ಪಾಕಿಸ್ತಾನದ ಖೈಬರ್ ಪ್ರಾಂತ್ಯದ ನೌರಂಗ್ ಮಾರ್ಕೆಟ್‌ನಲ್ಲಿ ಭೀಕರ ಕಾರ್ ಬಾಂಬ್ ಸ್ಫೋಟ
- ಪಾಕಿಸ್ತಾನದ ಖೈಬರ್ ಪ್ರಾಂತ್ಯದ ನೌರಂಗ್ ಮಾರ್ಕೆಟ್‌ನಲ್ಲಿ ಭೀಕರ ಕಾರ್ ಬಾಂಬ್ ಸ್ಫೋಟ
- 9 ಜನರ ಸಾವು ಹಲವು ಜನರ ಸ್ಥಿತಿ ಗಂಭೀರ
- ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಪಾಕಿಸ್ತಾನ: ಸ್ಪೋಟಕ ತುಂಬಿದ್ದ ಕಾರೊಂದು ಬ್ಲಾಸ್ಟ್ ಆದ ಹಿನ್ನಲೆ ಸುಮಾರು 9 ಜನ ಪ್ರಾಣ ಕಳೆದುಕೊಂಡಿರುವ ಘಟನೆ ಪಾಕಿಸ್ತಾನದ (Car Bomb Blast in Pakistan) ಖೈಬರ್ ಪ್ರಾಂತ್ಯದ ನೌರಂಗ್ ಮಾರ್ಕೆಟ್‌ನಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ಈ ಘಟನೆಯು ಸೋಮವಾರ (ಮೇ.11) ನಡೆದಿದ್ದು ಘಟನೆಯಲ್ಲಿ 7 ಜನ ನಾಗರಿಕರು, ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರೆ, ಹಲವಾರು ಜನ ತೀವ್ರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಸದಾ ಜನರಿಂದ ಕಿಕ್ಕಿರಿದಿರುವ ನೌರಂಗ್ ಮಾರ್ಕೆಟ್ನ ರೈಲ್ವೆ ಗೇಟಿಗೆ ಸ್ಪೋಟಕ ಹೊತ್ತಿದ್ದ ಕಾರೊಂದು ಬಂದು ಬಡಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಗಡಿಯಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ.
ಘಟನೆ ಬಳಿಕ ಸ್ಥಳಕ್ಕೆ ಭದ್ರತಾ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಹಾಗೆಯೇ ಘಟನೆಗೆ ಕಾರಣವಾದ ಕಾರಿನ ಹಿನ್ನಲೆ ಬಗ್ಗೆ ತನಿಖೆ ನಡೆಸುತ್ತಿದ್ದಾಗಿ ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಳ್ಳದ ಹಿನ್ನಲೆ ಈ ಘಟನೆ ಹಿಂದೆ ಯಾರ ಕೈವಾಡವಿದೆ? ಇದು ಯೋಜಿತ ದಾಳಿಯೇ? ಅಥವಾ ಅಕಸ್ಮಾತ್ ಆಗಿ ನಡೆದ ಅನಾಹುತವೇ ಎನ್ನುವುದು ತನಿಖೆ ಮೂಲಕ ಬಹಿರಂಗವಾಗ ಬೇಕಿದೆ, (ಏಜನ್ಸೀಸ್).