Facebook: ವೆಬ್ ಲಿಂಕ್‌ಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ಡಿ. 16ರಿಂದ ಫೇಸ್‌ಬುಕ್ ಪರಿಶೀಲಿಸುತ್ತಿದೆ ಎನ್ನಲಾಗಿದ್ದು, ಇದು ಸುದ್ದಿ ಮಾಧ್ಯಮಗಳು ಮತ್ತು ಪ್ರಕಾಶಕರಿಗೆ ಹೊಡೆತ ನೀಡುವ ಸಾಧ್ಯತೆ ಇದೆ.
ಈ ಕುರಿತು ಮಾಹಿತಿ ನೀಡಿರುವ ಫೇಸ್‌ಬುಕ್ ಮಾಲೀಕ ಸಂಸ್ಥೆ ಮೇಟಾ, ಇದನ್ನು ಲಿಮಿಟೆಡ್ ಟೆಸ್ಟ್ ಎಂದು ಕರೆದಿದೆ. ಇದರಲ್ಲಿ ಮೆಟಾ ಪರಿಶೀಲಿಸಿದ ಚಂದದಾರಿಕೆಯನ್ನು ಪಡೆಯದ ಬಳಕೆದಾರರು ತಿಂಗಳಿಗೆ ಎರಡೂ ಲಿಂಕ್‌ಗಳನ್ನು ಮಾತ್ರ ಉಚಿತವಾಗಿ ಪೋಸ್ಟ್ ಮಾಡಬಹುದು. ಅನಿಯಮಿತ ಲಿಂಕ್‌ಗಳನ್ನು ಶೇರ್ ಮಾಡಲು ತಿಂಗಳಿಗೆ ಸುಮಾರು $11.99 ಅಥವಾ £9.99 ಶುಲ್ಕ ಪಾವತಿಸಿ ಮೆಟಾ ವೆರಿಫೈಡ್ ಸಬ್‌ಸ್ಕ್ರಿಪ್ಷನ್ ತೆಗೆದುಕೊಳ್ಳಬೇಕು.
ಈ ಟೆಸ್ಟ್ ಮುಖ್ಯವಾಗಿ ಫೇಸ್‌ಬುಕ್ ಪೇಜ್‌ಗಳು ಮತ್ತು ಪ್ರೊಫೆಷನಲ್ ಮೋಡ್ ಬಳಸುವ ಪ್ರೊಫೈಲ್‌ಗಳಿಗೆ ಉದಾಹರಣೆಗೆ ಬಿಜಿನೆಸ್, ಕ್ರಿಯೇಟರ್‌ಗಳು ಫೇಜ್ಗಳಿಗೆ ಮಾತ್ರ ಅನ್ವಯಿಸುತ್ತಿದ್ದು, ಸುದ್ದಿ ಸಂಸ್ಥೆಗಳು ಮತ್ತು ಪಬ್ಲಿಷರ್‌ಗಳು ಈ ಟೆಸ್ಟ್‌ನಲ್ಲಿ ಸೇರಿಲ್ಲ ಎಂದು ಮೆಟಾ ಸ್ಪಷ್ಟಪಡಿಸಿದೆ. ಆದಾಗ್ಯೂ ಇದು ಪ್ರಭಾವ ಬೀರಬಹುದು ಎನ್ನಲಾಗಿದೆ.
2023ರಲ್ಲಿ ಮೆಟಾ ಸುದ್ದಿ ವಿಷಯಕ್ಕೆ ಆಧ್ಯತೆ ನೀಡದೇ ಕೇವಲ ವಿಡಿಯೋ, ವೈರಲ್, ಶಾರ್ಟ್ ಫಾರ್ಮ್ಗಳ ಕಡೆ ಗಮನಹರಿಸಿದ್ದರಿಂದ ಪ್ರಕಾಶಕರು ಈಗಾಗಲೇ ಆನ್ಲೈನ್ ಟ್ರಾಫಿಕ್ನಲ್ಲಿ ಭಾರಿ ಕುಸಿತ ಕಂಡಿದ್ದಾರೆ. ಈ ವರ್ಷ ಫೇಸ್ಬುಕ್ನಲ್ಲಿ ಸುದ್ದಿ ಸೈಟ್ಗಳು ಚೇತರಿಸಿಕೊಳ್ಳುತ್ತಿದ್ದವು,
ಪ್ರಕಾಶಕರು ಈಗಾಗಲೇ 2023ರಲ್ಲಿ ಮೆಟಾ ಕಂಪನಿಯ ಒಂದು ನಿರ್ಧಾರದಿಂದು ಭಾರಿ ಕುಸಿತವನ್ನು ಅನುಭವಿಸಿದ್ದರು. ಅದು ಸುದ್ದಿ ವಿಷಯಕ್ಕೆ ಕಡಿಮೆ ಪ್ರಾಮುಖ್ಯತೆ ನೀಡಿ, ಹೆಚ್ಚಾಗಿ ವೀಡಿಯೊಗಳು ಮತ್ತು ವೈರಲ್, ಶಾರ್ಟ್-ಫಾರ್ಮ್ ವಿಷಯಗಳನ್ನು ಪ್ರದರ್ಶಿಸುವತ್ತ ಬದಲಾವಣೆ ಮಾಡಿತ್ತು. ಈ ವರ್ಷ ಫೇಸ್‌ಬುಕ್‌ನಿಂದ ಸುದ್ದಿ ಸೈಟ್‌ಗಜ್ಞಳು ಕುಸಿತವನ್ನು ಚೇತರಿಸಿಕೊಳ್ಳುತ್ತಿದ್ದವು. ಆದಾಗ್ಯೂ 2024ರಲ್ಲಿ ಶೇ. 50ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ (ಏಜೆನ್ಸೀಸ್).