ನ್ಯೂಸ್

ಪ್ರಿಯಕರನಿಗೆ ಕಳಿಸಿದ ಮೆಸೇಜ್​ನಲ್ಲಿತ್ತು ಅದೊಂದು ವಿಷಯ! ಪತಿಗೆ ಗುಂಡಿ ತೋಡಿದ ಪತ್ನಿಯ​ ಕರ್ಮಕಾಂಡವಿದು | Indore Couple

ಮೋಹನ್​ ಶೆಟ್ಟಿ

Indore Couple: ಟ್ವಿಸ್ಟ್​ ಮೇಲೆ ಟ್ವಿಸ್​! ಹನಿಮೂನ್​ ಸಲುವಾಗಿ ಮೇಘಾಲಯದ ಚಿರಾಪುಂಜಿಗೆ ಪ್ರಯಾಣಿಸಿದ್ದ ಇಂದೋರ್​ನ ದಂಪತಿ ಪ್ರಕರಣ ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ. ಸ್ವತಃ ಪೊಲೀಸರಿಗೆ ದೊಡ್ಡ ಸವಾಲಾಗಿ ಎದುರಾದ ಮಿಸ್ಸಿಂಗ್​ ಕೇಸ್​ನಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನೇ ಆರೋಪಿ ಎಂಬುದು ತನಿಖೆಯಲ್ಲಿ ಬಟಾಬಯಲಾಗಿದೆ. ಇದೆಲ್ಲದರ ನಡುವೆ ಮತ್ತೊಂದು ಶಾಕಿಂಗ್ ಸಂಗತಿ ವರದಿ ಮೂಲಕ ಹೊರಬಿದ್ದಿದೆ.

ಚಾಟಿಂಗ್​ ಚೆಲುವೆ

ಸೋನಮ್ ರಘುವಂಶಿಯೇ ಇಷ್ಟೆಲ್ಲ ಪಜೀತಿಗೆ ಕಾರಣ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಮದುವೆಯಾಗಿ ಮೂರೇ ದಿನಕ್ಕೆ ಪತಿಯ ಕೊಲೆಗೆ ಪ್ರಿಯಕರನೊಂದಿಗೆ ಸೇರಿ ಸಂಚು ಹೂಡಿದ ಪಾಪಿ ಸೋನಮ್, ಗಂಡನನ್ನು ಮೇಘಾಲಯದಲ್ಲಿ ಕೊಲ್ಲಲೇಬೇಕು ಎಂದು ಇನ್ನೂ ಮೂವರು ಕಿರಾತಕರನ್ನು ಹತ್ಯೆಗಾಗಿ ಹಣ ಕೊಟ್ಟು ಕರೆಸಿಕೊಂಡಿದ್ದಳು ಎಂದು ವರದಿಗಳು ಹೇಳಿವೆ.

ಪತ್ನಿಯನ್ನು ಕೊಲೆಗೈದು ತಾನು ಪ್ರಿಯಕರನೊಂದಿಗೆ ಲಕ್ಸುರಿ ಜೀವನ ನಡೆಸಬಹುದು ಎಂದು ತಿರುಕನ ಕನಸು ಕಂಡಿದ್ದ ಸೋನಮ್​ಗೆ ಇದೀಗ ಸೆರೆಮನೆ ವಾಸ ಮತ್ತು ಛೀಮಾರಿಗಳು ಮಾತ್ರ ಉಳಿದಿವೆ. ಕೊಲೆಗೆ ಹಲವು ದಿನಗಳಿಂದ ಸಂಚು ಹೂಡಿದ್ದ ರಾಜ್ ಕುಶ್ವಾ ಮತ್ತು ಸೋನಮ್​, ರಾಜು ರಘುವಂಶಿಯನ್ನು ಟ್ರೆಕ್ಕಿಂಗ್​ ನೆಪದಲ್ಲೇ ಹತ್ಯೆಗೈಯುವುದು ಉತ್ತಮ ಎಂದು ನಿರ್ಧರಿಸಿದ್ದರು. ಇಲ್ಲಿ ಮಾಸ್ಟರ್​ಮೈಂಡ್​ ಮೃತ ರಾಜು ಪತ್ನಿ. ಗಂಡನ ಹತ್ಯೆಗೆ ಸ್ಕೆಚ್ ಹಾಕುವ ಮುನ್ನ ಪ್ರಿಯಕರನಿಗೆ ಆಕೆ ಮಾಡಿದ್ದ ಚಾಟ್​ ಈಗ ಹೊರಬಿದ್ದಿದೆ.

"ನನ್ನ ಪತಿ ನನ್ನೊಂದಿಗೆ ನಡೆದುಕೊಳ್ಳುವ ರೀತಿ ನನಗೆ ಇಷ್ಟವಾಗ್ತಿಲ್ಲ. ನನ್ನನ್ನು ಆತ ಮುಟ್ಟಲು ಹತ್ತಿರ ಬರುವುದು ಕಿಂಚಿತ್ತು ಹಿಡಿಸುತ್ತಿಲ್ಲ" ಎಂದು ಸೋನಮ್ ಹೇಳಿರುವುದಾಗಿ ವರದಿಗಳು ತಿಳಿಸಿವೆ,(ಏಜೆನ್ಸೀಸ್).

ಏನಿದು ಪ್ರಕರಣ?

ಮೇ.23ರಂದು ಮೇಘಾಲಯದ ಚಿರಾಪುಂಜಿಗೆ ಹನಿಮೂನ್ ಸಲುವಾಗಿ ಪ್ರಯಾಣಿಸಿದ್ದ ಇಂದೋರ್​ನ ದಂಪತಿ ಕಾಣೆಯಾಗಿದ್ದರು. ಈ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿ ಎದುರಾಗಿತ್ತು. ದಂಪತಿಯ ಪೈಕಿ ಮೊದಲು ರಾಜು ಮೃತದೇಹ ಝರಿ ನಡುವೆ ಪತ್ತೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಜೂ. 02ರಂದು ಸಿಕ್ಕಿತು. ಈ ಕೇಸ್​ನಲ್ಲಿ ಕಾಣೆಯಾಗಿದ್ದ ಪತ್ನಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕಡೆಗೂ ಆಕೆಯ ಕೊಲೆಗಾತಿ ಎಂಬುದು ಇಬ್ಬರ ಬಂಧನದ ಬಳಿಕ ಸ್ಪಷ್ಟವಾಗಿದೆ. ಕೊಲೆ ಪ್ರಕರಣದಲ್ಲಿ ಸೋನಮ್​ ಮತ್ತು ಆಕೆಯ ಪ್ರಿಯಕರ ರಾಜ್​ ಸೇರಿದಂತೆ ಒಟ್ಟು ಐವರನ್ನು ಖಾಕಿ ಬಂಧಿಸಿ, ತನಿಖೆಗೆ ಒಳಪಡಿಸಿದೆ,(ಏಜೆನ್ಸೀಸ್).