ಬ್ರೆಜಿಲ್‌ನಲ್ಲಿ ಬಂಜಿ ಜಂಪಿಂಗ್ ವೇಳೆ ಭೀಕರ ದುರಂತ!
- ಬ್ರೆಜಿಲ್‌ನಲ್ಲಿ ಬಂಜಿ ಜಂಪಿಂಗ್ ವೇಳೆ ಭೀಕರ ದುರಂತ!
- ಸೊಂಟಕ್ಕೆ ಹಗ್ಗ ಕಟ್ಟುವುದನ್ನು ಮರೆತು ಯುವತಿಯನ್ನು 130 ಅಡಿ ಎತ್ತರದಿಂದ ಕೆಳಗೆ ತಳ್ಳಿದ ಆಯೋಜಕರು
- ಸ್ಥಳದಲ್ಲೇ ಯುವತಿ ಸಾವು, ಶಾಕಿಂಗ್ ವಿಡಿಯೋ ವೈರಲ್
ಬ್ರೆಜಿಲ್: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವನ್ನು ಆಕರ್ಷಿಸುತ್ತಿರುವ ಸಾಹಸಮಯ ಚಟುವಟಿಕೆ ಎಂದರೆ ಅದು ಬಂಜಿ ಜಂಪಿಂಗ್. ಬಲು ಎತ್ತರದಿಂದ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಕೆಳಗೆ ಧುಮುಕುವ ಈ ಸಾಹಸದ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾನಲ್ಲಿ ನೋಡಿರುತ್ತೆವೆ.
ಆದರೆ ಕೆಲದಿನಗಳ ಹಿಂದೆ ಬ್ರೆಜಿಲ್‌ನಲ್ಲಿ ಯುವತಿಯೊಬ್ಬಳ ಸೊಂಟಕ್ಕೆ ಹಗ್ಗ ಕಟ್ಟುವುದನ್ನು ಮರೆತ ಬಂಜಿ ಜಂಪಿಂಗ್ ತಂಡ ಆಕೆಯನ್ನು ಸುಮಾರು 130 ಅಡಿ ಎತ್ತರಿಂದ ಕೆಳಗೆ ಬಿಸಾಕಿದ ಪರಿಣಾಮ (Bungee Jumping Tragedy) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಸಾಹಸ ಮಾಡಲು ಹೋಗಿ ಸಾವು!
ಈ ಘಟನೆ ಬ್ರೆಜಿಲ್‌ನಲ್ಲಿ ಸಂಭವಿಸಿದ್ದು, ಸಾವನ್ನಪ್ಪಿದ ಯುವತಿಯನ್ನು 21 ವರ್ಷದ ಮಾರಿಯಾ ಎಡ್ವರ್ಡಾ ರೋಡ್ರಿಗಸ್ ಡಿ ಫ್ರೀಟಾಸ್ (Maria Eduarda Rodrigues de Freitas) ಎಂದು ಗುರುತಿಸಲಾಗಿದೆ.
ಇಕೆಯನ್ನು ಬಂಜಿ ಜಂಪಿಂಗ್ಗೆ ಸಿದ್ದಪಡಿಸಿದ ತಂಡ ಸುರಕ್ಷಾ ಹಗ್ಗವನ್ನು ಆಕೆಯ ಸೊಂಟಕ್ಕೆ ಸಿಕ್ಕಿಸುವುದನ್ನು ಮರೆತಿದ್ದು, ಇಬ್ಬರು ಯುವಕರು, ಯುವತಿಯನ್ನು ಎತ್ತಿ ಬಿಸಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗಿದೆ. ಇದೇ ವಿಡಿಯೋನಲ್ಲಿ ಅಲ್ಲಿದ್ದ ಇತರ ಯುವ ಸಮುದಾಯ, ರೋಪ್, ರೋಪ್ (ಹಗ್ಗವನ್ನು ಸಿಕ್ಕಿಸಿಲ್ಲ) ಎಂದು ಚಿರುತ್ತಿರುವುದನ್ನು ಕೇಳಿಸಿಕೊಳ್ಳಬಹುದಾಗಿದೆ.
ಸುಮಾರು 130 ಅಡಿ ಮೇಲಿದ್ದ ನೆಲಕ್ಕೆ ಅಪ್ಪಳಿಸಿರುವ ಯುವತಿ, ತೀವ್ರ ರಸ್ತಸ್ರಾವಕ್ಕೆ ಒಳಗಾಗಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆ ಸೇರಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಆಕೆ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಘಟನೆ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ, ಅಲ್ಲಿಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸದ್ಯಕ್ಕೆ ಅರು ಜನರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿದಿದೆ. ಈ ಪ್ರಕರಣ ಇತ್ಯರ್ಥವಾಗುವವರೆಗೆ ಯಾವುದೇ ಬಂಜಿ ಜಂಪಿಂಗ್ ನಡೆಸುವಂತಿಲ್ಲ ಎಂದು ಪೊಲೀಸರು ನೋಟಿಸ್ ನೀಡಿದ್ದಾರೆ, (ಏಜನ್ಸೀಸ್).