ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)  
ವಿದೇಶ

ಯುಕ್ರೇನ್ ವಿರುದ್ಧ ಟ್ರಂಪ್ ವಾಗ್ದಾಳಿ; ಝೆಲೆನ್ಸ್ಕಿಗೆ ಕೃತಜ್ಞತೆಯಿಲ್ಲ ಎಂದ ಅಮೆರಿಕ ಅಧ್ಯಕ್ಷ | Donald Trump

ನ್ಯೂಯಾರ್ಕ್: ಅಮೆರಿಕದ ಸಹಾಯಕ್ಕಾಗಿ ಯುಕ್ರೇನ್​ಗೆ ಕೃತಜ್ಞತೆಯಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಟೀಕಿಸಿದ್ದಾರೆ. ಅಲ್ಲದೆ, ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕದ ಕರಡು ಯೋಜನೆಯನ್ನು ಚರ್ಚಿಸಲು ಅಮೆರಿಕ, ಯುಕ್ರೇನಿಯನ್ ಮತ್ತು ಯುರೋಪಿಯನ್ ಅಧಿಕಾರಿಗಳು ಜಿನೀವಾದಲ್ಲಿ ಭೇಟಿಯಾದ ಸಂದರ್ಭದಲ್ಲಿ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ರೂತ್ ಸೋಶಿಯಲ್​ ಪೋಸ್ಟ್​ ಮಾಡಿರುವ ಟ್ರಂಪ್, ಅಮೆರಿಕ ಮತ್ತು ಯುಕ್ರೇನಿಯನ್ ಬಲವಾದ ಮತ್ತು ಸರಿಯಾದ ನಾಯಕತ್ವ ಇದ್ದಿದ್ದರೆ ರಷ್ಯಾ-ಯುಕ್ರೇನ್ ಯುದ್ಧ ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದಿದ್ದಾರೆ. ಯುಕ್ರೇನಲ್ಲಿರುವ ನಾಯಕತ್ವವು ನಮ್ಮ ಪ್ರಯತ್ನಗಳಿಗೆ ಯಾವುದೇ ಕೃತಜ್ಞತೆಯನ್ನು ತೋರಿಸಿಲ್ಲ. ಅಲ್ಲದೆ, ಯುರೋಪ್ ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ಮುಂದುವರೆಸಿದೆ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಅಮೆರಿಕಕ್ಕೆ ಧನ್ಯವಾದ ಅರ್ಪಿಸಿದರು. ಅಲ್ಲದೆ, ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಅಮೆರಿಕ ಅಧ್ಯಕ್ಷರನ್ನು ಹೊಗಳಿದ್ದಾರೆ. ನಮಗೆ ಯುನೈಟೆಡ್ ಸ್ಟೇಟ್ಸ್‌ನ ನಾಯಕತ್ವ ಮುಖ್ಯವಾಗಿದೆ. ಯುಎಸ್​ ಮತ್ತು ಅಧ್ಯಕ್ಷ ಟ್ರಂಪ್ ನಮ್ಮ ಭದ್ರತೆಗಾಗಿ ಮಾಡುತ್ತಿರುವ ಎಲ್ಲದಕ್ಕೂ ನಾವು ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.
ಜಿನೀವಾ ಸಭೆಯಲ್ಲಿ ಭರವಸೆಗಳು
ಜಿನೀವಾದಲ್ಲಿರುವ ಯುಕ್ರೇನ್​ ನಿಯೋಗದ ನೇತೃತ್ವವನ್ನು ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಆಂಡ್ರಿ ಯೆರ್ಮಾಕ್ ವಹಿಸಿದ್ದಾರೆ. ಅಲ್ಲದೆ, ಅಮೆರಿಕದ ತಂಡದೊಂದಿಗೆ ಮಾತುಕತೆ ಪ್ರಾರಂಭಿಸುವ ಮೊದಲು ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯ ಸಲಹೆಗಾರರನ್ನು ಭೇಟಿಯಾದರು.
ಅಮೆರಿಕದ ತಂಡದಲ್ಲಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಅಳಿಯ ಜೇರೆಡ್ ಕುಶ್ನರ್ ಸೇರಿದ್ದಾರೆ. ಯುಕ್ರೇನ್‌ಗೆ ಪ್ರಯೋಜನಕಾರಿಯಾದ ಒಪ್ಪಂದವನ್ನು ರೂಪಿಸಲು ಅಂತಿಮ ವಿವರಗಳನ್ನು ರೂಪಿಸಲು ನಾವು ಆಶಿಸುತ್ತೇವೆ ಎಂದು ಅಮೆರಿಕದ ಅಧಿಕಾರಿ ತಿಳಿಸಿದರು. ಅಲ್ಲದೆ, ಇಬ್ಬರು ಅಧ್ಯಕ್ಷರು ಕುಳಿತು ಮಾತನಾಡುವವರೆಗೆ ಯಾವುದನ್ನೂ ಒಪ್ಪಲಾಗುವುದಿಲ್ಲ ಎಂದು ಹೇಳಿದರು.
ಜಿನೀವಾದಲ್ಲಿ ರಾಜತಾಂತ್ರಿಕ ಒತ್ತಡವನ್ನು ಝೆಲೆನ್ಸ್ಕಿ ಸಾರ್ವಜನಿಕವಾಗಿ ಸ್ವಾಗತಿಸಿದ್ದು, ಮಾತುಕತೆಯ ಫಲಿತಾಂಶ ನೀಡುತ್ತವೆ ಎಂದು ಆಶಿಸಿದ್ದಾರೆ ಎಂದಿದ್ದಾರೆ,(ಏಜೆನ್ಸೀಸ್).