ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಈ ದಿನದ ಆಚರಣೆ ಸಲುವಾಗಿ ಇಂದು ವಿಶ್ವಾದ್ಯಂತ ವಿಶೇಷವಾಗಿ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಹಲವರು ಯೋಗಾಭ್ಯಾಸಗಳನ್ನು ನಡೆಸಿದ್ದಾರೆ.
ರಾಜ್ಯಾದ್ಯಂತವೂ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಇಂದು ಯೋಗಾಭ್ಯಾಸಗಳ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಿದ್ದಾರೆ. ವಿಶೇಷವೆಂದರೆ ಕನ್ನಡಿಗರೊಬ್ಬರ ನೇತೃತ್ವದಲ್ಲಿ ವಿದೇಶದಲ್ಲೂ ಯೋಗ ದಿನ ಆಚರಿಸಲಾಗಿದೆ.
ಕೆರಿಬಿಯನ್ ದ್ವೀಪರಾಷ್ಟ್ರದ ಡೊಮಿನಿಕದಲ್ಲಿ ಯೋಗ ದೇವರಾಜ್ ಅವರ ನೇತೃತ್ವದಲ್ಲಿ ಯೋಗ ದಿನ ಆಚರಿಸಲಾಗಿದೆ. ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಅಲ್ಲಿ ವಿಶೇಷವಾಗಿ ಬೆಂಬಲ ನೀಡಿದ ಶ್ರೀನಿವಾಸ ಕಾಳೆ ಅವರಿಗೆ ಇದೇ ವೇಳೆ ಸನ್ಮಾನ ಕೂಡ ಮಾಡಲಾಗಿದೆ.