುಕೊಳ್ಳುವ ಒಂದು ವಂಚನಾ ಜಾಲವಾಗಿದೆ. ಇದರ ಮೂಲಕ ಅಪರಾಧಿಗಳು ಕೇವಲ ಕೆಲವೇ ನಿಮಿಷಗಳಲ್ಲಿ ಸಂತ್ರಸ್ತರ ಖಾತೆಗಳಲ್ಲಿದ್ದ ಕ್ರಿಪ್ಟೋಕರೆನ್ಸಿ ಸೇರಿದಂತೆ ಡಿಜಿಟಲ್ ಆಸ್ತಿಯನ್ನು ಸಂಪೂರ್ಣವಾಗಿ ಕದಿಯುವ ತಂತ್ರವನ್ನು ಅನುಸರಿಸುತ್ತಿದ್ದರು.

ಸೈಬರ್ ಲೋಕಕ್ಕೆ ಪೊಲೀಸರಿಂದ ಕಠಿಣ ಎಚ್ಚರಿಕೆ

ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಮುಗ್ಧ ಜನರನ್ನು ವಂಚಿಸುವವರ ವಿರುದ್ಧ ಬ್ರಿಟನ್ ಪೊಲೀಸರು ಬಿಗಿ ಕ್ರಮ ಮುಂದುವರಿಸಿದ್ದಾರೆ. ಸಾರ್ವಜನಿಕರು ತಮ್ಮ ಆನ್‌ಲೈನ್ ಹಾಗೂ ಮೊಬೈಲ್ ಭದ್ರತೆಯ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಅಜಯ್ ಶಿಂಜಿನ್ ಪ್ರಕರಣವು ಸೈಬರ್ ಜಗತ್ತಿನಲ್ಲಿ ಸಿಮ್ ಸ್ವಾಪಿಂಗ್‌ನಂತಹ ಅಪಾಯಕಾರಿ ಕೃತ್ಯಗಳಿಗೆ ಕಾನೂನಿನ ಪಾಠ ಕಲಿಸುವಲ್ಲಿ ಪ್ರಮುಖ ಉದಾಹರಣೆಯಾಗಿದೆ, (ಏಜೆನ್ಸೀಸ್​).