ನ್ಯೂಸ್

ಕುಟುಂಬವಿಲ್ಲ, ಆಂಗ್ಲ ಭಾಷೆ ಗೊತ್ತಿಲ್ಲ! ಮೂರು ಗಂಟಿಗಾಗಿ ಯುಎಸ್​ಗೆ ಬಂದಿಳಿದ ಭಾರತೀಯ ಯುವತಿ ಕಣ್ಮರೆ​ | Indian Woman

ಮೋಹನ್​ ಶೆಟ್ಟಿ

Indian Woman: ಭಾರತದಿಂದ ಅಮೆರಿಕಾಗೆ ಹಾರಿ ಬಂದ 24 ವರ್ಷದ ಯುವತಿಯೊಬ್ಬಳು ಯುಎಸ್​ಗೆ ಬಂದಿಳಿದ ಕೆಲವೇ ದಿನಗಳಲ್ಲಿ ನಾಪತ್ತೆಯಾದ ಘಟನೆ ಸದ್ಯ ಸ್ಥಳೀಯ ಪೊಲೀಸ್ ಅಧಿಕಾರಿಯಗಳನ್ನು ಭಾರೀ ಗೊಂದಲಕ್ಕೆ ದೂಡಿದೆ. ಅರೆಂಜ್​ ಮ್ಯಾರೇಜ್​ ಮಾಡಿಕೊಳ್ಳುವ ಉದ್ದೇಶದಲ್ಲಿ ಆಗಮಿಸಿದ ಯುವತಿ, ಸಿಸಿಟಿವಿ ಕಣ್ಣಿಗೆ ಸಿಗದಂತೆ ಕಣ್ಮರೆಯಾಗಿರುವುದು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಮಾಡಿದೆ.

ಆಂಗ್ಲ ಭಾಷೆ ಮಾತಾಡುತ್ತಿರಲಿಲ್ಲ!

ಪ್ರಾಥಮಿಕ ವರದಿಯ ಪ್ರಕಾರ, ಯುವತಿ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಮೆರಿಕಾಗೆ ಆಗಮಿಸಿದ್ದಳು ಎನ್ನಲಾಗಿದೆ. ಆದರೆ, ಯುಎಸ್​ನಲ್ಲಿ ಆಕೆಗೆ ಯಾರೊಬ್ಬರು ಗೊತ್ತಿರಲಿಲ್ಲ. ಮತ್ತು ಇಲ್ಲಿ ಸಂಬಂಧಿಕರೂ ಇರಲಿಲ್ಲ. ಯುವತಿಗೆ ಇಂಗ್ಲಿಷ್​ ಭಾಷೆಯಲ್ಲಿ ಮಾತನಾಡಲು ಬರುತ್ತಿರಲಿಲ್ಲ. ಕಾಣೆಯಾದ ಯುವತಿಯನ್ನು ಸಿಮ್ರಾನ್ ಎಂದು ಗುರುತಿಸಲಾಗಿದೆ. ಜೂನ್ 20ರಂದು ಭಾರತದಿಂದ ನ್ಯೂಜೆರ್ಸಿಗೆ ಬಂದ ಕೆಲವೇ ಕೆಲವು ದಿನಗಳ ಬಳಿಕ ಆಕೆ ನಾಪತ್ತೆಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಸಿಸಿಟಿವಿ ದೃಶ್ಯಾವಳಿ

ಆಕೆ ಕೊನೆಯ ಬಾರಿಗೆ ಕಾಣಿಸಿಕೊಂಡಿರುವುದು ಸ್ಥಳೀಯ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ದೃಶ್ಯಾವಳಿಗಳನ್ನು ಪರಿಶೀಲಿಸಿದ ಲಿಂಡೆನ್ವೋಲ್ಡ್ ಪೊಲೀಸರು, ಸಿಮ್ರಾನ್​ ತನ್ನ ಫೋನ್ ಚೆಕ್ ಮಾಡುತ್ತಿರುವುದು ಮತ್ತು ಯಾರಿಗೋ ಕಾಯುತ್ತಿರುವಂತೆ ಕಂಡುಬಂದಿದೆ. ವಿಡಿಯೊದಲ್ಲಿ ಯುವತಿ ಯಾವುದೋ ತೊಂದರೆಯಲ್ಲಿ ಸಿಲುಕಿರುವಂತೆ ತೋರುತ್ತಿಲ್ಲ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಭಾರತದಲ್ಲಿರುವ ಸಿಮ್ರಾನ್​ ಕುಟುಂಬ ಸದಸ್ಯರನ್ನೂ ತಲುಪಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ಸಿಮ್ರಾನ್​ ಎತ್ತರ, ಮೈಬಣ್ಣ, ಕೊನೆಯ ಬಾರಿಗೆ ತೊಟ್ಟ ಉಡುಗೆಯ ಬಣ್ಣ ಸೇರಿದಂತೆ ಇತರೆ ಸಂಕೇತಗಳನ್ನು ಮಿಸ್ಸಿಂಗ್​ ಪೋಸ್ಟ್​ರ್​ನಲ್ಲಿ ಹಾಕಲಾಗಿದೆ. ಯುವತಿಯ ಇರುವಿಕೆಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕರೆ ಕೂಡಲೇ ಲಿಂಡೆನ್ವೋಲ್ಡ್ ಪೊಲೀಸ್ ಡಿಟೆಕ್ಟಿವ್ ಜೋ ಟೊಮಸೆಟ್ಟಿಯನ್ನು ಸಂಪರ್ಕಿಸಲು ಕೋರಲಾಗಿದೆ,(ಏಜೆನ್ಸೀಸ್).