ವಿವಾಹೇತರ ಸಂಬಂಧ ಮತ್ತು ಗೂಢಚರ್ಯೆ ಆರೋಪದ ಹಿನ್ನೆಲೆಯಲ್ಲಿ ಎನ್ವಿಡಿಯಾ ಸಿಇಒ ಸ್ಥಾನಕ್ಕೆ ಜೆನ್ಸೆನ್ ಹುವಾಂಗ್ ರಾಜೀನಾಮೆ ನೀಡಿದ್ದು, ಇದೀಗ ಅಮೆರಿಕದ ಅಟಾರ್ನಿ ಜನರಲ್ ನೀಡಿರುವ ಹೇಳಿಕೆ ಟೆಕ್ ಲೋಕದಲ್ಲಿ ಸಂಚಲನ ಮೂಡಿಸಿದೆ. 
ವಿದೇಶ

ಎನ್ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​: 'ಆಲಿಸ್ ಚೀನಿ ಗೂಢಚಾರಿ ಎಂಬುದಕ್ಕೆ ಸಾಕ್ಷ್ಯವಿಲ್ಲ': ಅಟಾರ್ನಿ ಜನರಲ್ ಹೇಳಿದ್ದೇನು? Jensen Huang

ವಾಷಿಂಗ್ಟನ್​: ಸದ್ಯ ಜಗತ್ತಿನಾದ್ಯಂತ ಎನ್ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಅವರ ವಿವಾಹೇತರ ಸಂಬಂಧ ಹಾಗೂ ಚೀನಿ ಗೂಢಚರ್ಯೆ ಜತೆಗೆ ಹೊಂದಿರುವ ಸಂಪರ್ಕದ ಸುದ್ದಿ ಎಲ್ಲಡೆ ಕೇಳಿ ಬರುತ್ತಿದ್ದು, ಇದರಿಂದ ಕಂಪನಿಯ ಮೌಲ್ಯ ಕೂಡ ಕುಸಿಯುತ್ತಿದೆ. ಒಂದೇ ದಿನದಲ್ಲಿ ಸುಮಾರು 600 ಬಿಲಿಯನ್​ ಡಾಲರ್​ ನಷ್ಟವಾದ ಹಿನ್ನಲೆ ಜೆನ್ಸೆನ್ ಹುವಾಂಗ್ ಅವರನ್ನು ಸಿಇಒ ಹುದ್ದೆಯಿಂದ ಕೂಡ ಕೆಳಗಿಳಿಸಲಾಗಿದೆ.

ಆದರೆ, ಈದೀಗ ಅಮೆರಿಕದ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜೆನ್ಸೆನ್ ಹುವಾಂಗ್ ಜತೆ ಸಂಬಂಧ ಹೊಂದಿದ್ದ ಆಲಿಸ್ ಹುವಾಂಗ್, ಚೀನಾದ ಗುಪ್ತಚರ ಇಲಾಖೆ ಅಥವಾ ಆಕೆಯೊಬ್ಬಳು ಚೀನಿ ಗೂಢಚರ್ಯೆ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಸಾಕ್ಷಿ ದೊರೆತಿಲ್ಲ ಎಂಬ ಹೇಳಿಕೆ ಈಗ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.

ಅಟಾರ್ನಿ ಜನರಲ್​ ಹೇಳಿದ್ದೇನು?

ಎನ್ವಿಡಿಯಾ ಮಾಜಿ ಸಿಇಒ ಜೆನ್ಸೆನ್ ಹುವಾಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಟಾರ್ನಿ ಜನರಲ್​ ಟಾಡ್ ಬ್ಲಾಂಚೆ (Todd Blanche), ಆಲಿಸ್ ಹುವಾಂಗ್, ಚೀನೀ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದರು ಎಂಬ ಬಗ್ಗೆ ಎಫ್‌ಬಿಐ ತನಿಖೆ ನಡೆಸುತ್ತಿದೆ. ಆದರೆ, ಅವರು ನಿಜವಾಗಿಯೂ ಚೀನೀ ಗೂಢಚಾರಿ ಹೌದೇ?ಎಂಬ ಬಗ್ಗೆ ನ್ಯಾಯಾಂಗ ಇಲಾಖೆಯು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಚಿಪ್​ ತಂದ ಆಪತ್ತು!

ಅಕ್ಟೋಬರ್ 2025 ರಲ್ಲಿ ವಿವಾಹಿತ ಜೆನ್ಸನ್ ಹುವಾಂಗ್ ಅವರನ್ನು ಸಿಂಗಾಪುರ ಮೂಲದ ಮೆಗಾಸ್ಪೀಡ್‌ ಕಂಪನಿಯ ಆಲಿಸ್ ಹುವಾಂಗ್, ಎನ್ವಿಡಿಯಾ ಕಂಪನಿಯಲ್ಲಿ ಪಾಲುದಾರಿಕೆ ಪಡೆಯುವ ಮೂಲಕ ಜಗತ್ತಿನ ಗಮನ ಸೆಳೆದಿದ್ದರು. ಆಲಿಸ್​ ಅವರ ಕಂಕನಿ ಎನ್ವಿಡಿಯಾಗೆ ಸರ್ಕ್ಯೂಟ್​ ಚಿಪ್​ಗಳನ್ನು ನೀಡುತ್ತಿತ್ತು.

ಆದರೆ, ಈ ಆಲಿಸ್​ ಒಬ್ಬಳು ಚೀನಾ ಏಜೆಂಟ್​ ಹಾಗೂ ಚೀನಾ ಸರ್ಕಾರದೊಂದಿದೆ ಸಂಪರ್ಕ ಹೊಂದಿದ್ದಾಳೆ. ಇವಳು ಎನ್ವಿಡಿಯಾದ ಸೂಕ್ಷ್ಮ ಮಾಹಿತಿಯನ್ನು ತನ್ನ ಚಿಪ್​ಗಳ ಮೂಲಕ ಚೀನಾಗೆ ರವಾನಿಸುತ್ತಿದ್ದಾಳೆಂಬ ಅನುಮಾನ ಹಾಗೂ ಆರೋಪ ಕೇಳಿಬಂದಿತು. ಇದೇ ಆಲಿಸ್​ ಚೀನಾದ ಹುವೈ ಕಂಪನಿಯಲ್ಲಿ ಸಹ ಪಾಲುದಾರಿಕೆ ಹೊಂದಿರುವ ಕಾರಣಕ್ಕಾಗಿ ಈ ಬಗ್ಗೆ ಕಳವಳ ವ್ಯಕ್ತವಾಗಿದ್ದು, ಇದರ ಬಗ್ಗೆ ಜಾಗತಿಕ ಮಾಧ್ಯಮಗಳು ಸರಳಿ ವರದಿಗಳನ್ನು ಪ್ರಕಟಿಸಿದವು.

ಸಿಇಒ ಸ್ಥಾನದಿಂದ ಕೆಳಗಿಳಿದ ಹುವಾಂಗ್

ಮೂರು ವಿವಾಹೇತರ ಸಂಬಂಧಗಳು ಬಹಿರಂಗವಾದ ಬಳಿಕ ಜಾಗತಿಕ ಟೆಕ್ ಮತ್ತು ಕೃತಕ ಬುದ್ದಿಮತ್ತೆ (AI) ಲೋಕದ ದಿಗ್ಗಜ ಕಂಪನಿ ಎನ್ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಗುರುವಾರ (ನ. 12) ಎನ್​ವಿಡಿಯಾ ಜೆನ್ಸನ್ ಹುವಾಂಗ್ ಅವರ ರಾಜೀನಾಮೆಯನ್ನು ಘೋಷಿಸಿದ್ದು, 2013ರಿಂದ ಎನ್ವಿಡಿಯಾದ ಮುಖ್ಯ ಹಣಕಾಸು ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿರುವ ಕೊಲೆಟ್ ಕ್ರೆಸ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಆದರೆ ಈ ಎಲ್ಲಾ ಬೆಳವಣಿಗೆ ಮಧ್ಯದಲ್ಲಿ ಅಟಾರ್ನಿ ಜನರಲ್​ ಆಲಿಸ್​ ಹುವಾಂಗ್​ ಚೀನಿ ಏಜೆಂಟ್​ ಎನ್ನುವುದು ಇನ್ನೂ ಸಾಬೀತಾಗಿಲ್ಲ ಎನ್ನುವ ಹೇಳಿಕೆ ಈಗ ಟೆಕ್​ ಜಗತ್ತಿನಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ, (ಏಜೆನ್ಸೀಸ್​).