ನವದೆಹಲಿ: ಬ್ಯಾಂಕಿಂಗ್ ಸೆಕ್ಟರ್ಗೂ ಇಂಡಸ್ಟ್ರಿಯಲ್ ಸೆಕ್ಟರ್ಗೂ ಬಹಳಷ್ಟು ವ್ಯತ್ಯಾಸವಿದೆ. ಎರಡೂ ಕ್ಷೇತ್ರದಲ್ಲಿ ಕೋಟಿ ಕೋಟಿ ರೂಪಾಯಿಯ ವ್ಯವಹಾರ ನಡೆಯುತ್ತದೆ. ಒಂದು ವೇಳೆ ಇಂಡಸ್ಟ್ರಿಯಲಿಸ್ಟ್ಗಳ ಕೈಗೆ ಬ್ಯಾಂಕಿಂಗ್ ವ್ಯವಹಾರವನ್ನೂ ಕೊಟ್ಟುಬಿಟ್ಟರೆ? ಇದನ್ನೂ ಓದಿ: ದೆಹಲಿಯಿಂದ ಗೋವಾಕ್ಕೆ ಹಾರಿದ ಸೋನಿಯಾ, ರಾಹುಲ್; ಕಾರಣವೇನು ಗೊತ್ತಾ?
ಹೌದು. ಇಂತದ್ದೊಂದು ಆಲೋಚನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಈಗಾಗಲೇ ಮಾಡಿದೆ. ಇಂಡಸ್ಟ್ರಿಯಲಿಸ್ಟ್ಗಳು ಬ್ಯಾಂಕ್ ತೆರೆಯಲು ಪರವಾನಗಿ ನೀಡಲು ಮುಂದಾಗಿದೆ. ಅದೇ ಹಿನ್ನೆಲೆಯಲ್ಲಿ ಟಾಟಾಸ್, ಬಿರ್ಲಾಸ್, ಅಂಬಾನಿ, ಮಹಿಂದ್ರಾ & ಮಹಿಂದ್ರಾ, ಆದಿತ್ಯಾ ಬಿರ್ಲಾ, ಟೆಕ್ ಮಹಿಂದ್ರಾ, ಟಾಟಾ ಸನ್, ಸನ್ ಫಾರ್ಮಾ ಸೇರಿ ಅನೇಕ ಸಂಸ್ಥೆಗಳು ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿವೆ. ಅವುಗಳಲ್ಲಿ ಕೆಲವು ಸಂಸ್ಥೆಗಳು ಅರ್ಜಿಗಳನ್ನು ಹಿಂಪಡೆದಿರುವುದಾಗಿಯೂ ತಿಳಿಸಲಾಗಿದೆ.
50 ಸಾವಿರ ಆಸ್ತಿ ಮೌಲ್ಯ ಹೊಂದಿರುವ ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್ಬಿಎಫ್ಸಿ) ಬ್ಯಾಂಕ್ ತೆರೆಯಬಹುದು ಎಂದು ಆರ್ಬಿಐ ಹೇಳಿದೆ. ನಮ್ಮದೇಶದಲ್ಲಿ ಹಲವಾರು ಎನ್ಬಿಎಫ್ಸಿಗಳು 50 ಸಾವಿರಕ್ಕಿಂತ ಹೆಚ್ಚು ಮೌಲ್ಯ ಹೊಂದಿವೆ. ಹಲವಾರು ಸಣ್ಣ ಪ್ರಮಾಣದ ಬ್ಯಾಂಕುಗಳಿಗಿಂತ ಇಂತಹ ಸಂಸ್ಥೆಗಳು ಹೆಚ್ಚು ಮೌಲ್ಯ ಹೊಂದಿವೆ ಮತ್ತು ವ್ಯವಹಾರ ನಡೆಸುತ್ತಿವೆ. ಹೀಗಿರುವಾಗ ಈ ಸಂಸ್ಥೆಗಳಿಗೆ ಪರವಾನಗಿ ಸಿಕ್ಕರೆ, ಅವುಗಳು ಟಾಪ್ ಬ್ಯಾಂಕ್ಗಳ ಸಾಲಿಗೆ ಸೇರಿ, ಸಣ್ಣ ಬ್ಯಾಂಕುಗಳಿಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಎನ್ಬಿಎಫ್ಸಿಗಳಿಗೆ ಬ್ಯಾಂಕಿಂಗ್ ಪರವಾನಗಿ ನೀಡುವುದಕ್ಕೂ ಮೊದಲು ನಮ್ಮ ಸಂವಿಧಾನದಲ್ಲಿ ಕೆಲ ಬದಲಾವಣೆ ಆಗಬೇಕಿದೆ. 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದ ನಂತರ ಮಾತ್ರವೇ ಪರವಾನಗಿ ನೀಡಬಹುದಾಗಿದೆ.ಇದನ್ನೂ ಓದಿ: ಮರದಲ್ಲಿ ನೇತಾಡುತ್ತಿತ್ತು 16 ವರ್ಷದ ಬಾಲಕಿ ದೇಹ; ಬೆಚ್ಚಿ ಬೀಳಿಸುತ್ತೆ ಈ ಹೈ ಸ್ಕೂಲ್ ಲವ್ ಸ್ಟೋರಿ
ಆರ್ಬಿಐ ಅನೇಕ ಕಠಿಣ ನಿಯಮಗಳನ್ನು ಪಾಲಿಸುತ್ತದೆ. ಪರವಾನಗಿ ವಿಚಾರದಲ್ಲಿಯೂ ಇದರ ನಿಯಮಗಳು ಅಷ್ಟು ಸುಲಭದ್ದಲ್ಲ. ಏಳು ವರ್ಷಗಳ ಹಿಂದೆ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮತ್ತು ಬಂಧನ್ ಬ್ಯಾಂಕ್ಗೆ ಪರವಾನಗಿ ನೀಡಿದ ನಂತರ ಯಾವುದೇ ಬ್ಯಾಂಕ್ಗೆ ಪರವಾನಗಿ ನೀಡಲಾಗಿಲ್ಲ. ಅದರೆ ಇದೀಗ ಇಂಡಸ್ಟ್ರಿಗಳನ್ನು ಬ್ಯಾಂಕ್ಗಳಿಗೆ ಸೇರಿಸಿಕೊಳ್ಳುವ ಮೂಲಕ ಪರವಾನಗಿ ನಿಯಮವನ್ನು ಅರ್ಬಿಐ ಸಡಿಲಿಸಲಿದೆ ಎನ್ನಲಾಗಿದೆ. (ಎಜೆನ್ಸೀಸ್)