ನ್ಯೂಸ್

ಮಿಜೋರಾಂ ಸೇತುವೆ ಕುಸಿತ; ಸಂತ್ರಸ್ತರ ಕುಟುಂಬಗಳಿಗೆ 10 ಲಕ್ಷ ರೂ. ಘೋಷಿಸಿದ ರೈಲ್ವೆ ಸಚಿವಾಲಯ

ಗುವಾಹಟಿ: ಬುಧವಾರ (ಆಗಸ್ಟ್​ 23) ಮಿಜೋರಾಂನ ಕುರುಂಗ್ ನದಿಯ ಮೇಲಿನ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು ಸಾವನ್ನಪ್ಪಿದ ಮೃತ ಕುಟುಂಬಕ್ಕೆ ರೈಲ್ವೆ ಸಚಿವಾಲಯವು ಇದೀಗ 10 ಲಕ್ಷ ರೂ. ಹಣವನ್ನು ಪರಿಹಾರವಾಗಿ ಘೋಷಿಸಿದೆ ಎಂದು ಈಶಾನ್ಯ ಗಡಿ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಹೇಳಿದ್ದಾರೆ.

ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಗಳು, "ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ಬೈರಾಬಿಯಿಂದ ಸಾಯಿರಂಗಕ್ಕೆ ಸಂಪರ್ಕ ಕಲ್ಪಿಸುವ 196ರ ಸೇತುವೆ ನಿರ್ಮಾಣದ ಸಮಯದಲ್ಲಿ ಸಾಯಿರಂಗ್ ಪ್ರದೇಶದಲ್ಲಿ ಕುಸಿತ ಕಂಡಿದೆ. ಗುತ್ತಿಗೆದಾರರು ಸೇತುವೆಯ ಗರ್ಡರ್ ಅನ್ನು ಪ್ರಾರಂಭಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ" ಎಂದು ಹೇಳಿದರು.

“ರೈಲ್ವೆ ಸಚಿವಾಲಯವು ಮುಂದಿನ ಮೃತರ ಕುಟುಂಬಕ್ಕೆ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಮತ್ತು ಸಣ್ಣ ಗಾಯಾಳುಗಳಿಗೆ 50,000 ರೂ. ಹಣವನ್ನು ಪರಿಹಾರವಾಗಿ ಘೋಷಿಸಿದೆ ಎಂದು ಸಬ್ಯಸಾಚಿ ಹೇಳಿದರು,(ಏಜೆನ್ಸೀಸ್).