28 ವರ್ಷಗಳ ಕಾಲ್ನಡಿಗೆಯ ನಂತರ ಕುಟುಂಬವನ್ನು ಭೇಟಿಯಾದ ಮಾಜಿ ಬ್ರಿಟಿಷ್ ಯೋಧ ಕಾರ್ಲ್ ಬುಷ್ಬಿ Former British soldier Karl Bushby reunites with his family after 28 years of traveling on foot.
ವಿದೇಶ

29 ದೇಶ, 50 ಸಾವಿರ ಕಿಲೋಮೀಟರ್ ಪಯಣ: 28 ವರ್ಷ ಕಾಲ್ನಡಿಗೆ ಯಾತ್ರೆ ಮುಗಿಸಿ ಮನೆ ಸೇರಿದ ಸಾಹಸಿ! Karl Bushby

ಬ್ರಿಟನ್​: ಕಳೆದ 28 ವರ್ಷಗಳಿಂದ ತನ್ನ ಕಾಲ್ನಡಿಗೆ ಪ್ರವಾಸದಲ್ಲಿದ್ದ ಮಾಜಿ ಬ್ರಿಟಿಷ್​ ಸೈನ್ಯಾಧಿಕಾರಿ ಕಾರ್ಲ್ ಬುಷ್ಬಿ ಸೋಮವಾರ (ನ.2) ತನ್ನ ಮನೆಗೆ ಮರಳುವ ಮೂಲಕ, ಸುಮಾರು 50 ಸಾವಿರ ಕೀ.ಮೀ. ಪ್ರವಾಸಕ್ಕೆ ಅಂತ್ಯಹಾಡಿದ್ದಾನೆ.

ಸುಧೀರ್ಘ 28 ವರ್ಷಗಳ ಬಳಿಕ ನಾರ್ಥನ್​ ಇಂಗ್ಲೆಂಡ್​ನಲ್ಲಿರುವ ಸಿಟಿ ಹಾಫ್​ ಹುಲ್​ನಲ್ಲಿರುವ ನಮ್ಮ ಮನೆಯನ್ನು, ಮನೆಯವರನ್ನು ಕಾರ್ಲ್ ಬುಷ್ಬಿ ಸಂಧಿಸಿದ್ದಾನೆ. ತನ್ನ 29 ನೇ ವಯಸ್ಸಿನಲ್ಲಿ ಪ್ರಯಾಣ ಆರಂಭಿಸಿದ ಕಾರ್ಲ್ ಈಗ 57 ವರ್ಷಕ್ಕೆ ತಿರುಗಿದ್ದು, ತನ್ನ 36 ವರ್ಷದ ಮಗ ಹಾಗೂ 12 ವರ್ಷದ ಮೊಮ್ಮಗಳನ್ನು ತಬ್ಬಿಕೊಂಡು ಅಳುತ್ತಿರುವ ದೃಶ್ಯ ಈಗ ಸೋಷಿಯಲ್​ ಮೀಡಿಯಾ ಸೆನ್​ಸೇಷನ್​ ಆಗಿ ಮಾರ್ಪಟ್ಟಿದೆ.

ಅಪ್ಪನ ಆ ಒಂದು ಮಾತು!

ಕಾರ್ಲ್ ಬುಷ್ಬಿ ಬ್ರಿಟಿಷ್ ಸೇನೆಯ ಪ್ಯಾರಾಚೂಟ್​ ರೆಜಿಮೆಂಟ್​ನಲ್ಲಿ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ತಂದೆ ಕೇತ್​, ಅವರು ಕೂಡ ನಿವೃತ್ತ ಸೇನಾಧಿಕಾರಿಯಾಗಿದ್ದರು. ಒಂದು ಬರ್ತ್​ಡೇ ಪಾರ್ಟಿಯಲ್ಲಿ ಮಾತನಾಡುತ್ತಿದ್ದಾಗ, ಲಂಡನ್​ನಿಂದ ನ್ಯೂಯಾರ್ಕ್​ ಅನ್ನು ಕಾಲ್ನಡಿಗೆಯಲ್ಲಿ ಕ್ರಮಿಸಲು ಎಷ್ಟು ಸಮಯ ಬೇಕೆಂದು ಅವರು, ಅವರ ಗೆಳೆಯರೊಟ್ಟಿಗೆ ಸಂವಾದ ನಡೆಸುತ್ತಿದ್ದರು.

ಇದನ್ನು ಕೇಳಿಸಿಕೊಂಡ ಕಾರ್ಲ್ ಬುಷ್ಬಿ, ತಾನೇಕೆ ಈ ಪ್ರಯಾಣವನ್ನು ಕೈಗೊಳ್ಳಬಾರದು, ಹೆಚ್ಚೆಂದರೆ 5 ವರ್ಷ ತಗುಲಬಹುದೆಂದು ತಿಳಿದಿದ್ದರು. ನಂತರ ಅವರ ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆ ಎದುರಾದ ಹಿನ್ನಲೆ ತಾವೊಂದು ಕಾಲ್ನಡಿಗೆಯ ಪ್ರವಾಸವನ್ನು ಮಾಡಿಯೇ ತೀರುವುದಾಗಿ ನಿರ್ಧರಿಸಿ 1998, ನವೆಂಬರ್​ 1 ರಂದು ಮನೆಯಲ್ಲಿ ಯಾರಿಗೂ ಹೇಳದೇ ಪ್ರಯಾಣ ಆರಂಭಿಸಿದರು.

ಈ ನಿಮಯ ಮೀರಬಾರದು!

ಕಾರ್ಲ್ ಬುಷ್ಬಿ, ತಾವು ಆರಂಭಿಸಿದ ಈ ಪ್ರಯಾಣಕ್ಕೆ ಕಠಿಣ ನಿಯಮಮೊಂದನ್ನು ಹಾಕಿಕೊಂಡಿದ್ದರು. ತಮ್ಮ ಪ್ರಯಾಣದ ಪ್ರಾರಂಭಿಕ ಹಂತವಾದ ಚಿಲಿ ದೇಶದಿಂದ, ಇಂಗ್ಲೆಂಡ್​ನ ಹಲ್​ನಲ್ಲಿರುವ ತಮ್ಮ ತಾಯಿ ಮನೆಯನ್ನು ತಲುಪುವವರೆಗೆ ಯಾವುದೇ ಕಾರಣಕ್ಕೂ ಯಾವುದೇ ಸಾರಿಗೆ ವ್ಯವಸ್ಥೆಯನ್ನು ಬಳಸುವಂತಿಲ್ಲ ಎಂದು ನಿರ್ಧರಿಸಿದ್ದರು.

ಕಾರ್ಲ್ ತನ್ನ ಕಠಿಣ ನಿಯಮಗಳನ್ನು ಮೀರದ ಕಾರಣ ಇವನ ಪ್ರಯಾಣ ಸುಮಾರು 10 ವರ್ಷ ಅಧಿಕವಾಗಿದ್ದು, ಕೋವಿಡ್​-19, ಸಾಂಕ್ರಾಮಿಕ ಕಾಯಿಲೆ, ವಿವಿಧ ದೇಶಗಳಲ್ಲಿ ಬಂಧನ-ಬಿಡುಗಡೆ, ಆರ್ಥಿಕ ಬಿಕ್ಕಟ್ಟು ಎಲ್ಲವನ್ನು ಅನುಭವಿಸಬೇಕಾಯಿತು.

ಕಠಿಣ ಸವಾಲುಗಳನ್ನು ದಾಟಿದ ಬುಷ್ಬಿ!

ಆದರೆ, ಈ ಪ್ರಯಾಣ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಕಾರ್ಲ್ ದಕ್ಷಿಣ ಅಮೆರಿಕಾದ ಹಲವು ದೇಶಗಳ ಮೂಲಕ ನಡೆದು, ಕೊಲಂಬಿಯಾ ಮತ್ತು ಪನಾಮಾ ನಡುವಿನ ಅಪಾಯಕಾರಿ ಡೇರಿಯನ್ ಗ್ಯಾಪ್ ಪ್ರದೇಶವನ್ನೂ ದಾಟಿ, ಬಳಿಕ ಉತ್ತರ ಅಮೆರಿಕಾದತ್ತ ಸಾಗಿದರು.

2006ರಲ್ಲಿ ಅಲಾಸ್ಕಾ ಮತ್ತು ರಷ್ಯಾ ನಡುವಿನ ಬೇರಿಂಗ್ ಜಲಸಂಧಿ ಎದುರಾದಾಗ, ಅದನ್ನು ಈಜಿ ದಾಟುವುದು ಅಸಾಧ್ಯವಾಗಿತ್ತು. ಹೀಗಾಗಿ ಆ ನೀರು ಹಿಮವಾಗಿ ಪರಿವರ್ತನೆಯಾದ ಬಳಿಕ ಅದನ್ನು ಕಾಲ್ನಡಿಗೆಯಲ್ಲಿ ದಾಟಿದ ಅಪರೂಪದ ಸಾಧನೆಯನ್ನೂ ಬುಷ್ಬಿ ಮಾಡಿದ್ದಾರೆ. ನಂತರ ಸೈಬೀರಿಯಾ, ಮಂಗೋಲಿಯಾ, ಚೀನಾ ಸೇರಿದಂತೆ ಏಷ್ಯಾದ ಹಲವು ಭಾಗಗಳನ್ನು ದಾಟಿ ಯುರೋಪ್ ತಲುಪಿದರು. 2024ರಲ್ಲಿ ಕ್ಯಾಸ್ಪಿಯನ್ ಸಮುದ್ರದ ಭಾಗವನ್ನು ಈಜುವ ಮೂಲಕ ದಾಟಿದರು.

ಗುರಿ ತಲುಪಿದ ಕಾರ್ಲ್​!

ಇತ್ತೀಚೆಗೆ ಫ್ರಾನ್ಸ್‌ನಿಂದ ಇಂಗ್ಲಿಷ್ ಚಾನೆಲ್‌ನ್ನು ಈಜಿಕೊಂಡು ದಾಟಿ ದಕ್ಷಿಣ ಇಂಗ್ಲೆಂಡ್‌ನ ಡೋವರ್ ಸಮೀಪದ ಶೇಕ್ಸ್‌ಪಿಯರ್ ಬೀಚ್‌ ಕಾರ್ಲ್ ಬುಷ್ಬಿ ತಲುಪಿದ್ದರು. ಅಲ್ಲಿ ಅವರ ಅಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಅವರನ್ನು ಸ್ವಾಗತಿಸಿದರು. ನಂತರ ಅಲ್ಲಿಂದ ಸೋಮವಾರ ಅಂದರೆ ನವೆಂಬರ್​ 2 ರಂದು ತಮ್ಮ ಹಲ್​ನಲ್ಲಿದ್ದ ತಾಯಿಯ ಮನೆಯನ್ನು ತಲುಪುವ ಮೂಲಕ ಸುಮಾರು 50 ಸಾವಿರ ಕೀ.ಮೀ ಪ್ರಯಾಣವನ್ನು ಯಶಸ್ವಿಯಾಗಿಸಿದ್ದಾರೆ, (ಏಜೆನ್ಸೀಸ್).