Asim Munir : ಅಮೆರಿಕದ ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಪಾಕಿಸ್ತಾನಿ ಸಮುದಾಯದ ಕಾರ್ಯಕ್ರಮದಲ್ಲಿ ಭಾರತವನ್ನು ಹೊಳೆಯುವ ಮರ್ಸಿಡಿಸ್ಗೆ ಮತ್ತು ಪಾಕಿಸ್ತಾನವನ್ನು ಡಂಪ್ ಟ್ರಕ್ಗೆ ಹೋಲಿಸಿದ್ದಕ್ಕಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತವನ್ನು ಹೋಲಿಸಲೆಂದು ಮುನೀರ್, ಫೆರಾರಿಯಂತಹ ಹೆದ್ದಾರಿಯಲ್ಲಿ ಭಾರತವು ಮರ್ಸಿಡಿಸ್ ಕಾರಿನಂತೆ ಹೊಳೆಯುತ್ತಿದೆ. ಆದರೆ, ನಾವು ಜಲ್ಲಿಕಲ್ಲುಗಳಿಂದ ತುಂಬಿದ ಡಂಪ್ ಟ್ರಕ್. ಟ್ರಕ್ ಕಾರಿಗೆ ಡಿಕ್ಕಿ ಹೊಡೆದರೆ, ಸೋತವರು ಯಾರು? ಎಂದು ಮುನೀರ್ ಹೇಳಿದ್ದರು.
ಫ್ಲೋರಿಡಾದ ಟ್ಯಾಂಪಾದಲ್ಲಿ ಪಾಕಿಸ್ತಾನಿ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನಿ ಸೇನಾ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಮುನೀರ್ ಪ್ರಸ್ತುತ ಅಮೆರಿಕ ಭೇಟಿಯಲ್ಲಿದ್ದಾರೆ.
ಪಾಕಿಸ್ತಾನಿ ಸೇನಾ ಮುಖ್ಯಸ್ಥ ಮುನೀರ್ ಅವರ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯದ ಅಲೆಯನ್ನು ಹುಟ್ಟುಹಾಕಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು, ಡಂಪ್ ಟ್ರಕ್ ಮರ್ಸಿಡಿಸ್ ಹತ್ತಿರ ಬರುವ ಮೊದಲೇ ಉರುಳುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಪಾಕಿಸ್ತಾನಿ ಮಿಲಿಟರಿಯನ್ನು ಟ್ರೋಲ್ ಮಾಡುವ ಮೀಮ್ಸ್ ಮತ್ತು ಪೋಸ್ಟ್‌ಗಳಿಂದ ಸಾಮಾಜಿಕ ಮಾಧ್ಯಮಗಳು ತುಂಬಿ ತುಳುಕುತ್ತಿವೆ.
ಮುನೀರ್ ಹೇಳಿಕೆಯಲ್ಲಿರುವ ಏಕೈಕ ಸತ್ಯವೆಂದರೆ ಭಾರತವು ಮರ್ಸಿಡಿಸ್, ಮತ್ತು ಪಾಕ್ ಡಂಪ್ ಟ್ರಕ್. ಉಳಿದದ್ದು ಭ್ರಮೆ ಎಂದು ಒಬ್ಬ ಎಕ್ಸ್ ಬಳಕೆದಾರರು ಬರೆದಿದ್ದರು. ಕನಿಷ್ಠ ಪಕ್ಷ ಅವರ ವಾಸ್ತವವನ್ನು ತಿಳಿದುಕೊಳ್ಳಿ. ಪಾಕಿಸ್ತಾನ ಡಂಪ್ ಟ್ರಕ್, ಬೇರೇನೂ ಅಲ್ಲ. ವಿಫಲ ಮಾರ್ಷಲ್ ಅವರು ಶೋಚನೀಯರು ಎಂದು ಒಪ್ಪಿಕೊಂಡರು ಎಂದು ಮತ್ತೊಬ್ಬ ಎಕ್ಸ್ ಬಳಕೆದಾರರು ಬರೆದಿದ್ದಾರೆ.(ಏಜೆನ್ಸೀಸ್)