Donald Trump Warning | ಇರಾನ್‌ನ ಪ್ರತೀಕಾರದ ಮಾತುಗಳಿಗೆ ಟ್ರಂಪ್ ಲಾಸ್ಟ್ ವಾರ್ನಿಂಗ್
Donald Trump Warning: ಇರಾನ್ ಪರಮೋಚ್ಚ ನಾಯಕ ಖಮೇನಿ ಮರಣದ ಬಳಿಕ ಅಮೆರಿಕ ಮತ್ತು ಇಸ್ರೇಲ್ ಮೇಲೆ ದಾಳಿ ನಡೆಸುವುದಾಗಿ ಇರಾನ್ ಹೇಳಿಕೊಂಡಿದ್ದು, ಇದರಿಂದ ಕೆರಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ಮತ್ತು ಇಸ್ರೇಲ್ ಮೇಲೆ ಯಾವುದೇ ದಾಳಿಯ ಪ್ರಯತ್ನ ನಡೆದರೆ, ಹಿಂದೆಂದೂ ನೋಡಿರದ ಬಲದಿಂದ ಅವರನ್ನು ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಇರಾನ್ ತೀರಾ ತೀವ್ರವಾಗಿ ತಿರುಗೇಟು ನೀಡುವುದಾಗಿ ಬೆದರಿಕೆ ಹಾಕುತ್ತಿದೆ, ಆದರೆ ಅವರು ಅಂತಹ ಸಾಹಸಕ್ಕೆ ಕೈ ಹಾಕದಿರುವುದೇ ಒಳ್ಳೆಯದು. ಇರಾನ್ ಏನಾದರೂ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರ ಇಸ್ರೇಲ್ ಮೇಲೆ ಸಣ್ಣ ಮಟ್ಟದ ದಾಳಿಗೆ ಮುಂದಾದರೂ, ಅಮೆರಿಕವು ಹಿಂದೆಂದೂ ಕಂಡಿರದ ಬಲ ಪ್ರಯೋಗಿಸಲಿದೆ ಎಂದು ಎಚ್ಚರಿಸಿದ್ದಾರೆ.
ಟ್ರಂಪ್ರ ಈ ಮಾತುಗಳು ಇರಾನ್‌ನ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸುವ ಮುನ್ಸೂಚನೆಯಂತೆ ಕಂಡುಬರುತ್ತಿದ್ದು, ನಮ್ಮ ಶಕ್ತಿಯನ್ನು ಪರೀಕ್ಷಿಸಲು ಬರಬೇಡಿ ಎಂಬ ಸಂದೇಶವನ್ನು ಟ್ರಂಪ್ ಸ್ಪಷ್ಟವಾಗಿ ರವಾನಿಸಿದ್ದಾರೆ.
ಟ್ರಂಪ್ ನೀಡಿರುವ ಈ ಹೇಳಿಕೆಯು ಕೇವಲ ಮಾತಲ್ಲ, ಇರಾನ್ ಮೇಲೆ ಅಂತಿಮ ಹಂತದ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕ ಸಿದ್ಧವಾಗಿದೆ ಎಂಬುದರ ಸಂಕೇತವಾಗಿದೆ. ಇರಾನ್ ಈಗಾಗಲೇ ತನ್ನ ಕ್ಷಿಪಣಿಗಳನ್ನು ಸಿದ್ಧಗೊಳಿಸಿಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ ಟ್ರಂಪ್ರ ಈ ಎಚ್ಚರಿಕೆ ಮಹತ್ವ ಪಡೆದುಕೊಂಡಿದೆ.
ಇಸ್ರೇಲ್ ಕೂಡ ತನ್ನ ಐರನ್ ಡೋಮ್ ಮತ್ತು ಆರೋ ರಕ್ಷಣಾ ವ್ಯವಸ್ಥೆಗಳನ್ನು ಹೈ ಅಲರ್ಟ್‌ನಲ್ಲಿಟ್ಟಿದ್ದು, ಅತ್ತ ಇರಾನ್‌ನ ಪ್ರಾದೇಶಿಕ ಮಿತ್ರರಾದ ಹೆಜ್ಬೊಲ್ಲಾ ಮತ್ತು ಹೌತಿಗಳು ಅಮೆರಿಕದ ನೆಲೆಗಳನ್ನು ಗುರಿಯಾಗಿಸಲು ಸಿದ್ಧತೆ ನಡೆಸಿವೆ. ಆದರೆ ಟ್ರಂಪ್ರ ಈ ಅಭೂತಪೂರ್ವ ಬಲ ಎಂಬ ಪದದ ಬಳಕೆ ಇರಾನ್‌ನ ಅಣುಶಕ್ತಿ ಕೇಂದ್ರಗಳ ಮೇಲೆ ಬಾಂಬ್ ದಾಳಿ ಮಾಡುವ ಮುನ್ಸೂಚನೆಯಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಖಮೇನಿಯನ್ನು ಕಾಂಪೌಂಡ್ನಲ್ಲಿ ಕೊಲ್ಲಲಾಯಿತು ಮತ್ತು ಅವರ ದೇಹದ ಫೋಟೋವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೋಡಿದ್ದಾರೆ ಎಂದು ಇರಾನಿನ ಮಾಧ್ಯಮ ವರದಿಯಲ್ಲಿ ತಿಳಿಸಿವೆ(ಏಜೆನ್ಸೀಸ್).