ಮದ್ಯ ಸೇವಿಸಿ ಕಾರು ಚಲಾಯಿಸಿದ ಡೇವಿಡ್​ ವಾರ್ನರ್​ 
ವಿದೇಶ

ಮದ್ಯ ಸೇವಿಸಿ ಡ್ರೈವಿಂಗ್​​: ಡೇವಿಡ್​ ವಾರ್ನರ್​ಗೆ ಸಿಡ್ನಿ ಕೋರ್ಟ್​ ಶಾಕ್​; ಭಾರಿ ದಂಡದ ಜೊತೆಗೆ 'ಈ' ಸಾಧನದ ಅಳವಡಿಕೆಗೆ ಆದೇಶ! David Warner Drink and Drive

ಪ್ರಮುಖ ಮುಖ್ಯಾಂಶಗಳು

  • ಮದ್ಯ ಸೇವಿಸಿ ಕಾರು ಚಲಾಯಿಸಿದ ಡೇವಿಡ್​ ವಾರ್ನರ್​
  • ಆಸ್ಟ್ರೇಲಿಯಾ ಕ್ರಿಕೆಟಿಗನಿಗೆ ಸಿಡ್ನಿ ನ್ಯಾಯಾಲಯದಿಂದ ಭಾರಿ ದಂಡ
  • ಒಂದು ಲಕ್ಷ ದಂಡದ ಜೊತೆಗೆ ಆಲ್ಕೋಹಾಲ್ ಇಂಟರ್​ಲಾಕ್​ ಡಿವೈಸ್ ಫಿಟ್​ ಮಾಡಿಕೊಳ್ಳುವಂತೆ ನಿರ್ದೇಶನ
ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮಾಜಿ ಓಪನಿಂಗ್​ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್ (David Warner Drink and Drive)​ ಮದ್ಯ ಸೇವಿಸಿ ವಾಹನ ಚಲಾಯಿಸಿದ ಹಿನ್ನಲೆ ಸಿಡ್ನಿ ನ್ಯಾಯಾಲಯ ಭಾರಿ ಮೊತ್ತದ ದಂಡವಿಧಿಸಿದೆ ಎಂದು ವರದಿಯಾಗಿದೆ.
ಏಪ್ರಿಲ್​, 5 ರಂದು ಈ ಘಟನೆ ನಡೆದಿದ್ದು, ಸಿಡ್ನಿಯ ಸಬ್​ವೇನಲ್ಲಿ ಡೇವಿಡ್​ ವಾರ್ನರ್​ ಮದ್ಯ ಸೇವಿಸಿ ಕಾರನ್ನು ಚಲಾಯಿಸಿದ್ದು, ಪೊಲೀಸರು ಮದ್ಯ ಪರೀಕ್ಷೆಗೆ ಮುಂದಾದಾಗ, ತಮ್ಮ ಸೀಟ್​​ಅನ್ನು ಬೇರೊಬ್ಬರ ಜೊತೆ ಅದಲು-ಬದಲು ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದಾಗಿ ತಿಳಿದದು ಬಂದಿದೆ.

ನ್ಯಾಯಲಯದ ತೀರ್ಪಿನಲ್ಲೇನಿದೆ?

ನಂತರ ಪೊಲೀಸರು ಡೇವಿಡ್​ ವಾರ್ನರ್​ ಅವರ ಉಸಿರನ್ನು ಪರೀಕ್ಷೆಗೆ ಒಳಪಡಿಸಿದಾಗ ಕಾನೂನಿನ ಮಿತಿಗಿಂತ ಎರಡು ಪಟ್ಟು ಮದ್ಯ ಸೇವಿಸಿರುವುದು ಪತ್ತೆಯಾಗಿದೆ. ನಂತರ ಪೊಲೀಸರು ನ್ಯಾಯಾಲಯದಲ್ಲಿ ವಾರ್ನರ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡ್ನಿ ನ್ಯಾಯಾಲಯಕ್ಕೆ ಹಾಜರಾದ ವಾರ್ನರ್ ತಾವು ಮದ್ಯ ಸೇವಿಸಿ ಕಾರನ್ನು ಚಾಲನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ವಾರ್ನರ್​ ಅವರ ತಪ್ಪೊಪ್ಪಿಗೆಯನ್ನು ದಾಖಿಲಿಸಿಕೊಂಡ ನ್ಯಾಯಾಲಯ 1,500 ಆಸ್ಟ್ರೇಲಿಯನ್​ ಡಾಲರ್​​ (ಸುಮಾರು ಒಂದು ಲಕ್ಷದ ಎರಡು ಸಾವಿರ ರೂಪಾಯಿ) ದಂಡವನ್ನು ವಿಧಿಸಿದ್ದು, ಆಲ್ಕೋಹಾಲ್ ಇಂಟರ್​ಲಾಕ್​ ಡಿವೈಸ್​ ಅನ್ನು ತಮ್ಮ ಕಾರಿಗೆ ಇನ್​​ಸ್ಟಾಲ್​ ಮಾಡಿಕೊಳ್ಳುವಂತೆ ನಿರ್ದೇಶಿಸಿದೆ ಎಂದು ತಿಳಿದು ಬಂದಿದೆ.


ಏನಿದು ಆಲ್ಕೋಹಾಲ್ ಇಂಟರ್​ಲಾಕ್​ ಡಿವೈಸ್​?

ಆಲ್ಕೋಹಾಲ್ ಇಂಟರ್​ಲಾಕ್​ ಡಿವೈಸ್​ ಎಂದರೆ ಇದು ವ್ಯಕ್ತಿ ಮದ್ಯ ಸೇವಿಸಿದ್ದಾನೆಯೇ? ಇಲ್ಲವೇ? ಎಂದು ಪರಿಶೀಲಿಸುವ ಸಾಧನವಾಗಿದೆ. ಇದನ್ನು ವಾಹನಕ್ಕೆ ಇನ್​ಸ್ಟಾಲ್​ ಮಾಡಿದರೆ, ಇದರಲ್ಲಿ ಉಸಿರನ್ನು ಊದಿ, ಮದ್ಯ ಸೇವೆನೆ ಮಾಡಿಲ್ಲ ಎಂದರೆ ಮಾತ್ರ ವಾಹನವನ್ನು ಚಾಲನೆ ಮಾಡಲು ಸಾಧ್ಯವಾಗುತ್ತದೆ.
ಒಂದು ವೇಳೆ ಮದ್ಯ ಸೇವಿಸಿ, ವಾಹನವನ್ನು ಚಾಲನೆ ಮಾಡಲು ಮುಂದಾದರೆ, ವಾಹನ ಸ್ಟ್ರಾಟ್​ ಆಗುವುದಿಲ್ಲ. ಮದ್ಯ ಸೇವಿಸಿ ವಾಹನ ಚಾಲನೆ ಮಾಡುವಾಗ ನಡೆಯುವ ಅಪಘಾತವನ್ನು ತಡೆಯಲು ಈ ಸಾಧನವನ್ನು ಸಿದ್ಧ ಪಡಿಸಲಾಗಿದೆ, (ಏಜನ್ಸೀಸ್​​).