'ಹೊಕ್ಕಳಿನಲ್ಲಿ ಬಟನ್, ಟ್ರಂಪ್‌ಗೆ ಕರೆಂಟ್ ಶಾಕ್'
- 'ಹೊಕ್ಕಳಿನಲ್ಲಿ ಬಟನ್, ಟ್ರಂಪ್‌ಗೆ ಕರೆಂಟ್ ಶಾಕ್'
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
- ವೈರಲ್ ವಿಡಿಯೋದ ರಹಸ್ಯ ಬಿಚ್ಚಿಟ್ಟ ಯುವತಿ
ಅಮೆರಿಕ: ಕಳೆದ ಕೆಲ ದಿನಗಳ ಹಿಂದೆ ಅಮೆರಿದ ಶ್ವೇತ ಭವನದ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ಸಾಕಷ್ಟು ವೈಲರ್ ಆಗಿದ್ದು, ಕೆಲವು ವಿಚಿತ್ರ ಸಿದ್ಧಾಂತಗಳಿಗೆ ಮಣೆ ಹಾಕಿದ್ದವು.
ಇಂಟರ್ನೆಟ್ನಲ್ಲಿ ಹರಿದಾಡಿದ್ದ ವಿಡಿಯೋನಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕುರ್ಚಿಯಲ್ಲಿ ಕುಳಿತು ನಿದ್ರೆಗೆ ಜಾರಿದ್ದಾಗ, ಅವರ ಪಕ್ಕದಲ್ಲಿದ್ದ ಯುವತಿಯೊಬ್ಬಳು ತಮ್ಮ ಹೊಟ್ಟೆ ಮೇಲೆ ಕೈಯಿರಿಸಿದ್ದೆ ಟ್ರಂಪ್ (Trump Viral Video) ಒಂದೇ ಸಮನೆ ಎಚ್ಚರಗೊಂಡಿದ್ದರು.
ಈ ವಿಡಿಯೋ ಎಲ್ಲಡೆ ವೈರಲ್ ಆಗಿ, ಆಕೆ ಅಮೆರಿಕದ ಗುಪ್ತಚರೆ, ಆಕೆ ಹೊಕ್ಕಳಿನಲ್ಲಿ ಒಂದು ಬಟನ್ಯಿದೆ. ಅದನ್ನು ಅದುಮಿದಾಗ ಅಮೆರಿಕ ಅಧ್ಯಕ್ಷರಿಗೆ ಕರೆಂಟ್ ಶಾಕ್ ತಗುಲುತ್ತದೆ ಎಂದು ಕಥೆ ಕಟ್ಟಲಾಗಿತ್ತು.
ಈ ವಿಷಯ ಎಲ್ಲಡೆ ಹರಿದಾಡಿದ ನಂತರ, ಆ ವಿಡಿಯೋದಲ್ಲಿದ್ದ ಯುವತಿಯೇ ಈ ವಿಷಯಕ್ಕೆ ಸ್ಪಷ್ಟನೆ ನೀಡಿದ್ದು, ಅಂದು ಅಲ್ಲಿ ಆಗಿದ್ದೇನೆಂದು ವಿವರಿಸಿದ್ದಾರೆ.
ವೈರಲ್ ಆಗುತ್ತಿದ್ದ ವಿಡಿಯೋದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿದ್ದ ಯುವತಿ ಹೆಸರು ಜೇಮ್ ಫ್ರಾಂಕ್ಲಿನ್. ಈಕೆ 2020 ರಿಂದ ಟ್ರಂಪ್ನ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು, ಈಗ ತನ್ನದೊಂದು ವೈರಲ್ ವಿಡಿಯೋಗೆ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋವೊಂದನ್ನು ಹಂಚಿಕೊಂಡು, ನಾನು ಗರ್ಭವತಿ ಆಗಿದ್ದೆನೆ ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ತಮ್ಮ ಹೊಕ್ಕಳಿನಲ್ಲಿ ಯಾವುದೇ ಬಟನ್ಯಿಲ್ಲ, ಟ್ರಂಪ್‌ಗೆ ಯಾವುದೇ ಕರೆಂಟ್ ಶಾಕ್ ನೀಡಿಲ್ಲ. ಆ ಘಟನೆ ಕೇವಲ ಕಾಕಾಯಾಳೀಯ ಎಂದು ಹೇಳಿದ್ದಾರೆ.
ಜೇಮ್ ಫ್ರಾಂಕ್ಲಿನ್ 2020 ರಿಂದ ಡೊನಾಲ್ಡ್ ಟ್ರಂಪ್ ಅವರ ಬಳಗದಲ್ಲಿ ಗುರುತಿಸಿಕೊಂಡಿದ್ದು, ಕನ್ಸರ್ವೇಟಿವ್ ಪಕ್ಷದಲ್ಲಿ ಉತ್ತಮ ಸ್ಥಾನವನ್ನು ಇವರು ಪಡೆದಿದ್ದಾರೆ. ಜೊತೆಗೆ ತಮ್ಮ ಪಕ್ಷದ ವಕ್ತಾರೆಯಾಗಿ ಹಲವಾರು ಟಿವಿ ಡಿಬೇಟ್ಗಳಲ್ಲಿ ಇವರು ಭಾಗವಹಿಸುತ್ತಾರೆ. ಸದ್ಯ ಇವರು ಟ್ರಂಪ್ ಅವರ ಓವಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, (ಏಜನ್ಸೀಸ್).