ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಕಮರ್​ ಬಾಜ್ವಾ 
ವಿದೇಶ

ಶೌಚಾಲಯದಲ್ಲಿ ಬಿದ್ದು ಸಾವನ್ನಪ್ಪಿದ ಮಾಜಿ ಸೇನಾ ಮುಖ್ಯಸ್ಥ; ಭಾರತ ನ.1 ಶತ್ರು ಎಂದಿದ್ದ ಪಾಕಿಸ್ತಾನದ ಬಾಜ್ವಾ ಇನ್ನಿಲ್ಲ! Qamar Javed Bajwa

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಕಮರ್​ ಬಾಜ್ವಾ ನಿಧನ
  • ಶೌಚಾಲಯದಲ್ಲಿ ಜಾರಿ ಬಿದ್ದು ಅಸುನಿಗಿದ ಜನರಲ್​
  • ಭಾರತದ ವಿರುದ್ಧ ಸದಾ ವಿಷಕಾರುತ್ತಿದ್ದ ಬಾಜ್ವಾ
ಪಾಕಿಸ್ತಾನ: ಭಾರತ ನಮ್ಮ ಶತ್ರು ನಂಬರ್​ 1 ಎಂಬ ಹೇಳಿಕೆ ಮೂಲಕ ವೈರಲ್​ ಆಗಿದ್ದ ಪಾಕಿಸ್ತಾನ ಸೇನೆಯ ಮಾಜಿ ಮುಖ್ಯಸ್ಥ ಕಮರ್ ಜಾವೇದ್​ ಬಾಜ್ವಾ (Qamar Javed Bajwa) [65] ನಿಧನರಾಗಿದ್ದಾಗಿ ವರದಿಯಾಗಿದೆ.
ಮಾಹಿತಿಯ ಪ್ರಕಾರ, ಶೌಚಾಯಲಕ್ಕೆ ತೆರಳಿದ್ದ ಸಮಯದಲ್ಲಿ ಆಯತಪ್ಪಿ ಬಾಜ್ವಾ ನೆಲಕ್ಕೆ ಬಿದಿದ್ದು, ತೀವ್ರವಾಗಿ ಗಾಯಗೊಂಡಿದ್ದು, ರಾವಲ್​ಪಿಂಡಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆ ಮಾಜಿ ಸೇನಾ ಮುಖ್ಯಸ್ಥ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.

ಆಪರೇಷನ್​ ಬಳಿಕ ಹದಗೆಟ್ಟ ಆರೋಗ್ಯ!

ಶೌಚಾಲಯದಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಕಮರ್​ ಬಾಜ್ವಾ ಅವರನ್ನು ಕುಟುಂಬ ವರ್ಗ ಕೂಡಲೇ ರಾವಲ್​ಪಿಂಡಿಯ ಆಸ್ಪತ್ರೆಗೆ ದಾಖಲಿಸಿತ್ತು. ಬಾಜ್ವಾ ಅವರ ಸ್ಥಿತಿಯನ್ನು ಗಮನಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯವೆಂದು ಹೇಳಿ, ಆಪರೇಷನನ್ನು ಮಾಡಿದ್ದಾರೆ. ಆದರೆ ಆಪರೇಷನ್​ ನಂತರ ಬಾಜ್ವಾ ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದು, ಕೊನೆಗೆ ಅವರ ಸಾವು ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾರತ ನಮ್ಮ ಶತ್ರು ನಂ.1
2016 ರಿಂದ 2022 ರ ವರೆಗೆ ಪಾಕಿಸ್ತಾನ ಮಿಲಿಟರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಜನರಲ್ ಬಾಜ್ವಾ, ಭಾರತ ನಮ್ಮ ಶತ್ರು ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆ ದೇಶವನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂಬ ಹೇಳಿಕೆಯನ್ನು ಬಾಜ್ವಾ ನೀಡಿದ್ದರು.
2019 ರಲ್ಲಿ ಭಾರತದ ಪುಲ್ವಾಮಾದಲ್ಲಿ ನಡೆದಿದ್ದ ಭಯೋತ್ಪದಕ ದಾಳಿ ರೂಪಿಸುವಲ್ಲಿ ಈ ಬಾಜ್ವಾ ಅವರ ಪಾತ್ರವಿತ್ತು ಎಂದು ಭಾರತ ಆರೋಪಿಸಿತ್ತು. ಆದರೆ ಜನರಲ್​ ಬಾಜ್ವಾ ಈ ದಾಳಿಗೆ ನನಗೆ ಹಾಗೂ ಪಾಕಿಸ್ತಾನಕ್ಕೆ ಯಾವುದೇ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿದ್ದರು.
2016 ರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್​ ಶರೀಫ್​ ಅವರ ಅತ್ಯಂತ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹಿನ್ನಲೆಯಲ್ಲಿ ಕಮರ್​ ಬಾಜ್ವಾ ಅವರನ್ನು ಸೇನೆಯ ಮುಖ್ಯಸ್ಥನಾಗಿ ನವಾಜ್​ ಶರೀಫ್​ ನೇಮಿಸಿದ್ದರು ಎಂದು ಹೇಳಲಾಗುತ್ತದೆ,(ಏಜನ್ಸೀಸ್).