ಜೋ ರೂಟ್ ಶತಕ ಸಿಡಿಸಿ ಸಂಭ್ರಮಿಸಿದ ಕ್ಷಣ
ಕ್ಯಾನ್‌ಬೆರಾ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ(Ashes final Test) ಜೋ ರೂಟ್ ಸ್ಮರಣೀಯ 41 ಶತಕ ಬಾರಿಸಿದ್ದಾರೆ. ಈ ಮೂಲಕ ಅಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಎರೆಡನೇ ದಿನ ಬ್ಯಾಟಿಂಗ್ ಆರಂಭಿಸಿದ ಆಂಗ್ಲರು ರೂಟ್ಗಳಿಸಿದ 160 (242 ಎಸೆತಗಳು) ರನ್ ಅದ್ಭುತ ಪ್ರದರ್ಶನದಿಂದ 384 ಆಲೌಟ್ ಆಯಿತು.
ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕದ ಕುಸಿತ
ಮಧ್ಯಮ ಕ್ರಮಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಾಯಕ ಬೆನ್ ಸ್ಟೋಕ್ಸ್ ಶೂನ್ಯಕ್ಕೆ ಮಿಚೆಲ್ ಸ್ಟಾರ್ಕ್ ವಿಕೆಟ್ ಒಪ್ಪಿಸಿದರು. ನಂತರ ಬಂದ ಜೇಮೀ ಸ್ಮಿತ್ 46 ರನ್ ಗಳಿಸಿದರು. ಜೇಮೀ ಔಟ್ ಆದ ಬಳಿಕ ಇಂಗ್ಲೆಂಡ್ ತಂಡವು ಕೇವಲ ಒಂಬತ್ತು ರನ್‌ಗಳಿಗೆ ತಮ್ಮ ಕೊನೆಯ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.
ಕಾಂಗರೂಗಳ ಪರವಾಗಿ ಮೈಕಲ್ ನೆಸರ್ 4 ವಿಕೆಟ್, ಮಿಚೆಲ್ ಸ್ಟಾರ್ಕ್ ಮತ್ತು ಸ್ಕಾಟ್ ಬೋಲ್ಯಾಂಡ್ 2 ವಿಕೆಟ್ ಕಿತ್ತು ಸಂಭ್ರಮಿಸಿದರು.
ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್‌ನ 384 ರನ್‌ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ ತಂಡವು ಎರಡನೇ ದಿನದ ಅಂತ್ಯಕ್ಕೆ 166/2 ಸ್ಕೋರ್ ಮಾಡಿದೆ. ಆಸೀಸ್ ಸದ್ಯ 218 ರನ್‌ಗಳ ಹಿನ್ನಡೆಯಲ್ಲಿದೆ.
ಆಸ್ಟ್ರೇಲಿಯಾ ಬ್ಯಾಟಿಂಗ್
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಬಿರುಸಿನ ಬ್ಯಾಟಿಂಗ್ ಮೂಲಕ ಕೇವಲ 87 ರಲ್ಲಿ ಅಜೇಯ 91 ರನ್ ಸಿಡಿಸಿದ್ದಾರೆ. ಇವರ ಇನಿಂಗ್ಸ್‌ನಲ್ಲಿ 15 ಆಕರ್ಷಕ ಬೌಂಡರಿಗಳಿವೆ. ಈ ಮೂಲಕ ಅವರು ಈ ಸರಣಿಯಲ್ಲಿ 500 ರನ್‌ಗಳ ಗಡಿ ದಾಟಿದ ಮೊದಲ ಆಟಗಾರ ಎನಿಸಿಕೊಂಡರು.
ಕಾಂಗರೂ ಪರವಾಗಿ ಮಾರ್ನಸ್ ಲಬುಶೇನ್ ಹೆಡ್ ಜೊತೆಗೂಡಿ ಎರಡನೇ ದಾಖಲೆ ಅವರಿಗೆ 105 ರನ್‌ಗಳ ಮಹತ್ವದ ಜೊತೆಯಾಟವಾಡಿದರು. ಅಲ್ಲದೆ, ಮಾರ್ನಸ್ 48 ರನ್ ಗಳಿಸಿ ಬೆನ್ ಸ್ಟೋಕ್ಸ್ ವಿಕೆಟ್ ಒಪ್ಪಿಸಿದರು. ಮೊದಲ ಬಾರಿಗೆ ಟ್ರಾವಿಸ್ ಹೆಡ್ ಜೊತೆ 57 ರನ್ ಸೇರಿಸಿದ ಜೇಕ್ ವೆಡರಾಲ್ಡ್, 21 ರನ್ ಗಳಿಸಿದ್ದಾಗ ಬೆನ್ ಸ್ಟೋಕ್ಸ್ ಎಸೆತದಲ್ಲಿ ಎಲ್ ಬಿಡಬ್ಲೂ ಬಲೆಗೆ ಬಿದ್ದರು.
ನೈಟ್ ವಾಚ್‌ಮನ್: ದಿನದ ಕೊನೆಯಲ್ಲಿ ಮೈಕಲ್ ನೆಸರ್ (1*) ನೈಟ್ ವಾಚ್‌ಮನ್ ಆಗಿ ಕ್ರೀಸ್‌ನಲ್ಲಿದ್ದಾರೆ. ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ ಅಮೋಘ ಬೌಲಿಂಗ್ ದಾಳಿ ನಡೆಸಿ ಬಿದ್ದಿರುವ ಎರಡೂ ವಿಕೆಟ್‌ಗಳನ್ನು (2/30) ಕಬಳಿಸಿದ್ದಾರೆ,(ಏಜೆನ್ಸೀಸ್).