ನೆಲಕ್ಕೆ ಅಪ್ಪಳಿಸಿದ ಅಮೆರಿಕದ ಎಫ್-15 ಯುದ್ಧ ವಿಮಾನ
- ಇರಾನ್ ಅಮೆರಿಕ ನಡುವೆ ಮುಂದುವರೆದ ಸಂಘರ್ಷ
- ಅಮೆರಿಕದ ಬಲಿಷ್ಟ ಎಫ್-15 ಯುದ್ಧ ವಿಮಾನವನ್ನು ಹೊಡೆದುರಳಿಸಿದ ಇರಾನ್
- ಕುವೈತ್ ರಕ್ಷಣಾ ಸಚಿವಾಲಯದಿಂದ ಹೊರಬಿದ್ದ ಮಾಹಿತಿ
- ನಮ್ಮ ಯುದ್ಧ ವಿಮಾನವನ್ನು ಇರಾನ್ ಹೊಡಡೆದಿಲ್ಲ ಎಂದ ಅಮೆರಿಕ
ಕುವೈತ್: ಇರಾನ್ ಮತ್ತು ಅಮೆರಿಕ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಇರಾನಿನ ದಾಳಿಯಲ್ಲಿ ಅಮೆರಿಕದ ಹಲವು ಎಫ್-15 ( F15 Fighter Jet) ಯುದ್ಧ ವಿಮಾನಗಳು ಪತನವಾಗಿವೆ ಎಂದು ಕುವೈತ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಕಳೆದ ಮೂರು ದಿನಗಳಿಂದ ಈ ಯುದ್ಧ ನಡೆಯುತ್ತಿದ್ದು, ಸೋಮವಾರ (ಮಾ.2) ಇರಾನ್ ಅಮೆರಕದ ಪ್ರಮುಖ ಯುದ್ಧ ವಿಮಾನಗಳಲ್ಲಿ ಒಂದಾದ ಎಫ್-15 ಗಳನ್ನು ಹೊಡೆದುರಳಿಸಿದೆ, ಆದರೆ ಪೈಲೆಟ್ಗಳು ವಿಮಾನ ನಾಶವಾಗುವ ಮೊದಲೇ ಸಾವಿನಿಂದ ತಪ್ಪಿಸಿಕೊಂಡಿದ್ದಾರೆ ಎಂದು ಕುವೈತ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಇಂದು ಬೆಳಿಗ್ಗೆ ಯುಎಸ್ನ ಹಲವಾರು ಯುದ್ಧ ವಿಮಾನಗಳು ಪತನವಾಗಿದೆ. ಆದರೆ ಸಿಬ್ಬಂದಿಗಳು ಎಲ್ಲರೂ ಬದುಕುಳಿದಿದ್ದಾರೆ ಎಂದು ತಿಳಿದು ಬಂದಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಕುವೈತ್ನ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ವಿಮಾನಗಳು ಪತನವಾದ ಕೂಡಲೇ ಸ್ಥಳಕ್ಕೆ ಧಾವಿಸಿ, ಸಿಬ್ಬಂದಿಗಳನ್ನು ವೈಧ್ಯಕೀಯ ಚಿಕಿತ್ಸೆಗೆ ಕರೆದೊಯ್ಯಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.
ಇರಾನ್ ನಮ್ಮ ವಿಮಾನವನ್ನು ಹೊಡೆದಿಲ್ಲ
ಈ ಘಟನೆಗೆ ಪ್ರತಿಕ್ರಿಯಿಸಿರುವ ಅಮೆರಿಕಾ, ನಮ್ಮ ಯುದ್ಧವಿಮಾನ ಪತನವಾಗಿರುವುದು ನಿಜ, ಆದರೆ ಅದು ನಮ್ಮದೇ ಇನ್ನೊಂದು ವಿಮಾನದ ಗುಂಡಿನಿಂದ ಪತನವಾಗಿದೆಯೇ ಹೊರತು, ಇರಾನಿನ ದಾಳಿಯಿಂದಲ್ಲ ಎಂದು ಹೇಳಿದೆ. ಆದರೆ ಇಲ್ಲಿವರೆಗೆ ಅಮೆರಿಕದ ರಕ್ಷಣಾ ವಲಯದಿಂದ ಯಾವುದೇ ಸ್ಪಷ್ಟಣೆ ಹೊರಬಂದಿಲ್ಲ.
ಆದರೆ, ಇರಾನ್, ಅಮೆರಿಕದ ಈ ಯುದ್ಧವಿಮಾನಗಳನ್ನು ತಾನೇ ಹೊಡೆದು ಬೀಳಿಸಿರುವುದಾಗಿ ಹೇಳಿಕೆ ನೀಡಿದೆ. ಎಕ್ಸ್ (ಟ್ವಿಟರ್) ನಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಆಕಾಶದಲ್ಲಿ ಹಾರಾಡುತ್ತಿದ್ದ ಯುದ್ಧ ವಿಮಾನ ಒಂದು ದಿಢೀರನೆ ನೆಲಕ್ಕೆ ಅಪ್ಪಳಿಸಿ, ಬೆಂಕಿಯುಂಡೆಯಂತೆ ಬದಲಾಗಿರುವುದನ್ನು ನಾವು ನೋಡ ಬಹುದಾಗಿದೆ. ಈ ಘಟನೆ ಬಗ್ಗೆ ವಿವರಗಳು ಸೀಮಿತವಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾದ ಬಳಿಕ ನೈಜ ಚಿತ್ರಣ ಅರಿವಿಗೆ ಬರಲಿದೆ.
ಎಫ್-15 ಇದು ಅಮೆರಿಕ ಮೂಲದ ಮ್ಯಾಕ್ಡೊನೆಲ್ ಡೌಗ್ಲಾಸ್ ಕಂಪನಿಯು ತಯಾರಿಸಿದ ಅವಳಿ ಇಂಜಿನ್ ಹೊಂದಿರುವ, ಎಲ್ಲಾ ಹವಾಮಾನಗಳಲ್ಲೂ ಕಾರ್ಯನಿರ್ವಹಿಸಬಲ್ಲ ಯುದ್ಧ ವಿಮಾನವಾಗಿದೆ. ಇದು ಶಬ್ದದ ವೇಗಕ್ಕಿಂತ ಎರಡು ಪಟ್ಟು ಹೆಚ್ಚಿನ ವೇಗದಲ್ಲಿ ಚಲಿಸಬಲ್ಲದಾಗಿದ್ದು, ಇದು ಇಲ್ಲಿಯ ವರೆಗೆ ಸುಮಾರು 100 ಕ್ಕೂ ಹೆಚ್ಚು ವೈರಿ ವಿಮಾನಗಳನ್ನು ಹೊಡೆದುರಳಿಸಿದೆ.
ಈ ವಿಮಾನವನ್ನು ಅಮೆರಿಕದ ಜೊತೆಗೆ ಇಸ್ರೇಲ್, ಜಪಾನ್, ಸೌದಿ ಅರೇಬಿಯಾ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳು ಈ ವಿಮಾನವನ್ನು ಬಳಸುತ್ತಿವೆ. ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳಲ್ಲಿ ಇಸ್ರೇಲ್ ಈ ವಿಮಾನಗಳನ್ನು ವ್ಯಾಪಕವಾಗಿ ಬಳಸುತ್ತಿದೆ ಎಂಬ ಮಾಹಿತಿಯಿದೆ,(ಏಜನ್ಸೀಸ್).