ಅಮೆರಿಕ-ಇರಾನ್ ಶಾಂತಿ ಒಪ್ಪಂದದ ಅಸಲಿ ಕಥೆ!
- ಅಮೆರಿಕ-ಇರಾನ್ ಶಾಂತಿ ಒಪ್ಪಂದದ ಅಸಲಿ ಕಥೆ!
- ಪರಮಾಣು ಯೋಜನೆ ಕೈಬಿಡಲು US ನೀಡಿದ $6 ಬಿಲಿಯನ್ ಆಫರ್
- ಹೊರ್ಮುಜ್ ಜಲಸಂಧಿ ಮೇಲೆ ಇರಾನ್ ಹಿಡಿತ
- ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಿಲ್ಲಿಸಿದರೆ ಒಪ್ಪಂದಕ್ಕೆ ಸಿದ್ಧ
ವಾಷಿಂಗ್ಟನ್: ಕಳೆದ ನಾಲ್ಕು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಸಂಘರ್ಷ ಈಗ ಮಾತುಕತೆ ಮೂಲಕ ಪರಿಹಾರವನ್ನು (US Iran Peace Deal) ಕಂಡುಕೊಂಡಿದ್ದು, ಅಂತೂ ಇರಾನ್ ಮತ್ತು ಅಮೆರಿಕ ನೆಲದಲ್ಲಿ ಶಾಂತಿ ಮೂಡಿದೆ ಎಂದು ಹೇಳಬಹುದಾಗಿದೆ.
ಸ್ವಿಟ್ಜರ್ಲ್ಯಾಂಡ್ನಲ್ಲಿ ಈ ವಾರ ಪೂರ್ತಿ ನಡೆಯಲಿರುವ ಶಾಂತಿ ಸಭೆಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹಾಜರಿಲಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಅಮೆರಿಕ ಇರಾನ್ ಮುಂದೆ ಏನು ಷರತ್ತು ಇಡಲಿದೆ? ಇರಾನ್ ಬೇಡಿಕೆಗಳು ಏನಿರಲಿದೆ ಎಂಬ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆ ಏರ್ಪಟ್ಟಿದೆ.
ಪರಮಾಣು ತ್ಯಜಿಸಿ; 6 ಬಿಲಿಯನ್ ನಿಮ್ಮದಾಗಿಸಿ!
ಈ ಸಂಘರ್ಷ ಪ್ರಾರಂಭವಾಗಲು ಮೂಲ ಕಾರಣವೇ ಇರಾನ್ ಪರಮಾಣು ಶಕ್ತಿ ಪಡೆಯಲು ನಡೆಸಿದ ಪ್ರಯೋಗಗಳಾಗಿವೆ. ಹೀಗಾಗಿ ಅಮೆರಿಕ ಯಾವುದೇ ಕಾರಣಕ್ಕೆ ಇರಾನ್ ಪರಮಾಣು ಶಕ್ತಿ ಪಡೆಯುವುದನ್ನು ತಡೆಯುತ್ತದೆ. ಇದಕ್ಕಾಗಿ ಅಮೆರಿಕ ಇರಾನ್ಗೆ ಸುಮಾರು 6 ಬಿಲಿಯನ್ ಡಾಲರ್ಗಳನ್ನು ಪರಿಹಾರ ನಿಧಿಯಾಗಿ ನೀಡಿ ಪರಮಾಣು ಶಕ್ತಿ ಪಡೆಯುವ ಯೋಜನೆಯನ್ನು ಕೈ ಬಿಡುವಂತೆ ಕೇಳಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಹೊರ್ಮುಜ್ನಲ್ಲಿ ನಮ್ಮದೇ ಆಡಳಿತ: ಇರಾನ್
ಅಮೆರಿಕ ನೀಡುವ ಹಣವನ್ನು ಪಡೆದು ಇರಾನ್ ಪರಮಾಣು ಯೋಜನೆಯನ್ನು ಕೈಬಿಟ್ಟರೆ, ಇನ್ನೊಂದು ಕಡೆ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ಕೇವಲ ಇರಾನ್ನ ಹಿಡಿತ ಮಾತ್ರ ಇರಬೇಕು, ತಾವು ತಮಗೆ ಬೇಕಾದ ಹಡಗುಗಳ ಮೇಲೆ ತೆರಿಗೆ ವಿಧಿಸುತ್ತೆವೆ. ಇದಕ್ಕೆ ಅಮೆರಿಕ ಯಾವುದೇ ರೀತಿಯ ತಕರಾರು ಮಾಡುವಂತಿಲ್ಲ ಎಂದು ಪ್ರಸ್ತಾಪ ಮಾಡಲಿದೆ ಎಂದು ತಿಳಿದು ಬಂದಿದೆ.
ಲೆಬನಾನ್ ಮೇಲೆ ದಾಳಿ ನಿಲ್ಲಿಸಿ!
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದಾಗ, ಇರಾನ್ ಪರ ನಿಂತ ಏಕೈಕ ಮಧ್ಯಪ್ರಾಚ್ಯ ದೇಶವೆಂದರೆ ಅದು ಲೆಬನಾನ್. ಆದರೆ, ಈಗ ಅಮೆರಿಕ ಇರಾನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತಿದ್ದೆ, ಇಸ್ರೇಲ್, ಲೆಬನಾನ್ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುತ್ತಲೇ ಇಲ್ಲ. ಹೀಗಾಗಿ ಶಾಶ್ವತ ಶಾಂತಿ ಸ್ಥಪನೆಯಾಗಬೇಕಾದರೆ ಇಸ್ರೇಲ್, ಲೆಬನಾನ್ ಮೇಲೆ ದಾಳಿ ಮಾಡುವುದನ್ನು ಮೊದಲು ನಿಲ್ಲಿಸಬೇಕೆಂದು ಇರಾನ್ ಪಟ್ಟು ಹಿಡಿಯಲಿದೆ.
ಲೆಬನಾನ್ ಮೇಲೆ ಇಸ್ರೇಲ್ ನಿರಂತರ ದಾಳಿ ನಡೆಸುತ್ತಿರುವುದು ಇರಾನ್ ಕೋಪಕ್ಕೆ ಕಾರಣವಾಗಿದೆ, ಹೀಗಾಗಿ ಹೊರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಬೆದರಿಕೆ ಒಡ್ಡಲಿದೆ ಎಂದು ಹೇಳಲಾಗುತ್ತಿದೆ. ಹೊರ್ಮುಜ್ ಜಲಸಂಧಿಯನ್ನು ಹೀಗೆ ಮುಚ್ಚಿದ್ದರೆ, ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಏರುಪೇರಾಗುವ ಕಾರಣ ಅಮೆರಿಕ ಒತ್ತಡಕ್ಕೆ ಸಿಲುಕಿದೆ ಎಂದು ಹೇಳಲಾಗುತ್ತಿದೆ.
ಕಾದು ಹೊಡೆಯುವ ಸಂಚು
ಇನ್ನು ಕೆಲ ಜಾಗತಿಕ ತಜ್ಞರ ಪ್ರಕಾರ, ಅಮೆರಿಕ ಒಂದು ದೇಶದ ಮೇಲೆ ಸೇಡನ್ನು ಇಟ್ಟುಕೊಂಡರೆ ಅವರನ್ನು ನಾಶ ಮಾಡುವವರೆಗೆ ಸುಮ್ಮನಿರುವುದಿಲ್ಲ. ಹೀಗಾಗಿ ಇರಾನ್ ಜೊತೆಗಿನ ಈ ಒಪ್ಪಂದ ಕೂಡ ತಾತ್ಕಾಲಿಕವಾಗಿದ್ದು, ಸರಿಯಾದ ಸಮಯ ನೋಡಿ ಇರಾನ್ ಮೇಲೆ ಮತ್ತೆ ಅಮೆರಿಕ ದಾಳಿ ಮಾಡಲಿದೆ ಎಂದೂ ಹೇಳಲಾಗುತ್ತಿದೆ, (ಏಜನ್ಸೀಸ್).