H-1B: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿ H-1B ವೀಸಾ ಅರ್ಜಿಯ ಮೇಲೆ ವಾರ್ಷಿಕ $100,000(1 ಲಕ್ಷ ಡಾಲರ್) ಶುಲ್ಕ ವಿಧಿಸುವ ಘೋಷಣೆಗೆ ಸಹಿ ಹಾಕಿದ ಬಳಿಕ ಅಮೆರಿಕದಲ್ಲಿನ ಷೇರುಮಾರುಕಟ್ಟೆಯಲ್ಲಿ ಭಾರತೀಯ ಐಟಿ ಷೇರುಗಳು ಕುಸಿದಿವೆ.
ನ್ಯೂಯಾರ್ಕ್ ವಹಿವಾಟಿನಲ್ಲಿ ಇನ್ಫೋಸಿಸ್ ಎಡಿಆರ್‌ಗಳು 4.5% ರಷ್ಟು ಕುಸಿದರೆ, ವಿಪ್ರೋ 3.4% ರಷ್ಟು ಕುಸಿದಿದೆ. ಕಾಗ್ನಿಜೆಂಟ್ 4.3% ಮತ್ತು ಆಕ್ಸೆಂಚರ್ 1.3% ರಷ್ಟು ಕುಸಿದಿದ್ದು, ಇದು ಹೂಡಿಕೆದಾರರ ತಕ್ಷಣದ ಕಳವಳವನ್ನು ಪ್ರತಿಬಿಂಬಿಸುತ್ತದೆ.
ಭಾರತದ ಷೇರುಮಾರುಕಟ್ಟೆಯಲ್ಲಿ ಟಿಸಿಎಸ್, ವಿಪ್ರೋ, ಇನ್ಫೋಸಿಸ್, ಮತ್ತು ಅವರ ಇತರ ಲಾರ್ಜ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಷೇರುಗಳು ಸೋಮವಾರ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲಿದೆ. ನಿಫ್ಟಿ ಐಟಿ ಸೂಚ್ಯಂಕವು ಕಳೆದ ಉತ್ತಮ ವಾರವನ್ನು ಹೊಂದಿದ್ದು, ಷೇರುಗಳು 1% ರಿಂದ 3% ರಷ್ಟಿದೆ.
ಎಚ್-1 ವೀಸಾಗಳ(H-1) ಮೇಲಿನ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್ಗೆ ಏರಿಕೆ ಮಾಡಲಾಗಿದೆ ಎಂಬ ನಿಯಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಘೋಷಿಸಿದ್ದಾರೆ. ಈ ಮೂಲಕ ಭಾರತ ಉದ್ಯೋಗಿಗಳಿಗ ಮೇಲೆ ಭಾರೀ ಪರಿಣಾಮ ಬಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.(ಏಜೆನ್ಸೀಸ್)