ನ್ಯೂಸ್

ದೇಶದಲ್ಲಿ ಒಂದೇ ದಿನ 40 ಸಾವಿರಕ್ಕೂ ಹೆಚ್ಚು ಕರೊನಾ ಪ್ರಕರಣಗಳು; ಮೂರೇ ದಿನದಲ್ಲಿ ಲಕ್ಷ ದಾಟಿತು

ನವದೆಹಲಿ: ದೇಶದಲ್ಲಿ ಇಂದು ಒಂದೇ ದಿನ 40, 425 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 11 ಲಕ್ಷದ ಗಡಿ ದಾಟಿದೆ. ಹಾಗೇ ಕಳೆದ 24 ಗಂಟೆಯಲ್ಲಿ681 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದೇಶದ ಕರೊನಾ ಸೋಂಕಿತರ ಸಂಖ್ಯೆ 11,18,043ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 27,497. ಕರೊನಾದಿಂದ ಗುಣಮುಖರಾದವರು 7,00,087 ಮಂದಿ ಹಾಗೂ ಸಕ್ರಿಯ ಪ್ರಕರಣಗಳು 3,90,459 ಎಂದು ಸಚಿವಾಲಯ ವರದಿ ನೀಡಿದೆ.

ಹಾಗೇ, ಕರೊನಾದಿಂದ ಶೇ.62.62 ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಸಾವಿನ ದರ ಶೇ.2.46 ಇದೆ. ಜು.17ರಂದು ದೇಶದ ಕರೊನಾ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಿತ್ತು. ಆದರೆ ಮೂರೇ ದಿನದಲ್ಲಿ ಮತ್ತೊಂದು ಲಕ್ಷಕ್ಕೆ ಏರಿಕೆಯಾಗಿದೆ. ಅದರಲ್ಲೂ ಇದೇ ಮೊದಲ ಬಾರಿಗೆ 24 ಗಂಟೆಯಲ್ಲಿ 40,000 ಪ್ರಕರಣಗಳು ಪತ್ತೆಯಾಗಿವೆ. (ಏಜೆನ್ಸೀಸ್​)