ನ್ಯೂಸ್

ಭಾರತೀಯರೇ ನನ್ನ ಪೇಜ್​ ಬಿಟ್ಟು ತೊಲಗಿ, ಇಲ್ಲವೇ ಕಾನೂನು ಕ್ರಮ ಎದುರಿಸಿ: ಕೆಂಡಕಾರಿದ ನೀಲಿತಾರೆ

ನವದೆಹಲಿ: ಸೂಪರ್​ಕಾರು ರೇಸರ್​ ಆಗಿದ್ದು ಇದೀಗ ನೀಲಿಚಿತ್ರಗಳ ತಾರೆಯಾಗಿ ಪರಿವರ್ತನೆಗೊಂಡಿರುವ ರೀನಿ ಗ್ರೇಸಿ ಭಾರತೀಯರ ಮೇಲೆ ಕೆಂಡ ಕಾರುತ್ತಿದ್ದಾರೆ. ತಮ್ಮ ಫೋಟೋಗಳನ್ನು ಬಳಸಿಕೊಂಡು, ನಕಲಿ ವೆಬ್​ಪೇಜ್​ ನಿರ್ಮಿಸುತ್ತಿರುವುದು ಇವರ ಕೋಪಕ್ಕೆ ಕಾರಣವಾಗಿದೆ. ಆದ್ದರಿಂದ ಅವರು, ಭಾರತೀಯರೇ, ನನ್ನ ಪೇಜ್​ ಬಿಟ್ಟು ತೊಲಗಿ... ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಪೋರ್ನ್​ ಚಿತ್ರಗಳೆಲ್ಲವೂ ಕಾಪಿರೈಟ್​ಗೆ ಒಳಪಟ್ಟಿವೆ. ಅನುಮತಿ ಇಲ್ಲದೆ ಇವನ್ನು ಬಳಸುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಭಾರತೀಯರು ನನ್ನ ಚಿತ್ರಗಳನ್ನು ಅಕ್ರಮವಾಗಿ ಕದ್ದು, ಪ್ರತ್ಯೇಕವಾದ ವೆಬ್​ಪೇಜ್​ಗಳನ್ನು ರಚಿಸಿಕೊಂಡು ವಂಚಿಸುತ್ತಿದ್ದಾರೆ. ಆದ್ದರಿಂದ, ನನ್ನ ವೆಬ್​ಪೇಜ್​ನಲ್ಲಿರುವ ಎಲ್ಲ ಭಾರತೀಯರನ್ನು ಗುರುವಾರ ರಾತ್ರಿ ಕಿತ್ತೊಗೆಯಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನನಗೆ ಈಗ ಭಾರತೀಯರನ್ನು ಕಂಡರೆ ಅಸಹ್ಯವಾಗುತ್ತಿದೆ... ನೀವೇನಾದರೂ ನನ್ನ ಚಿತ್ರಗಳನ್ನು ಕದ್ದಿದ್ದರೆ ಅಥವಾ ಅಕ್ರಮವಾಗಿ ಶೇರ್​ ಮಾಡಿದ್ದರೆ, ನಿಮ್ಮ ಮುಖಕ್ಕೆ ಇಷ್ಟು... ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ... ಇನ್ಮುಂದೆ ಭಾರತೀಯರಿಗೆ ಯಾರಿಗೂ ನನ್ನ ಪೇಜ್​ಗೆ ಆಹ್ವಾನವಿಲ್ಲ... ನನ್ನ ಪೇಜ್​ನಿಂದ ಎಲ್ಲ ಭಾರತೀಯರನ್ನೂ ಇಂದು ರಾತ್ರಿ ಕಿತ್ತೊಗೆಯಲಿದ್ದೇನೆ... ಎಂದು ತಮ್ಮ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.

14 ವರ್ಷ ಸರ್ವ ಮಹಿಳಾ ಸೂಪರ್​ಕಾರು ರೇಸರ್​ ಆಗಿದ್ದೂ ಹೆಚ್ಚಿನ ಆದಾಯ ಗಳಿಸಿಕೊಳ್ಳಲು ರೀನಿ ಗ್ರೇಸಿ ಅವರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ, ಆ ವೃತ್ತಿಯನ್ನು ಬಿಟ್ಟು ಅವರು ನೀಲಿಚಿತ್ರ ತಾರೆಯಾಗಿ ರೂಪಾಂತರಗೊಂಡಿದ್ದಾರೆ. ಇದೀಗ ತಮ್ಮ ವೆಬ್​ಪೇಜ್​ನಲ್ಲಿ ಪ್ರಚೋದನಾಕಾರಿ ಫೋಟೋಗಳು ಹಾಗೂ ವಿಡಿಯೋಗಳನ್ನು ಪ್ರಕಟಿಸುವ ಮೂಲಕ ವಾರಕ್ಕೆ 20 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ.

ತಮ್ಮ ಈ ಗಳಿಕೆಯಿಂದ ಇದೀಗ 30 ವರ್ಷಗಳಷ್ಟು ಹಳೆಯ ಸಾಲವನ್ನು ಇನ್ನೊಂದು ವರ್ಷದಲ್ಲಿ ತೀರಿಸುವುದಾಗಿ ಹೇಳಿಕೊಂಡಿದ್ದಾರೆ.