Singapore: ಅಪಾರ್ಟ್‌ಮೆಂಟ್ ಬ್ಲಾಕ್ ಬಳಿ ಪಾರಿವಾಳಗಳಿಗೆ ಆಹಾರ ನೀಡಿದ್ದಕ್ಕಾಗಿ 70 ವರ್ಷದ ಭಾರತೀಯ ಮೂಲದ ಮಹಿಳೆಗೆ 79,800 ರೂ. ದಂಡ ವಿಧಿಸಿದ ಘಟನೆ ಬುಧವಾರ (ಮೇ.28) ಸಿಂಗಾಪುರದಲ್ಲಿ ನಡೆದಿದೆ.
ಸಿಂಗಪುರದ ವನ್ಯಜೀವಿ ಕಾಯ್ದೆಯ ಪ್ರಕಾರ ವನ್ಯಜೀವಿ ನಿರ್ವಹಣಾಧಿಕಾರಿಯ ಲಿಖಿತ ಅನುಮತಿಯಿಲ್ಲದೇ ಸಾಮಾನ್ಯ ಜನರು ವನ್ಯ ಜೀವಿಗಳಿಗೆ ಆಹಾರ ನೀಡುವುದು ಅಪರಾಧವಾಗಿದೆ.
ಇದನ್ನೂ ಓದಿ: ‘ಹನುಮದೇವರು ಕನ್ನಡ ಕಲಿಪುಂಗವ ಇಷ್ಟು ಅರ್ಥವಾದರೆ ಸಾಕಲ್ಲವೆ’; ಕಮಲ್ ಹಾಸನ್ಗೆ ‘ಜಗ್ಗೇಶ್’ ತಿರುಗೇಟು|kamal-haasan
ಅಪಾರ್ಟ್‌ಮೆಂಟ್ ಬಳಿ ಪಾರಿವಾಳಗಳಿಗೆ ಆಹಾರ ನೀಡುವುದು ಅಪರಾಧ ರಾಷ್ಟ್ರೀಯ ಉದ್ಯಾನ ಮಂಡಳಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಇದರ ಹೊರತಾಗಿಯೂ ಭಾರತೀಯ ಮೂಲದ 70 ವರ್ಷದ ಮಹಿಳೆ ಸನ್ಮುಗಮನಾಥನ್ ಶಾಮಲ ತನ್ನ
ಅಪಾರ್ಟ್‌ಮೆಂಟ್ ಬಳಿ ಪಾರಿವಾಳಗಳಿಗೆ ಕಾಳು ಹಾಕಿದ್ದಕ್ಕಾಗಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು.
ಅಷ್ಟೇ ಅಲ್ಲದೆ ರಾಷ್ಟ್ರೀಯ ಉದ್ಯಾನ ಮಂಡಳಿಯು ಪಾರಿವಾಳಗಳನ್ನು ಸೆರೆ ಹಿಡಿಯುವಾಗ ಅವರಿಗೆ ಅಡ್ಡಿಪಡಿಸಿದ ಆರೋಪ ಸಹ ಶಾಮಲ ಮೇಲಿತ್ತು.
ಹೀಗಾಗಿ ಸಿಂಗಾಪುರದ ನ್ಯಾಯಾಲಯವು 2 ದಿನಗಳ ನ್ಯಾಯಾಂಗ ಬಂಧನ ಅಥವಾ 79,800 ರೂ. ದಂಡ ವಿಧಿಸಿತ್ತು. ಆದರೆ ವಯೋಸಹಜ ಖಾಯಿಲೆಯ ಕಾರಣದಿಂದ ನ್ಯಾಯಾಂಗ ಬಂಧನ ಸಾಧ್ಯವಿಲ್ಲವೆಂದು ಶಾಮಲ ದಂಡ ಪಾವತಿಸಲು ನಿರ್ಧರಿಸಿದ್ದಾರೆ. (ಏಜೆನ್ಸೀಸ್)