ಇಂಡೋನೇಷ್ಯಾದಲ್ಲಿ ಷರಿಯಾ ಕಾನೂನಿನ ಅಡಿಯಲ್ಲಿ ಸಾರ್ವಜನಿಕವಾಗಿ 21 ಛಡಿ ಏಟಿನ ಶಿಕ್ಷೆ 
ವಿದೇಶ

ಮದುವೆಯಾಗದೆ ಚುಂಬಿಸಿದ ಜೋಡಿ: ಒಂದು ಮುತ್ತಿಗೆ 21 ಛಡಿ ಏಟು; ಷರಿಯಾ ಕಾನೂನಿನಡಿ ಪ್ರೇಮಿಗಳಿಗೆ ಸಾರ್ವಜನಿಕ ಶಿಕ್ಷೆ! Sharia Law Caning Punishment

ಪ್ರಮುಖ ಮುಖ್ಯಾಂಶಗಳು

  • ಮದುವೆಯಾಗದೆ ಚುಂಬಿಸಿ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ಪ್ರೇಮಿಗಳು
  • ಇಂಡೋನೇಷ್ಯಾದಲ್ಲಿ ಷರಿಯಾ ಕಾನೂನಿನ ಅಡಿಯಲ್ಲಿ ಸಾರ್ವಜನಿಕವಾಗಿ 21 ಛಡಿ ಏಟಿನ ಶಿಕ್ಷೆ
  • ಕೇವಲ ಒಂದು ಮುತ್ತಿನ ವಿಡಿಯೋ ವೈರಲ್ ಆಗಿದ್ದಕ್ಕೆ ಪ್ರೇಮಿಗಳಿಗೆ ಘೋರ ಶಿಕ್ಷೆ
ಜಕಾರ್ತಾ: ಮದುವೆಯಾಗದೆ ಪರಸ್ಪರ ಚುಂಬಿಸಿ, ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ಹರಿಬಿಟ್ಟ ಆರೋಪದಲ್ಲಿ ಇಬ್ಬರು ಆರೋಪಿಗಳಿಗೆ ಷರಿಯಾ ಕಾನೂನಿನ (Sharia Law Caning Punishment) ಪ್ರಕಾರ ಸಾರ್ವಜನಿಕರ ಎದುರಿಗೆ 21 ಛಡಿ ಏಟಿನ ಶಿಕ್ಷೆಯನ್ನು ನೀಡಲಾಗಿದೆ.
ಈ ಘಟನೆಯು ಇಂಡೋನೇಷ್ಯಾದ ಬುಸ್ಟನುಸ್ಸಲಾಟಿನ್ ಎಂಬಲ್ಲಿ ನಡೆದಿದ್ದು, 22 ವರ್ಷದ ಯುವಕ ಹಾಗೂ 25 ವರ್ಷದ ಯುವತಿಗೆ ಈ ಶಿಕ್ಷೆಯನ್ನು ನೀಡಲಾಗಿದೆ.

ಟಿಕ್​ಟಾಕ್​ ತಂದ ಆಪತ್ತು!

ಮಾಹಿತಿ ಪ್ರಕಾರ, ಶಿಕ್ಷೆಗೆ ಒಳಗಾದ ಈ ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರೆಂದು ತಿಳಿದುಬಂದಿದೆ. ಹೀಗಾಗಿ ಇವರು ಪರಸ್ಪರ ಚುಂಬಿಸುತ್ತಿರುವ ವಿಡಿಯೋವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣ ವೇದಿಕೆಯಾದ ಟಿಕ್​-ಟಾಕ್​ನಲ್ಲಿ ಹಂಚಿಕೊಂಡಿದ್ದರು.
ಆದರೆ ಈ ಕೃತ್ಯವು ಇಸ್ಲಾಂನ ಷರಿಯಾ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಹೀಗಾಗಿ ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ತಲಾ 21 ಬಾರಿ ಛಡಿ ಏಟನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಇಂಡೋನೇಷ್ಯಾದ ಆಚೆ (Aceh) ಪ್ರಾಂತ್ಯದಲ್ಲಿ ಮಾತ್ರ 2006 ರಿಂದ ಷರಿಯಾ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಹೀಗಾಗಿ ಇಲ್ಲಿ ಜೂಜಾಟ, ಅತ್ಯಾಚಾರ, ವ್ಯಭಿಚಾರ, ಸಲಿಂಗಕಾಮ ಹಾಗೂ ಮದುವೆಗೆ ಮುನ್ನ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿದವರಿಗೆ ಧಾರ್ಮಿಕ ಕಾನೂನಿನ ಅಡಿಯಲ್ಲಿ ಶಿಕ್ಷೆ ನೀಡಲಾಗುತ್ತದೆ.

ಪ್ರಪಂಚದಾದ್ಯಂತ ಆಕ್ರೋಶ!

ಈ ಛಡಿ ಏಟನ್ನು ನೀಡಿರುವ ವಿಡಿಯೀ ಮತ್ತು ಫೋಟೊಗಳು ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ, ಇಂಡೋನೇಷ್ಯಾ ಹಾಗು ಷರಿಯಾ ಕಾನೂನಿನ ಮೇಲೆ ಪ್ರಪಂಚದ ಪ್ರತಿ ಮೂಲೆಯಿಂದ ಆಕ್ರೋಶ ಕಂಡುಬರುತ್ತಿದೆ. ಕೇವಲ ಮುತ್ತನ್ನು ಕೊಟ್ಟಿದ್ದಕ್ಕೆ 21 ಛಡಿ ಏಟನ್ನು ನೀಡುತ್ತಾರೆಯೇ? ಪಾಪ ಅವರಿಗೆ ವೈಯಕ್ತಿಕ ಸ್ವಾತಂತ್ರ್ಯ ಎನ್ನುವುದೇ ಇಲ್ಲವೇ? ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ.
ಹೀಗೆ ಸಾರ್ವಜನಿಕರ ಎದುರಿಗೆ ಛಡಿ ಏಟನ್ನು ನೀಡುವುದನ್ನು ಮಧ್ಯಯುಗೀನ ಇತಿಹಾಸದಲ್ಲಿ ಕೇಳಿದ್ದೆವು, ಈಗ ಇದನ್ನು ನೋಡುತ್ತಿದ್ದೆವೆ ಎಂದರೆ ಈ ದೇಶ, ಜನರ ಮನಸ್ಥಿತಿ ಇನ್ನೂ ಆ ಕಾಲದಲ್ಲಿಯೇ ಇದೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಅವರೇನು ಮನುಷ್ಯರೋ ಇಲ್ಲ ಮೃಗಗಳೋ? ಈಗೀನ ಕಾಲದಲ್ಲಿ ಪ್ರಾಣಿಗಳಿಗೆ ಸಹ ಈ ರೀತಿ ಹೊಡೆಯುವುದಿಲ್ಲ. ಇದು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆ, ಈ ದೇಶಕ್ಕೆ ಬಹಿಷ್ಕಾರ ಹಾಕಬೇಕೆಂದು ಮತ್ತೊಬ್ಬರು ಆಕ್ರೋಶ ಹರಹಾಕಿದ್ದಾರೆ, (ಏಜನ್ಸೀಸ್​).