ನ್ಯೂಸ್

ಇವಳೆಂಥಾ ಅಮ್ಮ? ಬಾತ್​ ರೂಂನಲ್ಲಿ ಹುಟ್ಟಿದ ಮಗುವನ್ನು ಹೀಗೆ ಮಾಡೋದಾ?

ಇವಳೆಂಥಾ ಅಮ್ಮ ಎನ್ನಿಸದೆ ಇರದು ಈ ಸುದ್ದಿ ಓದಿದರೆ ! ಸ್ನಾನಕ್ಕೆಂದು ಹೋದವಳಿಗೆ ಅಲ್ಲೇ ಮಗು ಹುಟ್ಟಿದೆ. ಆದರೆ ಈ ಮಹಿಳೆ ಹೆದರಿ ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ...

ಅಮೆರಿಕದಲ್ಲಿ ಘಟನೆ ನಡೆದಿದ್ದು, ನ್ಯೂಯಾರ್ಕ್​ ಪೋಸ್ಟ್​ ಈ ಸುದ್ದಿಯನ್ನು ವರದಿ ಮಾಡಿದೆ. ಮಹಿಳೆಯ ಹೆಸರು ಸಬಿತಾ ಡೂಕ್ರಾಮ್​. 23 ವರ್ಷದ ಈಕೆ ನ್ಯೂಯಾರ್ಕ್​​ನ ಕ್ವೀನ್ಸ್​ ನಗರದಲ್ಲಿ ವಾಸವಾಗಿದ್ದಳು.

ಶನಿವಾರ ಸ್ನಾನಕ್ಕೆಂದು ಹೋದ ಇವಳಿಗೆ ಬಾತ್​ರೂಂನಲ್ಲಿಯೇ ಹೆರಿಗೆಯಾಗಿದೆ. ಮಗು ಹೊರಬರುತ್ತಿದ್ದಂತೆ ತೀವ್ರ ಗಾಬರಿಗೆ ಒಳಗಾದ ಸಬಿತಾ ಅದನ್ನು ತೆಗೆದು ಕಿಟಕಿಯಿಂದ ಆಚೆಗೆ ಎಸೆದಿದ್ದಾಳೆ. ನಂತರ ಸ್ನಾನದ ಮನೆಯನ್ನು ಸ್ವಚ್ಛಗೊಳಿಸಿ, ಅಲ್ಲಿಂದ ಈಚೆಗೆ ಬಂದಿದ್ದಾಳೆ.

ಹೊರಗೆ ಬಿದ್ದ ಪುಟ್ಟ ಮಗು ಅದೃಷ್ಟವಶಾತ್​ ಬದುಕುಳಿದಿದೆ. ಶಿಶು ಅಳುವುದನ್ನು ಕೇಳಿದ ಪಕ್ಕದ ಮನೆಯವರು ಅದನ್ನು ರಕ್ಷಿಸಿ, ಆರೋಗ್ಯ ಹಾಗೂ ಪೊಲೀಸ್​ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಇದೀಗ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ಮಿದುಳಿನ ಒಳಗೆ ರಕ್ತಸ್ರಾವ ಆಗುತ್ತಿದ್ದು, ಊದುಕೊಂಡಿದೆ. ವೆಂಟಿಲೇಟರ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:ಅಶ್ಲೀಲ ಫೋಟೋಗಾಗಿ ವಿದ್ಯಾರ್ಥಿನಿಯರ ದುಂಬಾಲು ಬಿದ್ದಿ ಧರ್ಮಬೋಧಕನಿಗೆ ಎದುರಾಯ್ತು ಕಂಟಕ!

ಅದಾದ ಬಳಿಕ ಸಬಿತಾಳನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಕೆಲವು ತಪಾಸಣೆ ಮಾಡಲಾಗಿದೆ. ನಂತರ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ನಾನು ಬಾತ್​ರೂಂಗೆ ಹೋಗಿದ್ದೆ. ಅಲ್ಲಿಯೇ ಮಗು ಹೊರಬಂದಿತು. ನನಗೆ ಏನಾಯಿತು ಎಂಬುದೇ ಗೊತ್ತಾಗಲಿಲ್ಲ. ಕ್ಷಮಿಸಿ, ತೀವ್ರ ಗಾಬರಿಯಾಗಿ ಅದನ್ನು ಎಸೆದುಬಿಟ್ಟೆ. ಮಗುವನ್ನು ಪರೀಕ್ಷಿಸಲೂ ಇಲ್ಲ. ನಂತರ ಸ್ನಾನ ಮಾಡಿ, ಮಲಗಿಬಿಟ್ಟೆ ಎಂದು ಸಬಿತಾ ಪೊಲೀಸರಿಗೆ ಉತ್ತರಿಸಿದ್ದಾಳೆ. ಇದನ್ನೂ ಓದಿ: ಅಂಕಲ್​ನಿಂದಲೇ ನಿರಂತರ ಅತ್ಯಾಚಾರ: ಗರ್ಭಿಣಿ ಬಾಲಕಿಯ ಗರ್ಭಪಾತದ ವೇಳೆ ನಡೆಯಿತು ದುರಂತ!

ಸದ್ಯ ಸಬಿತಾ ವಿರುದ್ಧ ಕೊಲೆ ಯತ್ನ ಕೇಸ್​ ದಾಖಲಾಗಿದೆ. ವಿಚಾರಣೆ ವೇಳೆ ಪೊಲೀಸರ ದಾರಿ ತಪ್ಪಿಸಲು ವಿರೋಧಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದೂ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್​)