ನ್ಯೂಸ್

9 ಲಕ್ಷ ರೂ ಖರ್ಚು ಮಾಡಿ ಮೂಗಿನ ಶಸ್ತ್ರಚಿಕಿತ್ಸೆ! ಅಂದ ಹೆಚ್ಚಾಗುತ್ತಿದ್ದಂತೆ ಗಂಡನಿಗೆ ಡಿವೋರ್ಸ್​ ಕೊಟ್ಟ ಪತ್ನಿ; Divorce

ಇನ್ನೂ ಈ ಘಟನೆ ನಡೆದಿರೋದು ಅಮೆರಿಕಾದ ಫಿಲಡೆಲ್ಫಿಯಾದಲ್ಲಿ. 30 ವರ್ಷದ ಡೆವಿನ್ ಐಕೆನ್ ಎಂಬಾ ಮಹಿಳೆ ತನ್ನ ಗಂಡನಿಗೆ ಡಿವೋರ್ಸ್​ ನೀಡಿದ್ದಾಳೆ. ಪತಿರಾಯ ಈಗ ಸೋಷಿಯಲ್​ ಮೀಡಿಯಾದ ಮುಂದೆ ಬಂದು ತನಗಾಗಿರುವ ಅನ್ಯಾಯವನ್ನು ಬಿಚ್ಚಿಟ್ಟಿದ್ದಾನೆ.

ಇನ್ನೂ ಇವರ ವಿಚ್ಛೇದನಕ್ಕೆ ಕಾರಣವೇನು ಎಂಬುದನ್ನು ತಿಳಿದರೆ ನೀವು ಒಂದು ಕ್ಷಣ ಶಾಕ್​ ಆಗ್ತೀರ. ಇಲ್ಲೊಬ್ಬ ಪತ್ನಿ ಸೊಟ್ಟ ಮೂಗನ್ನು ನೆಟ್ಟಗೆ ಮಾಡಲು ಪತಿಯಿಂದಲೇ 9 ಲಕ್ಷ ರೂಪಾಯಿ ಪಡೆದು, ಕೊನೆಗೆ ಆತನಿಗೆ ಕೈಕೊಟ್ಟು ಡಿವೋರ್ಸ್​ ನೀಡಿ ಹೋಗಿದ್ದಾಳೆ.

Viral vedeo| ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ಕಾರಣಗಳಿಂದ ಈ ಮದುವೆ ವಿಚ್ಛೇದನ ಪ್ರಕರಣಗಳು ಹೆಚ್ಚಾಗ್ತಿರೋದನ್ನು ನಾವು ಗಮನಿಸಿರಬಹುದು. ಎಷ್ಟೋ ಜನ ಮಹಿಳೆಯರು ಹಣದ ಆಸೆಗಾಗಿ ವಿವಾಹ ಮಾಡಿಕೊಂಡು ಕೊನೆಗೆ ತಮಗೆ ಬೇಕಾದ ಜೀವನಾಂಶವನ್ನು ತೆಗೆದುಕೊಂಡು ಗಂಡನಿಗೆ ಕೈ ಕೊಟ್ಟು ಓಡಿಹೋಗ್ತಾರೆ. ಅಂದಹಾಗೆ ಇಲ್ಲೊಂದು ಅಂತಹದ್ದೇ ಒಂದು ಘಟನೆ ನಡೆದಿದೆ.

ಪತಿ ತೊರೆಯಲು ಪತ್ನಿ ನಿರ್ಧರಿಸಿದ್ದೇಕೆ?

ಇನ್ನೂ ಈ ಸಂಬಂಧ ಡಿವೋರ್ಸ್​ ಕೊಟ್ಟ ಮಹಿಳೆ ಡೆವಿನ್ ಐಕೆನ್ ಪ್ರತಿಕ್ರಿಯಿಸಿದ್ದು, ಕಳೆದ ಏಳು ವರ್ಷಗಳಿಂದ ನಾನು ಅವನ ಜೊತೆ ತುಂಬಾ ನೋವಿನಿಂದ ಜೀವನ ನಡೆಸುತ್ತಿದ್ದೆ. ನಮ್ಮಿಬ್ಬರದ್ದು ಟಾಕ್ಸಿಕ್​ ರಿಲೇಷನ್​ ಆಗಿತ್ತು. ಆದ್ದರಿಂದ ನಾನು ನನ್ನ ಜೀವನದಲ್ಲಿ ಬದಲಾವಣೆ ತರಬೇಕೆಂದು ದೊಡ್ಡ ಹೆಜ್ಜೆ ಇಟ್ಟೆ, ಅದೀಗ ಅದು ಯಶಸ್ವಿಯಾಗಿದೆ. ಈ ಸಂಬಂಧದಿಂದ ಹೊರಕ್ಕೆ ಬಂದು ಖುಷಿಯಿಂದ ಜೀವಿಸುತ್ತಿದ್ದೇನೆ, ಇದು ಎಲ್ಲರಿಗೂ ಮಾದರಿಯಾಗಬೇಕು ಎಂದಿದ್ದಾಳೆ.

ನವೆಂಬರ್ 2024 ರಲ್ಲಿ ಮೂಗಿನ ಶಸ್ತ್ರಚಿಕಿತ್ಸೆ (ರೈನೋಪ್ಲ್ಯಾಸ್ಟಿ) ಮಾಡಿಸಿಕೊಂಡೆ. ಇದಕ್ಕೆ ಸುಮಾರು ಸುಮಾರು ರೂ. 9 ಲಕ್ಷ ವೆಚ್ಚ ಎಂದು ತಿಳಿಯಿತು. ಆದ್ದರಿಂದ ಪತಿಯ ಬಳಿ ಹಣ ಕೇಳಿದೆ. ಆತ ಕೊಟ್ಟ ಹಣದಿಂದ ಶಸ್ತ್ರಚಿಕಿತ್ಸೆ ಬಳಿಕ ಮೂಗು ಸುಂದರವಾಗಿದೆ. ನನ್ನ ಮೂಗಿನ ಆಕಾರ ಬದಲಾಗಿರುವುದರಿಂದ ನಾನೀಗ ಸುಂದರಿಯಾಗಿ ಕಾಣಿಸುತ್ತಿದ್ದೇನೆ. ಇದು ನನ್ನ ಆತ್ಮವಿಶ್ವಾಸವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಈ ಶಸ್ತ್ರಚಿಕಿತ್ಸೆಯು ಮೂಗಿನ ಬಗ್ಗೆ ನನಗೆ ಇದ್ದ ಅತಿದೊಡ್ಡ ನೋವನ್ನು ಹೋಗಲಾಡಿಸಲು ಸಹಾಯ ಮಾಡಿದೆ. ಆದ್ದರಿಂದ ಏಳು ವರ್ಷಗಳ ಅತೃಪ್ತದಾಯಕ ದಾಂಪತ್ಯವನ್ನು ಕೊನೆಗೊಳಿಸಲು ಧೈರ್ಯ ನೀಡಿದೆ ಎಂದಿದ್ದಾಳೆ.

ಶಸ್ತ್ರಚಿಕಿತ್ಸೆಯ ನಂತರ ಐಕೆನ್ ತನ್ನ ಆತ್ಮವಿಶ್ವಾಸ ಮೊದಲಿಗಿಂತ ಹೆಚ್ಚಾಯ್ತು ಎಂದು ಹೇಳಿಕೊಂಡಿದ್ದಾಳೆ. ಇದನ್ನು ಹೆಮ್ಮೆಯಿಂದ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಕೂಡ ಮಾಡಿದ್ದು, ತಮ್ಮ ಮೂಗಿನ ಮೊದಲ ರೂಪ ಮತ್ತು ಆಪರೇಷನ್​ ಬಳಿಕದ ಚಿತ್ರವನ್ನು ಹಂಚಿಕೊಂಡಿದ್ದಾಳೆ. ಹೇಗೆ ಪತಿಯಿಂದ ದುಡ್ಡು ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದೇನೆ ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾಳೆ. ಇನ್ನೂ ಈ ಪೋಸ್ಟ್​ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ.