ಬಾಂಗ್ಲಾದೇಶದ ಅರಣ್ಯ ರಕ್ಷಕರ ಸಮವಸ್ತ್ರ ಫುಲ್ ವೈರಲ್
- ಬಾಂಗ್ಲಾದೇಶದ ಅರಣ್ಯ ರಕ್ಷಕರ ಸಮವಸ್ತ್ರ ಫುಲ್ ವೈರಲ್
- ಹುಲಿ ಚರ್ಮದ ಅಂಗಿ, ಹಾವಿನ ಚರ್ಮದ ಫ್ಯಾಂಟ್ನಲ್ಲಿರುವ ಫೋಟೊ ನೋಡಿ ನಕ್ಕ ನೆಟ್ಟಿಗರು
- ಇದೇನು ಹುಲಿ ಮತ್ತು ಹಾವಿನ ಮಿಶ್ರತಳಿ ಎಂದ ಜನರು
ವೈರಲ್: ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾ ವೇದಿಕೆ ಎಕ್ಸ್ (ಟ್ವಿಟರ್) ನಲ್ಲಿ ಬಾಂಗ್ಲಾದೇಶದ ಅರಣ್ಯ ರಕ್ಷಕ (Bangladesh Forest Guard) ರ ಫೋಟೊವೊಂದು ಸಖತ್ ವೈರಲ್ ಆಗುತ್ತಿದೆ. ಈ ಫೋಟೊವನ್ನು ನೋಡಿದ ಜನ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿರುವುದಂತು ನಿಜವಾಗಿದೆ.
ಫೋಟೊದಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೊನಲ್ಲಿ ಇಬ್ಬರು ಅರಣ್ಯ ರಕ್ಷಕರು ಹುಲಿಯ ಚರ್ಮದ ಬಣ್ಣದ ಅಂಗಿ ಮತ್ತು ಹಾವಿನ ಚರ್ಮದ ಬಣ್ಣದ ಫ್ಯಾಂಟ್ನ್ನು ಧರಿಸಿದ್ದಾರೆ. ಈ ಸಮವಸ್ತ್ರವು ನೋಡಲು ಬಹಳ ಹಾಸ್ಯಮಯವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ಇವರು ಧರಿಸಿರುವ ಬಟ್ಟೆ ನೋಡಲು ದಿಟ್ಟೋ ಪ್ರಾಣಿಗಳ ಚರ್ಮದಂತೆ ಭಾಸವಾಗುತ್ತಿದ್ದು, ಇದರಿಂದಲೇ ಲಕ್ಷಾಂತರ ಜನ ಈ ಫೋಟೊವನ್ನು ನೋಡಿ ಹಾಸ್ಯಭರಿತ ಇಮೋಜಿಗಳನ್ನು ಹಾಗೂ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ಫೋಟೊ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಯಾರಯ್ಯಾ ಇವರು ಹುಲಿ ಮತ್ತು ಹಾವಿಗೆ ಹುಟ್ಟಿದ ಬೆರಕೆ ತಳಿಗಳು ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ನನಗೆ ಬೇಸರವಾದಾಗೆಲ್ಲಾ ಈ ಫೋಟೊವನ್ನೇ ನೋಡುತ್ತೇನೆ ನಕ್ಕು ನಕ್ಕು ದುಃಖವೆಲ್ಲಾ ಮಾಯವಾಗುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇವರೇನಾದರೂ ಈ ವಸ್ತ್ರದಲ್ಲಿ ಕಾಡಿಗೆ ಹೋದರೆ ಪ್ರಾಣಿಗಳೇ ಕನ್ಪ್ಯೂಸ್ ಆಗುವುದು ಗ್ಯಾರಂಟಿ ಎಂದು ಮತ್ತೊಬ್ಬರು ಹೇಳಿದ್ದಾರೆ,(ಏಜನ್ಸೀಸ್).